ಸಚಿವ ಜಮೀರ್ ಅಹ್ಮದ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಿ: ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಮನವಿ

ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ರಾಜ್ಯಪಾಲ ಗೆಹ್ಲೋಟ್ ಅವರನ್ನು ಇಂದು ಭೇಟಿ ಮಾಡಿ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮವನ್ನು ಜರುಗಿಸಲು ಕೋರಿದರು.
TJ Abraham
ಟೆಜೆ ಅಬ್ರಹಾಂonline desk
Updated on

ಬೆಂಗಳೂರು: ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಡ್ವೊಕೇಟ್ ಜನರಲ್ ಅವರ ಮನವಿಯನ್ನು ಪರಿಗಣಿಸುವಂತೆ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿರುವುದಾಗಿ ಕಾರ್ಯಕರ್ತ ಟಿ ಜೆ ಅಬ್ರಹಾಂ ಸೋಮವಾರ ಹೇಳಿದ್ದಾರೆ.

AG ಮನವಿಗೆ ಕಿವಿಗೊಡದಿದ್ದರೆ ರಾಜ್ಯಪಾಲರು ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅಬ್ರಹಾಂ ಹೇಳಿದರು.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದ ಮೂವರು ಅರ್ಜಿದಾರರಲ್ಲಿ ಟಿಜೆ ಅಬ್ರಾಹಮ್ ಸಹ ಒಬ್ಬರಾಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಖಾನ್ ರಾಜಕೀಯ ತೀರ್ಪು ಎಂದು ಕರೆದಿದ್ದಾರೆ ಎಂದು ಅಬ್ರಹಾಂ ಆರೋಪಿಸಿದ್ದಾರೆ.

"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶದ ನಂತರ, ಕರ್ನಾಟಕ ವಸತಿ ಮತ್ತು ವಕ್ಫ್ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಇದು ನಿಮ್ಮೆಲ್ಲರ ಮುಂದೆ ರಾಜಕೀಯ ತೀರ್ಪು ಎಂದು ಬಹಿರಂಗವಾಗಿ ಕರೆದಿದ್ದಾರೆ" ಎಂದು ರಾಜಭವನದಲ್ಲಿ ಗೆಹ್ಲೋಟ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು.

"ನ್ಯಾಯಾಂಗ ನಿಂದನೆ ಕಾಯಿದೆಯ ಪ್ರಕಾರ, ಸೆಪ್ಟೆಂಬರ್ 27 ರಂದು ನಾವು ಅಡ್ವೊಕೇಟ್ ಜನರಲ್‌ಗೆ ನೋಟಿಸ್ ಕಳುಹಿಸಿದ್ದೇವೆ. ಎಜಿ ಅವರು ಒಪ್ಪಿಗೆ ನೀಡಬೇಕು. ಎಜಿ ಮುಂದೆ ಎರಡು ಪ್ರಶ್ನೆಗಳಿವೆ, ಅವರು ಸರ್ಕಾರದ ಪರ ನಿಲ್ಲುತ್ತಾರೋ ಅಥವಾ ನ್ಯಾಯಾಂಗದ ಪರವಾಗಿ ನಿಲ್ಲುತ್ತಾರೋ ಎಂಬುದು ಪ್ರಶ್ನೆ ಎಂದು ಅಬ್ರಾಹಂ ಹೇಳಿದ್ದಾರೆ.

TJ Abraham
MUDA Case: ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬಹು ದೊಡ್ಡ ಉತ್ತೇಜನ- ಟಿಜೆ ಅಬ್ರಹಾಂ; ಯಾವುದೇ ನ್ಯಾಯಾಲಯಕ್ಕೆ ಹೋದರೂ ಸೋಲುತ್ತಾರೆ ಎಂದ ಸ್ನೇಹಮಯಿ ಕೃಷ್ಣ

ನ್ಯಾಯಾಲಯದ ಆದೇಶವನ್ನು ರಾಜಕೀಯ ತೀರ್ಪು ಎಂದು ಕರೆಯುವುದು ಸಂಪೂರ್ಣವಾಗಿ ನ್ಯಾಯಾಂಗದ ಅವಹೇಳನವಾಗಿದೆ ಎಂದು ಅಬ್ರಹಾಂ ಹೇಳಿದರು. ಒಂದು ತಿಂಗಳು ಕಳೆದರೂ ಎಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು. "ನಾವು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರ ಮುಂದೆ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಲು ಅಥವಾ ಭಾರತೀಯ ಸಂವಿಧಾನದ 165 (ಸಿ) ವಿಧಿಯ ಅಡಿಯಲ್ಲಿ ಎಜಿ ಅವರಿಗೆ ಸೂಚಿಸಬೇಕು ಅಥವಾ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಟಿಜೆ ಅಬ್ರಾಹಂ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com