ದೇಸಿ ಬೀಜ ಬ್ಯಾಂಕ್‌ ಸ್ಥಾಪನೆಗೆ ಅವಕಾಶ ನೀಡಿ: ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ರೈತರ ನಿರ್ಧಾರ

ರಾಜ್ಯ ಸರ್ಕಾರ ತನ್ನ 2024 ರ ಬಜೆಟ್‌ನಲ್ಲಿ ಮೊದಲ ಬಾರಿಗೆ ದೇಸಿ ಬೀಜ ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಹಣ ಮೀಸಲಿಡುವ ವಾಗ್ದಾನ ಮಾಡಿತ್ತು. ಈ ಅವಕಾಶದೊಂದಿಗೆ ಸಾವಿರಾರು ಬೆಳೆಗಳ ಬೀಜಗಳನ್ನು ಸಂರಕ್ಷಿಸಲು ರೈತರು ಗಮನ ಹರಿಸಿದ್ದಾರೆ.
Representative picture
ಬೆಳೆಗಳ ಬೀಜ
Updated on

ಹುಬ್ಬಳ್ಳಿ: ದೇಸಿ ಬೀಜ ಸಂರಕ್ಷಣೆಗೆ ಶ್ರಮಿಸುತ್ತಿರುವ ಉತ್ತರ ಕರ್ನಾಟಕ ಭಾಗದ ರೈತರ ಗುಂಪೊಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದು, ಅಕಾಡೆಮಿ ಅಥವಾ ಸಂಸ್ಥೆಗಳಿಗೆ ಜವಾಬ್ದಾರಿ ನೀಡುವ ಬದಲು ಸಮುದಾಯ ಬೀಜ ಬ್ಯಾಂಕ್ ಗಳ ಸ್ಥಾಪನೆಗೆ ರೈತರಿಗೆ ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ರಾಜ್ಯ ಸರ್ಕಾರ ತನ್ನ 2024 ರ ಬಜೆಟ್‌ನಲ್ಲಿ ಮೊದಲ ಬಾರಿಗೆ ದೇಸಿ ಬೀಜ ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಹಣ ಮೀಸಲಿಡುವ ವಾಗ್ದಾನ ಮಾಡಿತ್ತು. ಈ ಅವಕಾಶದೊಂದಿಗೆ ಸಾವಿರಾರು ಬೆಳೆಗಳ ಬೀಜಗಳನ್ನು ಸಂರಕ್ಷಿಸಲು ರೈತರು ಗಮನ ಹರಿಸಿದ್ದಾರೆ.

ಸಭೆಯಲ್ಲಿ ಸಂರಕ್ಷಣೆಗೆ ಅರ್ಹವಾದ ವಿವಿಧ ಬೆಳೆಗಳು, ಸಾಂಪ್ರದಾಯಿಕ ಕೃಷಿ ಪದ್ಧತಿಗಳು, ಜನಪ್ರಿಯಗೊಳಿಸಬೇಕಾದ ಹೊಸದಾಗಿ ಅಭಿವೃದ್ಧಿಪಡಿಸಿದ ವಿಧಾನಗಳು ಮತ್ತು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ ರೈತ ವಿಜ್ಞಾನಿಗಳ ಕುರಿತು ರೈತರು ಚರ್ಚಿಸಿದರು.

ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಕೃಷ್ಣ ಪ್ರಸಾದ್, ತಂತ್ರಜ್ಞಾನ ಮತ್ತು ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದ ಅನೇಕ ರೈತರನ್ನು ಉದಾಹರಣೆಯಾಗಿ ನೀಡುವ ಮೂಲಕ ಕ್ರೆಡಿಟ್ ನ್ನು ಅಕಾಡೆಮಿಗಳು ದೋಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಬೀಜ ಸಂರಕ್ಷಣೆಗೆ 5 ಕೋಟಿ ಮೀಸಲಿಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ. ಸಮುದಾಯಕ್ಕೆ ಅನುಕೂಲವಾಗುವಂತೆ ರೈತರಿಗೆ ಹಣ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಉತ್ತರ ಕರ್ನಾಟಕದಲ್ಲಿ ಹಲವು ವೈವಿಧ್ಯಮ ಬೆಳೆ ಬೆಳೆಯಲಾಗುತ್ತದೆ. ಸಾವಿರಾರು ಭತ್ತದ ತಳಿಗಳನ್ನೂ ಬೆಳೆಯುತ್ತಿದ್ದರೆ, ಇತರ ಸಾವಿರಾರು ತಳಿಗಳು ಕೃಷಿಯಿಂದ ಹೊರಗಿವೆ. ಲ್ಯಾಬ್-ಅಭಿವೃದ್ಧಿಪಡಿಸಿದ ತಳಿಗಳಿಗಿಂತ ಹೆಚ್ಚಿನ ಆರೋಗ್ಯ ಪ್ರಯೋಜನ, ರುಚಿ ಮತ್ತು ಪ್ರಯೋಜನಗಳನ್ನು ಹೊಂದಿರುವುದರಿಂದ, ಅವುಗಳನ್ನು ಮರಳಿ ತರಬೇಕಾಗಿದೆ ಎಂದು 100 ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿರುವ ರೈತ ಮತ್ತು ಸಂರಕ್ಷಕ ಶಂಕರ್ ಲಾಂಗ್ಟಿ ಹೇಳಿದರು.

ಬೀಜ ಬ್ಯಾಂಕ್ ಹೊಂದಿರುವ ಬೀಬಿಜಾನ್ ಅವರಂತಹ ಮಹಿಳಾ ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.

image-fallback
ಅಪರೂಪ ತಳಿ ಸಮುದಾಯ ಬೀಜ ಬ್ಯಾಂಕ್

ಮಾಜಿ ಪತ್ರಕರ್ತ ಮತ್ತು ರೈತ ಆನಂದ ತೀರ್ಥ ಪಯಾಟಿ ಅವರು ಭತ್ತ, ಹತ್ತಿ ಮತ್ತು ಮೆಣಸಿನಕಾಯಿಯ ವಿಶೇಷ ತಳಿಗಳ ಕುರಿತು ವಿವರಿಸಿದರು. ಒಂದು ಕಾಲದಲ್ಲಿ ಹೇರಳವಾಗಿ ಬೆಳೆದ ಬ್ಯಾಡಗಿ ಮೆಣಸಿನಕಾಯಿಯನ್ನು ಜರ್ಮನಿಯಲ್ಲಿ ಲಿಪ್ ಸ್ಟಿಕ್ ತಯಾರಿಸಲು ಬಳಸಲಾಗುತ್ತಿತ್ತು. ಏಕೆಂದರೆ ಅವರು ಹಾನಿಕಾರಕವಲ್ಲದ ಸಸ್ಯ ಆಧಾರಿತ ಬಣ್ಣವನ್ನು ಬಯಸಿದ್ದರು. ಇಂದಿಗೂ ಬ್ಯಾಡಗಿ ಮೆಣಸಿನಕಾಯಿಯನ್ನು ಕೇರಳಕ್ಕೆ ಕೊಂಡೊಯ್ದು ಕೆಂಪು ಬಣ್ಣವನ್ನು ಹೊರತೆಗೆಯಲಾಗುತ್ತದೆ. ದುರದೃಷ್ಟವಶಾತ್, ಕರ್ನಾಟಕದಲ್ಲಿ ಇಂತಹ ಸಂಸ್ಕರಣಾ ಘಟಕವನ್ನು ಸ್ಥಾಪಿಸಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com