• Tag results for dowry

ವರದಕ್ಷಿಣೆ ತಾರದ ಪತ್ನಿ ಮೇಲೆ ಸಂಬಂಧಿಕರ ಜೊತೆ ಸೇರಿ ಗ್ಯಾಂಗ್ ರೇಪ್; ಯೂಟ್ಯೂಬ್ ಗೆ ವಿಡಿಯೋ ಅಪ್ಲೋಡ್ ಮಾಡಿದ ಪಾಪಿ ಪತಿ!

ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿ ಮತ್ತು ಆತನ ಸಂಬಂಧಿಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅದನ್ನು ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ.

published on : 30th April 2022

‘ವರದಕ್ಷಿಣೆಯ ಅನುಕೂಲಗಳು’ ಪಠ್ಯ ವಿವಾದ: ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಎನ್ ಸಿಡಬ್ಲ್ಯೂ ಸೂಚನೆ

ವರದಕ್ಷಿಣೆ ಪದ್ಧತಿಯ ಅನುಕೂಲಗಳು ಎಂಬ ಪಠ್ಯದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದ್ದಂತೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದ ಪುಸ್ತಕದಲ್ಲಿನ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್....

published on : 5th April 2022

ಕುರೂಪಿ ಹೆಣ್ಣುಮಕ್ಕಳ ಮದುವೆಗೆ ಡೌರಿ ಸಹಕಾರಿ: ನರ್ಸಿಂಗ್ ಪಠ್ಯಪುಸ್ತಕದಲ್ಲಿನ ಹೇಳಿಕೆಗೆ ಸಂಸದೆ ಖಂಡನೆ

ಸಾಮಾಜಿಕ ಜಾಲತಾಣಗಳಲ್ಲಿ ಪಠ್ಯಪುಸ್ತಕದ ಆ ಪುಟಗಳನ್ನು ಶೇರ್ ಮಾಡಲಾಗುತ್ತಿದ್ದು ವೈರಲ್ ಆಗಿ ವಿವಾದ ಸೃಷ್ಟಿಸಿದೆ.

published on : 5th April 2022

ವರದಕ್ಷಿಣೆ ರಹಿತ ಮದುವೆಗಳಲ್ಲಿ ಮಾತ್ರ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿ

ವರದಕ್ಷಿಣೆ ರಹಿತ ವಿವಾಹ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಕುಟುಂಬದಿಂದ ಸ್ಪಷ್ಟವಾದ ಘೋಷಣೆ ಮಾಡದಿದ್ದರೆ ಯಾವುದೇ ಮದುವೆಗೂ ಹಾಜರಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಘೋಷಿಸಿದ್ದಾರೆ.

published on : 23rd December 2021

ರಾಜಸ್ಥಾನ: ವರದಕ್ಷಿಣೆಗೆಂದು ಅಪ್ಪ ಕೂಡಿಟ್ಟ 75 ಲಕ್ಷ ರು. ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ಕೊಟ್ಟು ಮಾದರಿಯಾದ ಯುವತಿ

ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಇತ್ತೀಚೆಗೆ ಸಪ್ತಪದಿ ತುಳಿದ ರಾಜಸ್ತಾನದ ವಧು ಅಂಜಲಿ  ತನ್ನ ವರದಕ್ಷಿಣೆಗಾಗಿ ಮೀಸಲಿಟ್ಟ 75 ಲಕ್ಷ ರೂ ಮೊತ್ತವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಂದಾಗಿರುವ ನಡೆಗೆ ಇದೀಗ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

published on : 26th November 2021

ಬೆಂಗಳೂರು: ವರದಕ್ಷಿಣೆ ವಿಚಾರವಾಗಿ ಮಾವನಿಂದ ಅಳಿಯನ ಕಗ್ಗೊಲೆ

ವರದಕ್ಷಿಣೆ ಕಿರುಕುಳ ವಿಚಾರವಾಗಿ ಕಬ್ಬಿಣದ ರಾಡ್ ನಿಂದ ಹೊಡೆದು ಮಾವನೇ ಅಳಿಯನನ್ನು ಕೊಂದಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ. ಅಕ್ಟೋಬರ್ 2 ರಂದು ನಡೆದ ಘಟನೆಯಲ್ಲಿ ಮೊಹಮದ್ ಮಹಬೂಬ್ ಎಂಬಾತ ಸಾವನ್ನಪ್ಪಿದ್ದಾನೆ.

published on : 4th October 2021

ವಿಸ್ಮಯ ವರದಕ್ಷಿಣೆ ಸಾವು ಪ್ರಕರಣ: ಪತಿಯನ್ನು ಸೇವೆಯಿಂದ ವಜಾಗೊಳಿಸಿದ ಕೇರಳ ಸರ್ಕಾರ

ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಇತರರಿಗೆ ಮಾದರಿಯಾಗುವಂತಹ ಶಿಕ್ಷೆ ನೀಡಿದ್ದು, ಕೊಲ್ಲಂನಲ್ಲಿ ಪತ್ನಿ ಎಸ್‌ವಿ ವಿಸ್ಮಯ ಅವರಿಗೆ ವರದಕ್ಷಿಣೆ ಕಿರುಕುಳ ನೀಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿದ್ದ...

published on : 6th August 2021

ವಿವಾಹವಾಗಲು ವರದಕ್ಷಿಣೆ ಕೇಳುತ್ತಿರುವ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ಮರುಪರಿಗಣಿಸಿ: ಮಹಿಳೆಯಿಂದ ಸುಪ್ರೀಂ ಕೋರ್ಟ್ ಗೆ ಮೊರೆ

ತನ್ನ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣವನ್ನು ಮರುಪರಿಗಣಿಸುವಂತೆ ಕೋರಿದ ಮಹಿಳೆಯ ಮನವಿಯನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರ ಮತ್ತು ಎಂಬಿಬಿಎಸ್ ವಿದ್ಯಾರ್ಥಿಯೊಬ್ಬನ ಪ್ರತಿಕ್ರಿಯೆಯನ್ನು ಕೋರಿದೆ.

published on : 17th July 2021

ವರದಕ್ಷಿಣೆ ಕಿರುಕುಳ: ಪೋಲೀಸರಿಗೆ ಶರಣಾಗುವಂತೆ ಮಲಯಾಳಂ ಟಿವಿ ನಟ ಆದಿತ್ಯನ್ ಜಯನ್ ಗೆ ಕೇರಳ ಹೈಕೋರ್ಟ್ ನಿರ್ದೇಶನ

ತನ್ನ ಪತ್ನಿ ಅಂಬಿಲಿ ದೇವಿ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗುವಂತೆ ಆದಿತ್ಯನ್ ಎಂದೇ ಖ್ಯಾನಾದ ಮಲಯಾಳಂ ಟಿವಿ  ನಟ ಜಯನ್ ಎಸ್ ಅವರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

published on : 10th July 2021

ವರದಕ್ಷಿಣೆ ಪಿಡುಗು ಅಂತ್ಯಕ್ಕೆ ಮುಸ್ಲಿಂ ಸಂಸ್ಥೆಯಿಂದ ಅಭಿಯಾನ, ಅಸಿಂಧುಗೊಳಿಸಲು ಧರ್ಮಗುರುಗಳಿಗೆ ನಿರ್ದೇಶನ

ವರದಕ್ಷಿಣೆಯ ಪಿಡುಗನ್ನು ತೊಲಗಿಸುವುದಕ್ಕಾಗಿ ಮುಸ್ಲಿಂ ಸಂಸ್ಥೆಯೊಂದು ಅಭಿಯಾನ ಕೈಗೊಂಡಿದೆ. 

published on : 23rd March 2021

ಪೊಲೀಸ್ ಅಧಿಕಾರಿಗೆ ವರದಕ್ಷಿಣೆ ಕಿರುಕುಳ: ಮಹಿಳಾ ಐಪಿಎಸ್ ಅಧಿಕಾರಿಯಿಂದ ಪತಿ ವಿರುದ್ಧ ಡೌರಿ ಕೇಸ್ ದಾಖಲು!

ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರ ಜೀವನದಲ್ಲಿ ಕೌಟುಂಬಿಕ ಸಮಸ್ಯೆ ತಲೆದೋರಿದೆ.

published on : 6th February 2021

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ದೂರು: ಸಾಕ್ಷಿ ಸಂಗ್ರಹಣೆಯಲ್ಲಿ ಪೊಲೀಸರು

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆಗೆ ಯತ್ನ ಕೇಸಿನ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ ಆರ್ ಆರ್ ನಗರ ಪೊಲೀಸರು ಇನ್ನೂ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದು, ದಿನೇಶ್ ಅವರನ್ನು ವಿಚಾರಣೆ ನಡೆಸಬೇಕಿದೆ.

published on : 26th January 2021

ರಾಶಿ ಭವಿಷ್ಯ