ನಡೆಯದ ಬಿಬಿಎಂಪಿ ಚುನಾವಣೆ: ಕೌನ್ಸಿಲರ್ ಗಳಿಲ್ಲದೆ ಮಳೆಗಾಲದಲ್ಲಿ ಸಮಸ್ಯೆ ನಿರ್ವಹಿಸುವುದೇ ದುಸ್ತರ!

ರಾಜ್ಯದಲ್ಲಿ ಪ್ರತಿ ಚುನಾವಣೆಯೂ ನಿಗದಿತ ಸಮಯಕ್ಕೆ ನಡೆಯುತ್ತದೆ, ಅದು ವಿಧಾನಸಭೆ ಅಥವಾ ಲೋಕಸಭೆ ಅಥವಾ ಎಂಎಲ್‌ಸಿ ಚುನಾವಣೆಯಾಗಿರಲಿ, ಆದರೆ ಬಿಬಿಎಂಪಿ ಚುನಾವಣೆ ಯಾವಾಗಲೂ ವಿಳಂಬವಾಗುತ್ತದೆ.
BBMP (file image)
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ನಾಲ್ಕು ವರ್ಷಗಳಿಂದ ಪೂರ್ಣ ಪ್ರಮಾಣದ ಬಿಬಿಎಂಪಿ ಕೌನ್ಸಿಲ್ ಮತ್ತು ಕೌನ್ಸಿಲರ್‌ಗಳ ಅನುಪಸ್ಥಿತಿಯಿಂದ ನಗರದ 1.4 ಕೋಟಿ ಜನರು ನಾಗರಿಕ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ, ಸೂಕ್ಷ್ಮ ನಿರ್ವಹಣೆಯ ಹೊರೆ ಶಾಸಕರು, ಅಧಿಕಾರಿಗಳು ಸಂಸದರ ಮೇಲಿರುವುದು ಸವಾಲಾಗಿದೆ.

ಬೆಂಗಳೂರಿನಲ್ಲಿ 198 ವಾರ್ಡ್‌ಗಳಿದ್ದು, ದಟ್ಟವಾದ ಜನಸಂಖ್ಯೆ ಸಹ ಹೊಂದಿದೆ. ಹೆಚ್ಚುತ್ತಿರುವ ನಾಗರಿಕ ಸಮಸ್ಯೆಗಳ ಹೊರತಾಗಿಯೂ, ಬೆಂಗಳೂರು ಪೂರ್ಣ ಪ್ರಮಾಣದ ಆಡಳಿತ ಮಂಡಳಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಮಳೆಗಾಲದಲ್ಲಿ ನಗರಕ್ಕೆ ಕೌನ್ಸಿಲರ್‌ಗಳಿಲ್ಲದೆ ಇದು ನಾಲ್ಕನೇ ಬಾರಿಗೆ ಸಮಸ್ಯೆ ಎದುರಿಸುತ್ತಿದ. 2007 ರಿಂದ 2010 ರವರೆಗೆ ಯಾವುದೇ ಕೌನ್ಸಿಲ್ ಇರಲಿಲ್ಲ. ಮಳೆಗಾಲದಲ್ಲಿ ಯಾವುದೇ ಮಳೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ನಿವಾಸಿಗಳು ಮೊದಲು ಸ್ಥಳೀಯ ಕೌನ್ಸಿಲರ್ ಗಳನ್ನು ಸಂಪರ್ಕಿಸುತ್ತಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪ ಮೇಯರ್ ಎಸ್ ಹರೀಶ್ TNIE ಗೆ ತಿಳಿಸಿದ್ದಾರೆ.

ಪ್ರತಿ ವಾರ್ಡ್ ಕಚೇರಿಯಲ್ಲಿ ಅಧಿಕಾರಿಗಳ ತಂಡವಿದೆ, ಆ ಕೆಲಸಗಳನ್ನು ಮಾಡಲು ಕೌನ್ಸಿಲರ್‌ಗೆ ಸಾಧ್ಯವಾಗುತ್ತದೆ. ಕೌನ್ಸಿಲರ್ ಹಿಡಿತ ಹೊಂದಿದ್ದಾರೆ. ಸೂಕ್ಷ್ಮ ನಿರ್ವಹಣೆಯಲ್ಲಿ ಉತ್ತಮರಾಗಿದ್ದಾರೆ, ಇದು ಶಾಸಕರು ಅಥವಾ ಸಂಸದರಿಗೆ ಕಷ್ಟವಾಗಬಹುದು. ಕೌನ್ಸಿಲರ್‌ಗಳು ತಮ್ಮ ವಾರ್ಡ್‌ಗಳಲ್ಲಿನ ಪ್ರತಿಯೊಂದು ರಸ್ತೆ ಮತ್ತು ಲೇಔಟ್, ವಿಶೇಷವಾಗಿ ತಗ್ಗು ಪ್ರದೇಶಗಳ ಬಗ್ಗೆ ತಿಳಿದಿದ್ದಾರೆ. ಅಲ್ಲದೆ, ಒಬ್ಬ ಕೌನ್ಸಿಲರ್ ಜವಾಬ್ದಾರಿ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ ಚುನಾವಣೆಯೂ ನಿಗದಿತ ಸಮಯಕ್ಕೆ ನಡೆಯುತ್ತದೆ, ಅದು ವಿಧಾನಸಭೆ ಅಥವಾ ಲೋಕಸಭೆ ಅಥವಾ ಎಂಎಲ್‌ಸಿ ಚುನಾವಣೆಯಾಗಿರಲಿ, ಆದರೆ ಬಿಬಿಎಂಪಿ ಚುನಾವಣೆ ಯಾವಾಗಲೂ ವಿಳಂಬವಾಗುತ್ತದೆ ಎಂದು ಹರೀಶ್ ಹೇಳಿದರು. ಪ್ರತಿ ಬಾರಿಯೂ ಅವರು ಮೀಸಲಾತಿ ಅಥವಾ ಡಿಲಿಮಿಟೇಶನ್‌ನಂತಹ ಕಾರಣಗಳನ್ನು ಮುಂದಿಡುತ್ತಾರೆ, ಅಧಿಕಾರಿಗಳು ತಡವಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಾರೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದ ಮುಂದಿದೆ ಎಂದಿದ್ದಾರೆ.

BBMP (file image)
ಬಿಬಿಎಂಪಿ ಮೇಯರ್ ಚುನಾವಣೆ: ಬಿಜೆಪಿ ಕಾರ್ಪೊರೇಟರ್‌ಗಳಿಂದ ಡಿಕೆಶಿ ಭೇಟಿ

ಕೌನ್ಸಿಲರ್ ಗಳು ಪ್ರತಿ ವಾರ್ಡ್ ಅನ್ನು ಔಪಚಾರಿಕವಾಗಿ ಪ್ರತಿನಿಧಿಸುತ್ತಾರೆ, ಅವರು ತಮ್ಮದೇ ಆದ ಜನರನ್ನು ಹೊಂದಿರುತ್ತಾರೆ, ಅವರು ಕೇವಲ ಫೋನ್ ಕರೆಯಲ್ಲಿ ಮನೆ ಬಾಗಿಲಿಗೆ ಲಭ್ಯವಿರುತ್ತಾರೆ. ಈ ರೀತಿಯ ವ್ಯವಸ್ಥೆ ಅಥವಾ ಕಾರ್ಯವಿಧಾನವು ವಾರ್ಡ್ ಎಂಜಿನಿಯರ್ ಅಥವಾ ಶಾಸಕರಿಂದ ಸಾಧ್ಯವಿಲ್ಲ. ಅಧಿಕಾರ ವಿಕೇಂದ್ರೀಕರಣಗೊಂಡರೆ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ. ಕೌನ್ಸಿಲರ್‌ಗಳು ಮತ್ತು ಅವರ ತಂಡವು ಸ್ಥಳಕ್ಕೆ ತಲುಪುತ್ತದೆ ಮತ್ತು ಶಾಸಕರು ಮತ್ತು ಇತರ ಕಾರ್ಯವಿಧಾನಗಳಿಗಿಂತ ಹೆಚ್ಚು ವೇಗವಾಗಿ ಕೌನ್ಸಿಲರ್ ಗಳು ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೌನ್ಸಿಲರ್ ಗಳ ಅನುಪಸ್ಥಿತಿಯಲ್ಲಿ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಮೇಲೆ ಹೊರೆ ಹೆಚ್ಚಿದೆ ಎಂದರು. ಶಾಸಕರು ಮತ್ತು ಸಂಸದರ ಕರ್ತವ್ಯವೆಂದರೆ ಕಾನೂನುಗಳನ್ನು ಮಾಡುವುದಾಗಿದೆ. ಪ್ರವಾಹ ರಸ್ತೆಗಳಲ್ಲಿ ನಿಂತ ನೀರನ್ನು ಮೇಲ್ವಿಚಾರಣೆ ಮಾಡುವುದಲ್ಲ ಎಂದು ಅವರು ಹೇಳಿದರು. ಈ ವಿಷಯ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿದ್ದು, ನಂತರ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ಹೊಸ 225 ವಾರ್ಡ್‌ಗಳಿಗೆ ವಾರ್ಡ್‌ ಮೀಸಲು ನೀಡುವುದಾಗಿ ಸರಕಾರ ವಿಳಂಬ ಮಾಡುತ್ತಿದೆ. ಏತನ್ಮಧ್ಯೆ, ಬೃಹತ್ ಬೆಂಗಳೂರು ಆಡಳಿತ ಮಸೂದೆಗೆ ಸರ್ಕಾರವೂ ಸಜ್ಜಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com