• Tag results for ಸಂವಿಧಾನ

ಸಂವಿಧಾನದ ಮೇಲಿನ ಚರ್ಚೆ ಮುಕ್ತಾಯ, 8 ದಿನ‌ 36 ಸದಸ್ಯರಿಂದ 25 ಗಂಟೆ ಚರ್ಚೆ!

ಕಳೆದ ಎಂಟು‌ ದಿನಗಳಿಂದ ವಿಧಾನ ಪರಿಷತ್ ನಲ್ಲಿ ನಡೆಯುತ್ತಿದ್ದ ಭಾರತ ಸಂವಿಧಾನದ ಮೇಲಿನ ಚರ್ಚೆ ಗುರುವಾರ ಮುಕ್ತಾಯಗೊಂಡಿದೆ, ಒಟ್ಟು‌ 36 ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದು‌ 25.33 ಗಂಟೆಗಳ ಕಾಲ ಚರ್ಚೆ ನಡೆಯಿತು.

published on : 19th March 2020

ವಿಧಾನಸಭಾ ಅಧಿವೇಶನ: ಸಂವಿಧಾನ ಕುರಿತು ಸದಸ್ಯರಿಂದ ವಿಸ್ತೃತ ಚರ್ಚೆ

ವಿಧಾನಸಭೆಯಲ್ಲಿಂದು ಸಂವಿಧಾನ ಕುರಿತು ವಿಶೇಷ ಕಲಾಪದಲ್ಲಿ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

published on : 6th March 2020

ಚುನಾಯಿತ ಪ್ರತಿನಿಧಿಗಳ ದ್ವಂದ್ವ; ಸಂವಿಧಾನದ ಆಶಯಗಳಿಗೆ ಪೆಟ್ಟು- ರಮೇಶ್ ಕುಮಾರ್

ಸಂವಿಧಾನದ ಆಶಯ, ಗುರಿ ನಿಜವಾದ ಅರ್ಥದಲ್ಲಿ ಜಾರಿಗೆ ಬಾರದೇ ಇರಲು ಚುನಾಯಿತ ಪ್ರತಿನಿಧಿಗಳಲ್ಲಿರುವ ದ್ವಂದ್ವ ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಹಾಗೂ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ

published on : 5th March 2020

ತೀವ್ರ ಟೀಕೆಯ ನಂತರ ಸಂವಿಧಾನದ ಕುರಿತ ತಮ್ಮ ಭಾಷಣ ತಿದ್ದುಪಡಿ ಮಾಡಿದ ಸ್ಪೀಕರ್ ಕಾಗೇರಿ

ಸಂವಿಧಾನ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್.ರಾವ್ ರಚಿಸಿಕೊಟ್ಟಿದ್ದರು. ಅದನ್ನು ಚರ್ಚಿಸಿ ಕೆಲವು ಮಾರ್ಪಾಡುಗಳನ್ನು ಮಾಡಿ ಭಾರತದ ಸಂವಿಧಾನ ರಚಿಸಲಾಯಿತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು...

published on : 5th March 2020

ಸಂವಿಧಾನ ರಚನೆಯ ಸಕಲ ಗೌರವವೂ ಡಾ. ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು: ವಿವಾದಕ್ಕೆ ತೆರೆ ಎಳೆದ ಯಡಿಯೂರಪ್ಪ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಒಬ್ಬರೇ ಸಂವಿಧಾನ ಕರಡು ಸಿದ್ಧಪಡಿಸಿದ್ದರು. ದಮನಿತರು, ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು.

published on : 4th March 2020

ಶಾಸಕರಿಗೆ ಸಂವಿಧಾನದ ಕನ್ನಡ ಪ್ರತಿ ಹಂಚಿಕೆ- ಬಿಎಸ್ ಯಡಿಯೂರಪ್ಪ 

ಮಾರ್ಚ್ 2 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 4 ಮತ್ತು 5 ರಂದು ಎಲ್ಲಾ ಶಾಸಕರಿಗೂ ಸಂವಿಧಾನದ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

published on : 27th February 2020

ಪ್ರತಿಯೊಬ್ಬ ಶಾಸಕರಿಗೂ ಸಂವಿಧಾನದ ಕನ್ನಡ ಪ್ರತಿ ನೀಡುತ್ತೇವೆ: ಯಡಿಯೂರಪ್ಪ

ಈ ಬಾರಿಯ ಬಜೆಟ್ ವೇಳೆ ಸಂವಿಧಾನವನ್ನು ಅನುವಾದಿಸಿ ಕನ್ನಡಕ್ಕೆ ಮುದ್ರಿಸಿ ಎಲ್ಲ ಶಾಸಕರಿಗೂ ಓದಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

published on : 26th February 2020

ವಿಧಾನಸಭೆಯಲ್ಲಿ ಮಾರ್ಚ್ 2 ಮತ್ತು 3 ರಂದು ಸಂವಿಧಾನ ಕುರಿತ ವಿಶೇಷ ಚರ್ಚೆಗೆ ಅವಕಾಶ- ಕಾಗೇರಿ

ರಾಜ್ಯ ವಿಧಾನಸಭೆಯಲ್ಲಿ ಮಾರ್ಚ್ 2 ಮತ್ತು 3 ರಂದು ಭಾರತ ಸಂವಿಧಾನದ ಆಶಯಗಳು, ಸ್ವರೂಪ ಹಾಗೂ ಸಾಕಾರ ಕುರಿತಂತೆ ಎರಡು ದಿನಗಳ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿಧಾನಸಭಾ ಸ್ಪೀಖರ್ ವಿಶ್ವೇಶರ ಹೆಗಡೆ ಕಾಗೇರಿ ಹೇಳಿದ್ದಾರೆ

published on : 14th February 2020

ಸಂವಿಧಾನದ ಮೂಲಭೂತ ಅಂಶವನ್ನು ಬದಲಿಸಲು ಕೋರ್ಟ್ ಗೆ ಅನುಮತಿ ಇಲ್ಲ: ಮೀಸಲಾತಿ ಕುರಿತ ತೀರ್ಪಿಗೆ ಸಿದ್ದರಾಮಯ್ಯ 

ಮೀಸಲಾತಿ ಮೂಲಭುತ ಹಕ್ಕಲ್ಲ ಎಂದಿರುವ ಸುಪ್ರೀಂ ಕೋರ್ಟ್ ಸಂವಿಧಾನದ ಆಶಯದ ವಿರುದ್ಧವಾಗಿ ತೀರ್ಪು ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

published on : 12th February 2020

ಸಂವಿಧಾನದ ಆಶಯಕ್ಕೆ ವಿರುದ್ಧವಾದ  ಕೇಂದ್ರದ ಸಿಎಎ ಕಾಯ್ದೆಗೆ ನನ್ನ ವಿರೋಧವಿದೆ: ಚಿತ್ರ ನಿರ್ದೇಶಕ ಬಿ.ಸುರೇಶ್

ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮಾಧಾರಿತವಾಗಿದ್ದು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ಕಾಯ್ದೆಯನ್ನು ವಿರೋಧಿಸುವುದಾಗಿ ಕಿರುತೆರೆ ಸಿನಿಮಾಗಳ ನಿರ್ದೇಶಕ ಬಿ.ಸುರೇಶ್ ಹೇಳಿದ್ದಾರೆ.  

published on : 7th February 2020

ಮದುವೆಯಲ್ಲೂ ಮಾನವೀಯತೆ: ಅನಾಥಾಶ್ರಮದಲ್ಲಿ ನಡೆದ ನಟ ಚೇತನ್-ಮೇಘ ಆರತಕ್ಷತೆ

'ಆ ದಿನಗಳು' ಖ್ಯಾತಿಯ ನಟ ಚೇತನ್‌ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮೇಘಾ ಅವರ ಜತೆ ಫೆಬ್ರವರಿ 1ರಂದು ಶನಿವಾರ ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

published on : 4th February 2020

ಪೌರತ್ವ ನಿರಾಕರಣೆ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಬಿಜೆಪಿ ಪ್ರಯತ್ನ: ಸಿದ್ದರಾಮಯ್ಯ ಗಂಭೀರ ಆರೋಪ

 ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಜಾರಿ ಬಗೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕೇಸರಿ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಸಿಎಎ ವಿರುದ್ಧ ಆಯೋಜಿಸಲಾಗಿದ್ದ  ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ ಅವರು, ಸಂವಿಧಾನದ ಮೂಲ ಸ್ವರೂಪ ಮತ್ತು ಮನೋಭಾವಕ್ಕೆ ವಿರುದ್ಧವಾದ ಇಂತಹ ಕಾನೂನುಗಳನ್ನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ

published on : 3rd February 2020

ವಲಸಿಗರನ್ನು ಪತ್ತೆ ಹಚ್ಚಲು ಹೊಸ ಕಾನೂನು ಅಗತ್ಯವಿಲ್ಲ, ಸದ್ಯದ ಕಾನೂನು ಸಾಕು: ಪ್ರಶಾಂತ್ ಭೂಷಣ್

ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಹೊಸ ಕಾನೂನಿನ ಅಗತ್ಯವಿಲ್ಲ. ಈಗ ಇರುವ ಕಾನೂನುಗಳೇ ಸಾಕು ಎಂದು ಸಾಮಾಜಿಕ ಹೋರಾಟಗಾರ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

published on : 2nd February 2020

ದೇಶವನ್ನು ವಿಭಜಿಸುವ ಯತ್ನದ ನಡುವೆ ಸಮಯ ಸಿಕ್ಕರೆ ಇದನ್ನು ಓದಿ: ಮೋದಿಗೆ ಸಂವಿಧಾನ ಪುಸ್ತಕ ಕಳುಹಿಸಿದ ಕಾಂಗ್ರೆಸ್

ಗಣರಾಜ್ಯೋತ್ಸವ ದಿನಾಚರಣೆಯಂದೇ ಪ್ರಧಾನಮಂತ್ರ ನರೇಂದ್ರ ಮೋದಿಗೆ ಕಾಂಗ್ರೆಸ್ ಸಂವಿಧಾನದ ಪ್ರತಿಯನ್ನು ಕಳುಹಿಸಿದ್ದು, ದೇಶವನ್ನು ವಿಭಜಿಸುವ ನಿಮ್ಮ ಪ್ರಯತ್ನದ ನಡುವೆ ಕಾಲಾವಕಾಶ ಸಿಕ್ಕರೆ ಇದನ್ನು ಓದಿ ಎಂದು ಟಾಂಗ್ ನೀಡಿದೆ. 

published on : 27th January 2020

ರಾಷ್ಟ್ರ ವಿಭಜನೆ ಕೆಲಸದ ನಡುವೆ ಬಿಡುವಾದಾಗ ಓದಿ! ಸಂವಿಧಾನದ ಪ್ರತಿಯನ್ನು ಪ್ರಧಾನಿಗೆ ಕಳಿಸಿದ ಕಾಂಗ್ರೆಸ್

71 ನೇ ಗಣರಾಜ್ಯೋತ್ಸವದ ದಿನವಾದ ಭಾನುವಾರ ಕಾಂಗ್ರೆಸ್ ಸಂವಿಧಾನದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದೆ."ನೀವು ದೇಶವನ್ನು ವಿಭಜಿಸುವ ಕೆಲಸದಿಂದ ಬಿಡುವಾದಾಗ ದಯವಿಟ್ಟು ಇದನ್ನು  ಓದಿ" ಎಂದು ಹೇಳಿದೆ.  

published on : 26th January 2020
1 2 3 >