ಎಡೆಬಿಡದೆ ಸುರಿಯುತ್ತಿರುವ ಮಳೆ: ಮಲೆನಾಡು ಪ್ರದೇಶದ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿ

ನಿನ್ನೆ ಸಂಜೆ ಆಲ್ದೂರು ಹೋಬಳಿ ವ್ಯಾಪ್ತಿಯ ದೊಡ್ಡಮಾಗರವಳ್ಳಿ ಮತ್ತು ಚಿಕ್ಕಮಾಗರವಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಕಾಫಿ ಗಿಡಗಳು ಕೊಚ್ಚಿ ಹೋಗಿದ್ದು, ಹಲವು ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ.
Heavy rain caused extensive damage to the coffee crops in Malnad region
ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗೆ ಅಪಾರ ಹಾನಿಯಾಗಿದೆ
Updated on

ಚಿಕ್ಕಮಗಳೂರು: ಗುಡುಗು, ಸಿಡಿಲು ಸಹಿತ ಎಡೆಬಿಡದೆ ಸುರಿದ ಮಳೆಗೆ ಮಲೆನಾಡು ಭಾಗದ ಕಾಫಿ ಬೆಳೆಗಾರರ ​​ಬದುಕು ಅತಂತ್ರವಾಗಿದ್ದು, ಬೆಳೆಗಾರರು ಶೇ 30ರಷ್ಟು ತಮ್ಮ ಬೆಳೆ ಕಳೆದುಕೊಂಡಿದ್ದಾರೆ. ಕಾಫಿ ಎಸ್ಟೇಟ್‌ಗಳಲ್ಲಿ ಆಂತರಿಕ ಬೆಳೆಯಾಗಿ ಬೆಳೆದ ಕರಿಮೆಣಸು ಕೂಡ ಹಾನಿಯಾಗಿದೆ. ಶೇಕಡಾ 80 ರಷ್ಟು ಕಾಳುಮೆಣಸಿನ ಬಳ್ಳಿಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಆಲ್ದೂರು ಹೋಬಳಿ ವ್ಯಾಪ್ತಿಯ ದೊಡ್ಡಮಾಗರವಳ್ಳಿ ಮತ್ತು ಚಿಕ್ಕಮಾಗರವಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಕಾಫಿ ಗಿಡಗಳು ಕೊಚ್ಚಿ ಹೋಗಿದ್ದು, ಹಲವು ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸಮೀಪದ ಹೊಳೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಭತ್ತದ ಗದ್ದೆ ಹಾಗೂ ಕಾಫಿ ತೋಟ ಮುಳುಗಡೆಯಾಗಿದೆ ಎಂದು ರೈತ ಸುರೇಶ್ ಹೇಳುತ್ತಾರೆ.

ಕಾಫಿ ಬೆಳೆಗಾರ ಪುಟ್ಟ ಸ್ವಾಮಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಇಂತಹ ಭಯಾನಕ ಮೇಘಸ್ಫೋಟವನ್ನು ನಾವು ನೋಡಿಲ್ಲ. ಸುಮಾರು 20 ವರ್ಷಗಳ ಹಿಂದೆ ಈ ರೀತಿಯ ಧಾರಾಕಾರ ಮಳೆ ಕಂಡಿದ್ದೆವು ಎನ್ನುತ್ತಾರೆ.

Heavy rain caused extensive damage to the coffee crops in Malnad region
ಕಾಫಿ ಪ್ರಿಯರಿಗೆ ಬಿಗ್ ಶಾಕ್: ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ..!

ನೆರಳಿನ ಮರಗಳ ಮೇಲೆ ಲಂಬವಾಗಿ ಬೆಳೆಯುವ ಕಾಳುಮೆಣಸಿನ ಬಳ್ಳಿಗಳು ಕಾಫಿ ತೋಟಗಳಲ್ಲಿ ಬೆಳೆಗಾರರಿಗೆ ಆದಾಯದ ಆಧಾರವಾಗಿದೆ. ಈ ತಾಪಮಾನವು ಪಶ್ಚಿಮ ಘಟ್ಟಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ವಿಶಿಷ್ಟವಾಗಿದೆ. ಆದರೆ ಭಾರೀ ಮಳೆಯಿಂದಾಗಿ ತೇವಾಂಶ ಹೆಚ್ಚಿದ್ದು, ಕಾಫಿ ಬೆಳೆಗೆ ಬಾಧೆ ತೋರುವ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿರುವ ಪ್ರದೇಶಗಳನ್ನು ಕಾಫಿ ಮಂಡಳಿ ಗುರುತಿಸಿದ್ದು, ಶೇ.30ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ಬೆಳೆಗಾರರಿಗೆ ಎರಡು ಹೆಕ್ಟೇರ್‌ಗೆ 52 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com