'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್': ರೈತರು, ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಗೊರವಯ್ಯ ಕಾರ್ಣಿಕ?

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಗೊರವಯ್ಯ ಈ ಕಾರ್ಣಿಕದ ನುಡಿ ನುಡಿದಿದ್ದು, 'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ.
karnika Dasara predictions
ಗೊರವಯ್ಯನ ಕಾರ್ಣಿಕ
Updated on

ಹಾವೇರಿ: ದೇಶಾದ್ಯಂತ ವೈಭವದ ವಿಜಯದಶಮಿ ಆಚರಣೆ ಸಾಗಿರುವಂತೆಯೇ ಅತ್ತ ಹಾವೇರಿ ಜಿಲ್ಲೆಯ ಐತಿಹಾಸಿಕ ದೇವರಗುಡ್ಡದ ಮಾಲತೇಶಸ್ವಾಮಿ ದೇವಾಲಯದಲ್ಲಿ ಗೊರವಯ್ಯನ ಕಾರ್ಣಿಕೋತ್ಸವ ನಡೆದಿದ್ದು, ರೈತರು, ಮಳೆ ಬೆಳೆ, ರಾಜಕೀಯದ ಕುರಿತು ಭವಿಷ್ಯ ನುಡಿದಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಗೊರವಯ್ಯ ಈ ಕಾರ್ಣಿಕದ ನುಡಿ ನುಡಿದಿದ್ದು, 'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ.

ಪ್ರತಿ ವರ್ಷ ನವರಾತ್ರಿ ವೇಳೆ ಭವಿಷ್ಯವಾಣಿ ನುಡಿಯುವ ಗೊರವಯ್ಯ 9 ದಿನ ಉಪವಾಸ ವಿದ್ದು ಸಾವಿರಾರು ಭಕ್ತರ ಸಮ್ಮುಖದಲ್ಲಿ 18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ.

karnika Dasara predictions
ಮುಡಾ ಹಗರಣದಿಂದ ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ: ಮತ್ತೆ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಕೋಳಿವಾಡ

ಅರ್ಥ ಏನು?

ಇನ್ನು ಕಾರ್ಣಿಕ ನುಡಿ ಕುರಿತು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅವರು ಹೇಳಿಕೆ ನೀಡಿದ್ದು.. 'ಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್... ಆಕಾಶದತ್ತ ಚಿಗುರಿತಲೇ ಅಂದರೆ ಒಳ್ಳೆ ಮಳೆ ಆಗುತ್ತೆ, ಬೇರೆಲ್ಲಾ ಮುತ್ತಾಯಿತಲೇ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ, ಅದನ್ನ ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆದಾಗುತ್ತೆ ಎಂಬ ಅರ್ಥ ಎಂದು ತಿಳಿಸಿದ್ದಾರೆ.

ಇನ್ನೂ ರಾಜಕೀಯವಾಗಿ ಹೇಳುವುದಾದರೇ ಆಕಾಶದತ್ತ ಚಿಗುರೀತಲೇ, ಅಂದರೆ ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ. ಬೇರೆಲ್ಲಾ ಮುತ್ತಾಯಿತಲೇ ಅಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ. ಅಂತ ಬೇರುಗಳೆಲ್ಲಾ ಮುತ್ತಾಯಿತಲೇ ಅಂದರೆ ಆಕಾಶತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ತಾವೆ ಅಂತ ಅರ್ಥದಲ್ಲಿ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನ ಗೊರವಯ್ಯ ಕಾರ್ಣಿಕವನ್ನು ಶ್ರೀಗಳು ವ್ಯಾಖ್ಯಾನಿಸಿದರು.

ದೇಗುಲದ ಇತಿಹಾಸ

ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಐತಿಹಾಸಿಕ ದೇವರಗುಡ್ಡದ ಮಾಲತೇಶಸ್ವಾಮಿ ದೇವಾಲಯವೂ ಒಂದು. ಇದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com