
ಉಡುಪಿ: ಉಡುಪಿ ಜಿಲ್ಲೆಯ ಹೂಡೆ ಬಳಿಯ ಹೆಂಚಿನ ಮನೆಯೊಂದರಲ್ಲಿ ವಾಸವಿದ್ದ ಎಂಟು ಬಾಂಗ್ಲಾದೇಶಿ ಪ್ರಜೆಗಳನ್ನು ಇತ್ತೀಚೆಗೆ ಬಂಧಿಸಿದ ನಂತರ, ಪೊಲೀಸರು ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಭಾರತ-ಬಾಂಗ್ಲಾದೇಶದ ಉದ್ದಕ್ಕೂ ಬೇಲಿಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡದ ಕಾರಣ ಬಂಧಿತ ಬಾಂಗ್ಲಾದೇಶಿ ಪ್ರಜೆಗಳು ಈಶಾನ್ಯ ಪ್ರದೇಶದ ಏಜೆಂಟರ ಸಹಾಯದಿಂದ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಅಧಿಕೃತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ಸ್ಥಳೀಯ ಜನರು ಅವರಿಗೆ ಪ್ರೋತ್ಸಾಹ ನೀಡಿದರು ಎಂದು ಮೂಲಗಳು ಸೂಚಿಸಿವೆ. ಅವರು ವಿವಿಧ ಸಮಯಗಳಲ್ಲಿ ಭಾರತವನ್ನು ಪ್ರವೇಶಿಸಿ, ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿದ್ದರು ಮತ್ತು ಹತ್ತಿರದ ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಬಾಡಿಗೆ ಒಪ್ಪಂದ ಹಾಗೂ ತಾವು ತಕೆಲಸ ಮಾಡುತ್ತಿದ್ರುವ ಬಗ್ಗೆ ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಸಲ್ಲಿಸುವುದು ಕಡ್ಡಾಯವಲ್ಲದ ಕಾರಣ ಅಕ್ರಮ ವಲಸಿಗರಿಗೆ ಸುಲಭವಾಗಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಇಂತಹ ಅನೇಕ ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಾಂಗ್ಲಾದೇಶದ ಪ್ರಜೆಗಳಿಗೆ ಎರಡು ಕೊಠಡಿಗಳನ್ನು ಒಳಗೊಂಡಿರುವ ವಸತಿ ಸೌಕರ್ಯವನ್ನು ಆಸಿಫ್ ಎಂಬುವರು ಒದಗಿಸಿದ್ದಾರೆ. ಎಂಟು ಬಂಧಿತ ಬಾಂಗ್ಲಾದೇಶಿ ಪ್ರಜೆಗಳು ಒಂದು ಕೋಣೆಯಲ್ಲಿ ಉಳಿದುಕೊಂಡಿದ್ದರು ಮತ್ತು ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇನ್ನೊಂದು ಕೋಣೆಯಲ್ಲಿ ಸಂಗ್ರಹಿಸಲಾಗಿದೆ.
ಪೊಲೀಸರು ಆಸಿಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಂಗಳೂರು ಮತ್ತು ಚೆನ್ನೈನಲ್ಲಿರುವ ವ್ಯಕ್ತಿಗಳು ಬಂಧಿತ ಬಾಂಗ್ಲಾದೇಶಿ ಪ್ರಜೆಗಳಿಗೆ ಆಸಿಫ್ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡಕ್ಕೆ ತಿಳಿದು ಬಂದಿದೆ.
ಆಸಿಫ್ ಯಾವುದೇ ದಾಖಲೆಗಳನ್ನು ಅಥವಾ ಬಾಡಿಗೆ ಮೊತ್ತವನ್ನು ಸಂಗ್ರಹಿಸಿಲ್ಲ ಎಂಬ ಅಂಶವು ಪ್ರಕರಣವನ್ನು ಹೆಚ್ಚು ವಿವರವಾಗಿ ತನಿಖೆ ಮಾಡಲು ಪೊಲೀಸರಿಗೆ ಕಾರಣವಾಗಿದೆ. ಸ್ಥಳೀಯರು ಮತ್ತು ಅಕ್ರಮ ವಲಸಿಗರ ನಡುವೆ ಯಾವ ಕ್ವಿಡ್ ಪ್ರೊಕೋ ಡೀಲ್ ನಡೆದಿದೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಬಾಂಗ್ಲಾದೇಶಿ ಪ್ರಜೆಗಳು 'ಅಹ್ಲ್-ಇ-ಹದಿತ್' ಎಂಬ ಪಂಗಡಕ್ಕೆ ಸೇರಿದವರು ಮತ್ತು ಅವರು ಉಗ್ರಗಾಮಿ ಸಿದ್ಧಾಂತವೆಂದು ಪರಿಗಣಿಸಲಾದ 'ವಹಾಬಿಸಂ'ನ ಅನುಯಾಯಿಗಳು ಎಂದು ಉನ್ನತ ಮೂಲಗಳು TNIE ಗೆ ತಿಳಿಸಿವೆ.
ಬಂಧಿತ ಅಕ್ರಮ ಬಾಂಗ್ಲಾ ವಲಸಿಗರನ್ನು ಸೋಮವಾರ ಪೊಲೀಸ್ ಕಸ್ಟಡಿಗೆ ಪಡೆಯಲಿದೆ, ಸದ್ಯ ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ, ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ ತಿಳಿಸಿದ್ದಾರೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಅಕ್ರಮ ವಲಸಿಗರಿಗೆ ಸ್ಥಳಾವಕಾಶ ಕಲ್ಪಿಸುವವರ ಜಾಲ ಎಷ್ಟು ದೊಡ್ಡದಾಗಿದೆ ಮತ್ತು ಆಳವಾಗಿದೆ ಎಂಬುದರ ಕುರಿತು ಪೊಲೀಸರು ಪ್ರಮುಖವಾಗಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಅಕ್ರಮ ವಲಸಿಗರು ಉಡುಪಿಯಲ್ಲಿ ನಕಲಿ ಆಧಾರ್ ಕಾರ್ಡ್ ಮುದ್ರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement