ಮೀಸಲಾತಿ ರದ್ದು ಕುರಿತು ರಾಹುಲ್ ಗಾಂಧಿ ಹೇಳಿಕೆ ಸಂವಿಧಾನ ವಿರೋಧಿ ಮನಸ್ಥಿತಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಮುಂಬೈನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಸಂವಿಧಾನದ ಆತ್ಮವನ್ನು ಮರೆತಿರುವುದರಿಂದ ಭಾರತದ ಸಂವಿಧಾನದ ಬಗ್ಗೆ ಜಾಗೃತಿ ಹೆಚ್ಚಿಸುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದರು.
ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್
ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್
Updated on

ಮುಂಬೈ: ಮೀಸಲಾತಿ ಸೌಲಭ್ಯ ಕೊನೆಗಾಣಿಸುವ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ‘ಸಂವಿಧಾನ ವಿರೋಧಿ ಮನಸ್ಥಿತಿ’ಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಸಂವಿಧಾನದ ಆತ್ಮವನ್ನು ಮರೆತಿರುವುದರಿಂದ ಭಾರತದ ಸಂವಿಧಾನದ ಬಗ್ಗೆ ಜಾಗೃತಿ ಹೆಚ್ಚಿಸುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದರು.

ಮೀಸಲಾತಿಯನ್ನು ಕೊನೆಗೊಳಿಸಬೇಕು ಎಂದು ವಿದೇಶಿ ನೆಲದಲ್ಲಿ ಸಾಂವಿಧಾನಿಕ ಹುದ್ದೆಯ ವ್ಯಕ್ತಿಯೊಬ್ಬರು ಅದೇ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಒತ್ತಿಹೇಳುತ್ತಾರೆ. ಮೀಸಲಾತಿ ವಿರುದ್ಧ ಪೂರ್ವಾಗ್ರಹಪೀಡಿತರು ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅದೇ ಹಳೆಯ ಸಂವಿಧಾನ ವಿರೋಧಿ ಮನಸ್ಥಿತಿ ಎಂದರು.

ಮೀಸಲಾತಿ ಅರ್ಹತೆಗೆ ವಿರುದ್ಧವಲ್ಲ, ಇದು ದೇಶ ಮತ್ತು ಸಂವಿಧಾನದ ಆತ್ಮ. ಇದು ಸಕಾರಾತ್ಮಕ ಕ್ರಮವಾಗಿದೆ, ನಕಾರಾತ್ಮಕವಲ್ಲ. ಇದು ಯಾರನ್ನಾದರೂ ಅವಕಾಶದಿಂದ ವಂಚಿತಗೊಳಿಸುವುದಿಲ್ಲ, ಸಮಾಜದ ಶಕ್ತಿಯ ಆಧಾರ ಸ್ತಂಭಗಳಾದವರನ್ನು ಕೈ ಹಿಡಿಯುತ್ತದೆ ಎಂದರು.

ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಗಾಂಧಿ, ಭಾರತವು ಸಮಾಜದ ಎಲ್ಲಾ ನಾಗರಿಕರಿಗೂ ನ್ಯಾಯಯುತವಾದ ಸ್ಥಳ ಸಿಗಬೇಕು ಎನ್ನುವಾಗ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತದೆ ಎಂದು ಹೇಳಿದ್ದರು.

ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್
ಪ್ರಜಾಸತ್ತಾತ್ಮಕ ಸಂಸ್ಥೆಗಳ ನಾಶಕ್ಕೆ ಸಂಘಟಿತ ಪ್ರಯತ್ನ ನಡೆದಿದೆ: Mallikarjun Kharge

ಸಂವಿಧಾನ ಹುದ್ದೆಯಲ್ಲಿರುವ ನಾಯಕರ ವಿದೇಶಿ ಪ್ರವಾಸವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸುವುದಾಗಿರಬೇಕು, ಸಂವಿಧಾನವನ್ನು ಗೌರವಿಸುವಂತಹ ಕರ್ತವ್ಯಗಳನ್ನು ಅನುಸರಿಸಬೇಕೆ ಹೊರತು ಸಂವಿಧಾನಕ್ಕೆ ಸಾರ್ವಜನಿಕವಾಗಿ ಅಗೌರವವನ್ನು ವ್ಯಕ್ತಪಡಿಸಬಾರದು ಎಂದಿದ್ದಾರೆ.

ಸಂವಿಧಾನವನ್ನು ಪುಸ್ತಕದಂತೆ ಬಿಂಬಿಸಬಾರದು. ಅದನ್ನು ಗೌರವಿಸಬೇಕು, ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಯಾವುದೇ ಸಜ್ಜನರು, ಬುದ್ಧಿವಂತರು ಅಥವಾ ಸಂವಿಧಾನವನ್ನು ಗೌರವಿಸುವ ವ್ಯಕ್ತಿಗಳು ಇಂತಹ ನಡವಳಿಕೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಉಪ ರಾಷ್ಟ್ರಪತಿಗಳು ಹೇಳಿದರು.

ಜೂನ್ 25, 1975 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಆಗಿನ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರನ್ನು ಟೀಕಿಸಿದರು ಮತ್ತು ಇದು ನಮ್ಮ ಪ್ರಜಾಪ್ರಭುತ್ವದ ಕರಾಳ ಅವಧಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com