
ಬೆಂಗಳೂರು: ಆತ್ಮೀಯ ಸ್ನೇಹಿತ, ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರನ್ನು ಕಳೆದುಕೊಂಡಿರುವುದು ‘ತುಂಬಾ ನೋವಾಗಿದೆ’ ಎಂದು ಐಟಿ ಉದ್ಯಮದ ಹಿರಿಯ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಗುರುವಾರ ಹೇಳಿದ್ದಾರೆ.
ನೈತಿಕ ವಿಷಯಗಳಲ್ಲಿ ನನಗೆ ಕೆಲವು ಅಸ್ಪಷ್ಟತೆ ಮತ್ತು ಗೊಂದಲಗಳಿದ್ದಾಗಲೆಲ್ಲಾ ರತನ್ ಟಾಟಾ ಅವರು ನನಗೆ ಮಾದರಿಯಾಗಿದ್ದರು ಎಂದು 78 ವರ್ಷದ ನಾರಾಯಣ ಮೂರ್ತಿ ಹೇಳಿದ್ದಾರೆ.
2020 ರಲ್ಲಿ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ನಾರಾಯಣ ಮೂರ್ತಿ ಅವರು ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸುವ ಮೂಲಕ ಅವರ ಆಶೀರ್ವಾದ ಬಯಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ರತನ್ ಟಾಟಾ ಅವರು ನಿನ್ನೆ ಬುಧವಾರ ತಡರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಇಂದು ನಡೆಯಲಿರುವ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯಲ್ಲಿ ಅಮಿತ್ ಶಾ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
Advertisement