ನಾಳೆ ವಿಜಯದಶಮಿ: ಐತಿಹಾಸಿಕ ಜಂಬೂ ಸವಾರಿಗೆ ಮೈಸೂರು ನಗರ ಸಜ್ಜು!

ಅಂಬಾ ವಿಲಾಸ ಅರಮನೆ ಆವರಣದ ಬಲರಾಮ ದ್ವಾರದ ಮೇಲೆ ಮಧ್ಯಾಹ್ನ 1-41ರಿಂದ 2-10 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ವಿಜಯ ದಶಮಿ ಮೆರವಣಿ ಆರಂಭವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಹತ್ತು ದಿನಗಳ ನಾಡಹಬ್ಬ ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ವಿಜಯ ದಶಮಿ ದಿನವಾದ ನಾಳೆ ತೆರೆ ಬೀಳಲಿದ್ದು, ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ತುದಿಗಾಲಲ್ಲಿ ನಿಂತಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ.

ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ನಡೆಯುತ್ತಿದ್ದು, ರಾಜ್ಯದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸಲಾಗುತ್ತಿದೆ.ಐತಿಹಾಸಿಕ ಜಂಬೂ ಸವಾರಿಗೆ ಅಂತಿಮ ಅಂತದ ಸಿದ್ದತಾ ಕಾರ್ಯಗಳು ನಡೆಯುತ್ತಿವೆ. 750 ಕೆಜಿ ತೂಕದ ಅಂಬಾರಿಯಲ್ಲಿ ವಿರಾಜಮಾನಾಳದ ಅಧಿದೇವತೆ ಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತ 'ಅಭಿಮನ್ಯು' ನೇತೃತ್ವದ ಗಜಪಡೆ ಸಾಗಲಿದೆ.

ಅಂಬಾ ವಿಲಾಸ ಅರಮನೆ ಆವರಣದ ಬಲರಾಮ ದ್ವಾರದ ಮೇಲೆ ಮಧ್ಯಾಹ್ನ 1-41ರಿಂದ 2-10 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ವಿಜಯ ದಶಮಿ ಮೆರವಣಿ ಆರಂಭವಾಗಲಿದೆ.

ವಿವಿಧ ಜಿಲ್ಲೆಗಳ ಕಲಾವಿದರು ಅಥವಾ ಸಾಂಸ್ಕೃತಿಕ ತಂಡಗಳ ಪ್ರದರ್ಶನ, ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಬನ್ನಿಮಂಟಪದವರೆಗೂ ಸುಮಾರು 5 ಕಿ. ಲೋ. ವರೆಗೂ ಮೆರವಣಿಗೆ ಸಾಗಲಿದೆ. ವಿವಿಧ ಯೋಜನೆಗಳು ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸಂದೇಶ ಬಿಂಬಿಸುವ ವಿವಿಧ ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯ ಭಾಗವಾಗಲಿವೆ. ದಾರಿಯುದ್ದಕ್ಕೂ ಸಹಸ್ರಾರು ಜನರು ವೈಭವದ ಜಂಬೂ ಸವಾರಿಯನ್ನು ವೀಕ್ಷಿಸಲಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರ ಇತರೆ ಗಣ್ಯರು ಅಂಬಾರಿಯಲ್ಲಿ ಕೂತ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವರು. ಹಿಂದಿನ ದಿನಗಳಲ್ಲಿ ರಾಜನು ತನ್ನ ಸಹೋದರ ಮತ್ತು ಸೋದರಳಿಯನೊಂದಿಗೆ ಅಂಬಾರಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಜಯಚಾಮರಾಜೇಂದ್ರ ಒಡೆಯರ್ ಅಂಬಾರಿಯಲ್ಲಿ ಸವಾರಿ ಮಾಡಿದ ಮೈಸೂರಿನ ಕೊನೆಯ ರಾಜ ರಾಜರಾಗಿದ್ದರು.

ದಸರಾ ಮೆರವಣಿಗೆಯ ಸಂಪ್ರದಾಯ ಇಂದಿಗೂ ಮುಂದುವರೆದಿದೆ ಆದರೆ ಈಗ ರಾಜರ ಬದಲಿಗೆ ಮೈಸೂರು ನಗರದ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಅಂಬಾರಿಯಲ್ಲಿ ಕುಳಿರಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. 750 ಕೆಜಿ ತೂಕದ ಅಂಬಾರಿ ಮರ ಎಂದು ಹೇಳಲಾಗುತ್ತದೆ. ಆದರೆ 80 ಕೆಜಿ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಅರಮನೆಯಲ್ಲಿ ಸಂಪ್ರದಾಯದಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಾಳೆ ವೇಷಭೂಷಣ ಧರಿಸಿ ಅಂಬಾ ವಿಲಾಸ ಅರಮನೆಯಿಂದ ಭುವನೇಶ್ವರಿ ದೇವಿ ದೇವಸ್ಥಾನದವರೆಗೆ ‘ವಿಜಯ ಯಾತ್ರೆ’ ನಡೆಸಿ, ಶಮಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸಾಂದರ್ಭಿಕ ಚಿತ್ರ
ದಸರಾ ಆಯುಧಪೂಜೆ: ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ಸಾಂಪ್ರದಾಯಿಕ ಪೂಜೆ

ನವರಾತ್ರಿಯ ಕಳೆದ ಒಂಬತ್ತು ದಿನಗಳಿಂದ ಮೈಸೂರಿನ ಅರಮನೆ, ಪ್ರಮುಖ ಬೀದಿಗಳು, ವೃತ್ತಗಳು ಮತ್ತು ಕಟ್ಟಡಗಳ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಆಹಾರ ಮೇಳ, ಫಲ ಪುಷ್ಪ ಪ್ರದರ್ಶನ, ರೈತರ ದಸರಾ, ಮಹಿಳಾ ದಸರಾ, ಯುವ ದಸರಾ, ಮಕ್ಕಳ ದಸರಾ, ಮತ್ತು ಕವಿಗೋಷ್ಠಿಯಂತಹ ಹತ್ತಾರು ಕಾರ್ಯಕ್ರಮಗಳು ಈ ವರ್ಷ ಜನರನ್ನು ಆಕರ್ಷಿಸಿದವು. ಜೊತೆಗೆ ನಾಳೆ ನಡೆಯಲಿರುವ ಪ್ರಸಿದ್ಧ ದಸರಾ ಮೆರವಣಿಗೆ (ಜಂಬೂ ಸವಾರಿ) ಪಂಜಿನ ಕವಾಯತು ಪ್ರದರ್ಶನ ಜನರನ್ನು ಮತ್ತಷ್ಟು ಆಕರ್ಷಿಸಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com