
ಕಲಬುರಗಿ: 2023 ಅಕ್ಟೋಬರ್ 23 ರಂದು ತಮ್ಮ ವಿವಾಹಿತ ಮಗಳು ನಿಗೂಢವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಆಕೆಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಕೊಡಿಸಲು ತಂದೆಯೊಬ್ಬರು ಏಕಾಂಗಿ ಹೋರಾಟವನ್ನು ಆರಂಭಿಸಿದ್ದಾರೆ. ರಾಯಚೂರು ಜಿಲ್ಲೆಯ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮುಕ್ತಾಲ್ ತಾಲೂಕಿನ ಗುಡೇಬಲ್ಲೂರು ಗ್ರಾಮದ ಚೆನ್ನಪ್ಪ ಗೌಡ (50) ತಮ್ಮ ಪುತ್ರಿ ಜಯಲಕ್ಷ್ಮಿ ಸಾವಿಗೆ ನಾಲ್ವರು ಕಾರಣ ಎಂದು ಆರೋಪಿಸಿ ಕಲಬುರಗಿ-ಹುಮನಾಬಾದ್ ರಿಂಗ್ ರಸ್ತೆಯ ಟಿಪ್ಪು ಚೌಕ್ ಸೇರಿದಂತೆ ಹಲವೆಡೆ ಬ್ಯಾನರ್ ಹಾಕಿದ್ದಾರೆ.
ಬ್ಯಾನರ್‌ಗಳಲ್ಲಿ ಜಯಲಕ್ಷ್ಮಿ ಅವರ ಪತಿ ಶಂಕರ್ ರೆಡ್ಡಿ, ಅತ್ತೆ ಸಾವಿತ್ರಮ್ಮ, ಅತ್ತಿಗೆ (ರೆಡ್ಡಿ ಅವರ ಹಿರಿಯ ಸಹೋದರಿ) ಮತ್ತು ಡಾ ಲಕ್ಷ್ಮಿ (ರೆಡ್ಡಿ ಅವರ ತಂಗಿ) ಅವರ ಚಿತ್ರಗಳಿವೆ. ಸೇಡಂ ಮತ್ತು ಶಂಕರಪಲ್ಲಿ ಗ್ರಾಮದಲ್ಲೂ ಇಂತಹ ಬ್ಯಾನರ್ ಹಾಕಿದ್ದಾರೆ. ಅವರು ನನ್ನ ಮಗಳನ್ನು ಕೊಂದಿದ್ದಾರೆ. ನಾನು ಸಚಿವರು ಮತ್ತು ನನ್ನ ಅಳಿಯನ ಸಂಬಂಧಿಕರನ್ನು ನಂಬಿದ್ದೇನೆ, ಪೊಲೀಸರಿಗೆ ದೂರು ನೀಡಬೇಡಿ, ಅಗತ್ಯ ಪರಿಹಾರ ಕೊಡಿಸುವುದರ ಜೊತೆಗೆ ನನ್ನ ಮೊಮ್ಮಗಳನ್ನು ನನ್ನ ಕುಟುಂಬಕ್ಕೆ ಒಪ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ನೀಡಿದ ಭರವಸೆಯನ್ನು ಈಡೇರಿಸಲಿಲ್ಲ, ಈಗ ಶಂಕರರೆಡ್ಡಿ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ ಎಂದು ಚೆನ್ನಪ್ಪಗೌಡ ಆರೋಪಿಸಿದರು. ಜಯಲಕ್ಷ್ಮಿ ಸೇಡಂ ತಾಲೂಕಿನ ಶಂಕರಪಲ್ಲಿ ಗ್ರಾಮದ ಸಿದ್ದರೆಡ್ಡಿ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರ ಶಂಕರ್ ರೆಡ್ಡಿ ಅವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶಂಕರ್ ರೆಡ್ಡಿ ಮತ್ತು ಜಯಲಕ್ಷ್ಮಿ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ.
ಕಳೆದ ವರ್ಷ ತನ್ನ ಜಯಲಕ್ಷ್ಮಿಅನಾರೋಗ್ಯಕ್ಕೆ ಒಳಗಾಗಿದ್ದಳು ಮತ್ತು ಆಕೆಯನ್ನು ಅತ್ತೆಯ ಮನೆಯವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಕ್ಟೋಬರ್ 23 ರಂದು ಆಕೆ ಸಾವನ್ನಪ್ಪಿದ್ದಾಳೆ. ಹೆಚ್ಚಿನ ವರದಕ್ಷಿಣೆಗಾಗಿ ಜಯಲಕ್ಷ್ಮಿ ಅವರ ಪತಿ ಮತ್ತು ಅತ್ತೆಯಂದಿರು ಆಕೆಯನ್ನು ಕೊಂದಿರಬಹುದು ಎಂಬ ಅನುಮಾನದಲ್ಲಿ ಅವರು ರಾಯಚೂರು ಜಿಲ್ಲೆಯ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆ ವೇಳೆ ಸಚಿವರು ದೂರವಾಣಿ ಕರೆ ಮಾಡಿ ಯಾವುದೇ ದೂರು ನೀಡದಂತೆ ಸೂಚಿಸಿ ರೆಡ್ಡಿ ಕುಟುಂಬದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಜೊತೆಗೆ ಜಯಲಕ್ಷ್ಮಿ ಅವರ ಮಗಳನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇದನ್ನು ನಂಬಿ ನಾನು ನನ್ನ ಅಳಿಯ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಜೊತೆಗೆ ಜಯಲಕ್ಷ್ಮಿ ಅವರ ಅತ್ತೆ ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ತೆಗೆದುಕೊಂಡ 30 ಗ್ರಾಂ ಚಿನ್ನ ಮತ್ತು 10 ಲಕ್ಷ ರೂ.ಗಳನ್ನು ಹಿಂದಿರುಗಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಜಯಲಕ್ಷ್ಮಿ ಅವರ ಮಗಳನ್ನು ಹಸ್ತಾಂತರಿಸಲು ಒಪ್ಪಿದ್ದಲ್ಲದೆ, ಅವರ ಮೊಮ್ಮಗಳ ನಿರ್ವಹಣೆಗಾಗಿ 10 ಎಕರೆ ಜಮೀನು ನೀಡುವುದಾಗಿ ಭರವಸೆ ನೀಡಿದರು. ಜಮೀನನ್ನು ಮೊಮ್ಮಗಳ ಹೆಸರಿಗೆ ನೋಂದಣಿ ಮಾಡಿಸಬೇಕು ಎಂದರು. ನಾನು ಕೆಲವು ಕಾನೂನು ತಜ್ಞರನ್ನು ಸಂಪರ್ಕಿಸಿದಾಗ, ನನ್ನ ಮಗಳ ಸಾವಿನಲ್ಲಿ ಸಂಚು ನಡೆದಿದೆ ಎಂದು ಶಂಕಿಸಿದ್ದಾರೆ. ಮಗಳು ಸತ್ತು ಕೇವಲ ಒಂದು ವರ್ಷವಾಗಿರುವುದರಿಂಸ ಸ್ವಲ್ಪ ಮಟ್ಟಿನ ಸಹಾಯವಾಗುತ್ತದೆ ಎಂದು ಅವರು ನನಗೆ ಹೇಳಿದರು. ಒಪ್ಪಂದವು ನೋಂದಾಯಿತ ದಾಖಲೆಯಾಗಿರದ ಕಾರಣ ನಾನು ವರದಕ್ಷಿಣೆ ಹಣ ಮತ್ತು ಆಭರಣಗಳನ್ನು ಪಡೆಯಲು ಸಾಧ್ಯವಾಗದಿರಬಹುದು ಎಂದು ಅವರು ನನಗೆ ಹೇಳಿದರು. ಯಾವುದೇ ನೆರವು ಸಿಗದ ಕಾರಣ ನನ್ನ ಮಗಳಿಗೆ ನ್ಯಾಯ ಕೋರಿ ಹೋರಾಟ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ.
Advertisement