ನಿರ್ಗತಿಕರಿಗೆ, ದುರ್ಬಲರಿಗೆ ದಾನ ಮಾಡಲು ಕಟ್ಟುಪಾಡುಗಳು ಇರಬಾರದು: ಉಪರಾಷ್ಟ್ರಪತಿ ಧನಕರ್
ಮಂಡ್ಯ: ಫಲಾನುಭವಿಯ ನಂಬಿಕೆಯ ಮೇಲೆ ಪ್ರಭಾವ ಬೀರಲು ದಾನದ ರಚನಾತ್ಮಕ ಬಳಕೆಯು ಪ್ರಜಾಪ್ರಭುತ್ವದಲ್ಲಿ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಧನಕರ್ ಅವರು, ನಿರ್ಗತಿಕರಿಗೆ, ಅಂಚಿನಲ್ಲಿರುವವರಿಗೆ ಮತ್ತು ದುರ್ಬಲರಿಗೆ ಸಹಾಯ ಮಾಡಲು ಯಾವುದೇ ಕಟ್ಟುಪಾಡುಗಳು ಇರಬಾರದು ಎಂದರು.
"ದಾನ, ನೆರವು ಅಥವಾ ಅಂತಹ ಕೈಹಿಡಿಯುವಿಕೆಯು ಯಾವುದೇ ಕಟ್ಟುಪಾಡುಗಳಿಲ್ಲದೆ ಇರಬೇಕು. ನಮ್ಮ ನಾಗರಿಕತೆಯ ನೀತಿಯು ಎಂದಿಗೂ ದಾನದ ಬಗ್ಗೆ ಮಾತನಾಡುವುದಿಲ್ಲ. ದಾನ ಮಾಡಿರುವುದನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ. ನೀವು ಅದನ್ನು ಮಾಡುತ್ತೀರಿ ಮತ್ತು ಮರೆತುಬಿಡುತ್ತೀರಿ" ಎಂದು ಧನಕರ್ ಹೇಳಿದರು.
ದೇಶದ ಜಿಡಿಪಿ ಹೆಚ್ಚಳವಾಗಿದ್ದು, ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿ ದಾಪುಗಾಲು ಇಡುತ್ತಿದ್ದೇವೆ. ಭ್ರಷ್ಟಾಚಾರಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ದೇಶದಲ್ಲಿ ಅವಕಾಶಗಳ ಬಾಗಿಲು ತೆರೆದಿದ್ದು, ಯುವಕರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸದವಕಾಶ ಎಂದು ಉಪ ರಾಷ್ಟ್ರಪತಿಗಳು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿ, ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.