GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ

ನಮ್ಮಲ್ಲಿ ಮಾನವ ಶಕ್ತಿಯ ಕೊರತೆಯಿದೆ. ಅದರಲ್ಲೆ ನಾವು ವಂಚನೆಗಳ ವಿರುದ್ಧ ಯುದ್ಧ ಸಾರಿದ್ದೇವೆ. ಏಕೆಂದರೆ ಮೋಸದ ಕಂಪನಿಗಳನ್ನು ಮುಚ್ಚುವುದು ಮೊದಲ ಹೆಜ್ಜೆಯಾಗಿದೆ.
C. Shikha
ಸಿ. ಶಿಖಾ
Updated on

ಬೆಂಗಳೂರು: 2017 ರಲ್ಲಿ ಜಿಎಸ್‌ಟಿ ಪರಿಚಯಿಸಿದಾಗಿನಿಂದ, ಅತ್ಯಾಧುನಿಕ ಹಗರಣ ಆರಂಭವಾಗಿದೆ. ಜಿಎಸ್ ಟಿಯಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಪ್ರತಿ ವರ್ಷ ಬೊಕ್ಕಸದಿಂದ ಸಾವಿರಾರು ಕೋಟಿ ಹಣ ವಂಚನೆಯಾಗುತ್ತಿದೆ. ನೂರಾರು ವಂಚಕರನ್ನು ಬಂಧಿಸಲಾಗಿದೆ ಆದರೆ ಮಾಸ್ಟರ್‌ಮೈಂಡ್‌ಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವಿಧ ರಾಜ್ಯಗಳು, ಸಂಸ್ಕೃತಿಗಳು ಮತ್ತು ಭಾಷೆಗಳಲ್ಲಿ ಜಿಎಸ್ ಟಿ ಜಾರಿ ಮಾಡುಲ್ಲಿ ಸವಾಲುಗಳಿವೆ. ವಂಚಕರು ಅನೇಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ತನಿಖೆಗಳು ಸಾಮಾನ್ಯವಾಗಿ ಅಂತ್ಯಗೊಳ್ಳುತ್ತವೆ, ಆದರೆ ಅವರನ್ನು ಬಂಧಿಸುವ ಮೊದಲೇ ವಂಚಕರು ನಾಪತ್ತೆಯಾಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ, ನಾವು ಕರ್ನಾಟಕದಲ್ಲಿಯೇ 1,000 ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಮುಚ್ಚುತ್ತೇವೆ, ಆದರೆ ಅಂತ ಕಂಪನಿಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ನಾವು ಅವರನ್ನು ಆರು ತಿಂಗಳೊಳಗೆ ಹಿಡಿಯದಿದ್ದರೆ, ಅವು ಕಣ್ಮರೆಯಾಗುತ್ತವೆ ಎಂದಿದ್ದಾರೆ.

ಜಿಎಸ್ ಟಿ ವಂಚಕರನ್ನು ಹಿಡಿಯಲು ಅಪರಿಮಿತವಾಗಿ ಇಲಾಖೆ ಶ್ರಮಿಸುತ್ತಿದೆ ಎಂದು ವಾಣಿಜ್ಯ ತೆರಿಗೆ ಆಯುಕ್ತೆ ಸಿ ಶಿಖಾ ತಿಳಿಸಿದ್ದಾರೆ. ನಮ್ಮಲ್ಲಿ ಮಾನವ ಶಕ್ತಿಯ ಕೊರತೆಯಿದೆ. ಅದರಲ್ಲೆ ನಾವು ವಂಚನೆಗಳ ವಿರುದ್ಧ ಯುದ್ಧ ಸಾರಿದ್ದೇವೆ. ಏಕೆಂದರೆ ಮೋಸದ ಕಂಪನಿಗಳನ್ನು ಮುಚ್ಚುವುದು ಮೊದಲ ಹೆಜ್ಜೆಯಾಗಿದೆ. ನಿಜವಾದ ಮಾಸ್ಟರ್‌ಮೈಂಡ್‌ಗಳನ್ನು ಹಿಡಿಯಲು ತಿಂಗಳ ಟ್ರ್ಯಾಕಿಂಗ್ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಈ ಕಂಪನಿಗಳನ್ನು ಹಿಡಿಯುವುದು ಕಾಲಾಳುಗಳನ್ನು ಬಂಧಿಸಿದಂತೆ ಆದರೆ ನಿಜವಾದ ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆಎಂದು ಅವರು ಹೇಳಿದರು.

C. Shikha
GST ಕುರಿತು ಪ್ರಶ್ನೆ ಕೇಳಿದ ಉದ್ಯಮಿ; ಕ್ಷಮೆ ಕೇಳಿಸಿದರೇ ನಿರ್ಮಲಾ ಸೀತಾರಾಮನ್?; ಕಾಂಗ್ರೆಸ್ ಆರೋಪಕ್ಕೆ BJP ತಿರುಗೇಟು!

ವಂಚಕರನ್ನು ಹಿಡಿಯಲು ದೇಶಾದ್ಯಂತ ಬಯೋಮೆಟ್ರಿಕ್ ತಂತ್ರಜ್ಞಾನ ಸೇರಿದಂತೆ ಹೊಸ ತಂತ್ರಗಳನ್ನು ಅಳವಡಿಸಲಾಗುತ್ತಿದೆ ಎಂದು ಶಿಖಾ ಹೇಳಿದರು. ಸಮಸ್ಯೆಯ ಮೂಲವೆಂದರೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗಳ ದುರುಪಯೋಯವಾಗುತ್ತಿದೆ. ನಕಲಿ ಕಂಪನಿಗಳು ಯಾವುದೇ ಕುರುಹು ಇಲ್ಲದಂತೆ ಕಣ್ಮರೆಯಾಗುವ ಮೊದಲು ಬೋಗಸ್ ಇನ್‌ವಾಯ್ಸ್‌ಗಳ ಮೂಲಕ ಕೋಟಿಗಳನ್ನು ಗಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಅಸಲಿ ತೆರಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಕರ್ನಾಟಕವು ಆಗಸ್ಟ್ 16 ರಿಂದ 1,193 ಸಂಸ್ಥೆಗಳನ್ನು ಗುರುತಿಸಿದೆ, 300 ಕೋಟಿ ರೂಪಾಯಿಗಳ ವಂಚನೆಯನ್ನು ನಿರ್ಬಂಧಿಸಿದೆ, ಈಗಾಗಲೇ 14 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ.

2023 ಮತ್ತು 2022 ರ ಹಿಂದಿನ ಕಾರ್ಯಾಚರಣೆಗಳನ್ನು ಅನುಸರಿಸಿ, ನೂರಾರು ಕೋಟಿ ಮೌಲ್ಯದ ವಂಚನೆಯನ್ನು ಬಹಿರಂಗಪಡಿಸಿದೆ. ಆದರೆ ವಂಚಕರು ನಕಲಿ ID ಗಳನ್ನು ಬಳಸುವ ಮೂಲಕ ಕಾರ್ಯಾಚರಣೆಗಳನ್ನು ತ್ವರಿತವಾಗಿ ಸ್ಥಗಿತಗೊಳಿಸುತ್ತಾರೆ. ಸರ್ಕಾರದ ಆದಾಯದ ಮೇಲೆ ನಡೆಯುತ್ತಿರುವ ವಂಚನೆಯನ್ನು ತಡೆಯಲು ಕಠಿಣ ಕಾನೂನು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com