
ಬೆಂಗಳೂರು: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ 19 ವರ್ಷದ ಯುವಕ ಗುರುವಾರ ಬೆಳಗ್ಗೆ ವರ್ತೂರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.
ಇಝಾರುಲ್ ಎಸ್.ಕೆ ಎಂಬಾತ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ವರ್ತೂರು ಕೆರೆಯಲ್ಲಿ ಕೊಚ್ಚಿ ಹೋಗಿದ್ದಾನೆ. ವರ್ತೂರು ಬಳಿಯ ಶೆಡ್‌ಗಳಲ್ಲಿ ವಾಸಿಸುವ ಇಝರುಲ್ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರ ಜೊತೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹೊಳೆ ಬಳಿ ಪ್ಲಾಸ್ಟಿಕ್ ತ್ಯಾಜ್ಯದ ಬಾಟಲಿಗಳು ಮತ್ತು ಚೀಲಗಳನ್ನು ಎಸೆಯಲು ಹೋಗಿದ್ದರು ಎಂದು ಸ್ವರಾಜ್ ಅಭಿಯಾನ್ ಎನ್‌ಜಿಒ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಆರ್ ಕಲೀಮುಲ್ಲಾ ತಿಳಿಸಿದ್ದಾರೆ.
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಹೊಳೆ ಉಕ್ಕಿ ಹರಿಯುತ್ತಿತ್ತು. ಇಝರುಲ್ ಅವರ ಚಿಕ್ಕಪ್ಪರು ಅವನನ್ನುತುಂಬಿ ಹರಿಯುತ್ತಿದ್ದ ಹೊಳೆಯಿಂದ ರಿಸಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ. ಶೋಧ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಕತ್ತಲೆಯಾದ ಕಾರಣ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಶುಕ್ರವಾರ ಶೋಧವನ್ನು ಪುನರಾರಂಭಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement