'ಮನುಸ್ಮೃತಿ ರಹಿತ' ಸಂವಿಧಾನದ ಬಗ್ಗೆ ತನ್ನ ಅಸಮಾಧಾನದಿಂದ RSS ಈಗ ಹೊರಬಂದು ಮುಂದೆ ಸಾಗಿದೆ: ಶಶಿ ತರೂರ್

ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ​​ಆಯೋಜಿಸಿದ್ದ "ವಾಕ್ಯ, ರಾಜತಾಂತ್ರಿಕತೆ ಮತ್ತು ವಿವೇಚನೆ" ಕುರಿತ ಚರ್ಚೆಯಲ್ಲಿ ಭಾಗವಹಿಸಿದ ನಂತರ ಶಶಿ ತರೂರ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
Shashi Tharoor
ಶಶಿ ತರೂರ್
Updated on

ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಹೇಳಿಕೆ ಮೂಲಕ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ, ಒಂದು ಕಾಲದಲ್ಲಿ ಸಂವಿಧಾನವನ್ನು ಅವಮಾನಿಸಿದ್ದ ಮತ್ತು ಅದರಲ್ಲಿ ಮನುಸ್ಮೃತಿಯ ಯಾವುದೇ ಮಾಹಿತಿ ಇಲ್ಲದಿರುವ ಬಗ್ಗೆ ವಿಷಾದಿಸುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಈಗ ಅಂತಹ ಸ್ಥಾನದಿಂದ ಹಿಂದೆ ಸರಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನವನ್ನು ಅಂಗೀಕರಿಸುವ ಸಮಯದಲ್ಲಿ, ಸಂವಿಧಾನದ ದೊಡ್ಡ ನ್ಯೂನತೆಗಳಲ್ಲಿ ಒಂದು ಎಂದರೆ ಅದರಲ್ಲಿ ಮನುಸ್ಮೃತಿಯ ಬಗ್ಗೆ ಏನೂ ಇಲ್ಲ ಎಂದು ಗೊಲ್ವಾಲ್ಕರ್ ಹೇಳಿದರು. ಆದರೆ ಆರ್‌ಎಸ್‌ಎಸ್ ಸ್ವತಃ ಆ ದಿನಗಳಿಂದ ಮುಂದುವರೆದಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಒಂದು ಐತಿಹಾಸಿಕ ಹೇಳಿಕೆಯಾಗಿ, ಅದು ನಿಖರವಾಗಿದೆ.

ಅದು ಇಂದು ಅವರು ಹೇಗೆ ಭಾವಿಸುತ್ತಾರೆ ಎಂಬುದರ ಪ್ರತಿಬಿಂಬವಾಗಲಿ, ಅದಕ್ಕೆ ಉತ್ತರಿಸಲು ಆರ್‌ಎಸ್‌ಎಸ್ ಅತ್ಯುತ್ತಮ ಸ್ಥಾನದಲ್ಲಿರಬೇಕು ಎಂದು ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ​​ಆಯೋಜಿಸಿದ್ದ "ವಾಕ್ಯ, ರಾಜತಾಂತ್ರಿಕತೆ ಮತ್ತು ವಿವೇಚನೆ" ಕುರಿತ ಚರ್ಚೆಯಲ್ಲಿ ಭಾಗವಹಿಸಿದ ನಂತರ ಶಶಿ ತರೂರ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

Shashi Tharoor
ಸ್ವತಂತ್ರ ಹಕ್ಕಿಯೂ ಹುಷಾರಾಗಿರಬೇಕು: ಶಶಿ ತರೂರ್ ಪೋಸ್ಟ್‌ಗೆ ಕಾಂಗ್ರೆಸ್ ತಿರುಗೇಟು

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವಂತೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಇತ್ತೀಚಿನ ಬೇಡಿಕೆಯನ್ನು ಅವರ ಪಕ್ಷ ತೀವ್ರವಾಗಿ ಖಂಡಿಸಿದ ಮಧ್ಯೆ ತರೂರ್ ಅವರ ಈ ಹೇಳಿಕೆ ಬಂದಿದೆ.

ದೇಶದ ತುರ್ತು ಪರಿಸ್ಥಿತಿ ಅವಧಿಯಲ್ಲಿ, 'ಸಮಾಜವಾದ' ಮತ್ತು 'ಜಾತ್ಯತೀತತೆ' ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಬಲವಂತವಾಗಿ ಸೇರಿಸಲಾಯಿತು. ಇಂದು, ಈ ಪದಗಳು ಹಾಗೆಯೇ ಉಳಿಯಬೇಕೆ ಎಂದು ನಾವು ಯೋಚಿಸಬೇಕು ಎಂದು ಹೊಸಬಾಳೆ ಹೇಳಿದ್ದರು.

ಈ ಹೇಳಿಕೆಯನ್ನು ನಮ್ಮ ಸಂವಿಧಾನದ ಆತ್ಮದ ಮೇಲೆ ಉದ್ದೇಶಪೂರ್ವಕ ದಾಳಿ ಎಂದು ಖಂಡಿಸಿದ ಕಾಂಗ್ರೆಸ್, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಾಂವಿಧಾನಿಕ ವಿರೋಧಿ ಕಾರ್ಯಸೂಚಿಯನ್ನು ಪ್ರತಿಪಾದಿಸುತ್ತಿವೆ ಎಂದು ಆರೋಪಿಸಿತು.

ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಪ್ರಜಾಪ್ರಭುತ್ವ ಭಾರತಕ್ಕಾಗಿನ ದೃಷ್ಟಿಕೋನವನ್ನು ಕೆಡವಲು ದೀರ್ಘಕಾಲದ ಪಿತೂರಿಯ ಭಾಗವಾಗಿದೆ - ಆರ್‌ಎಸ್‌ಎಸ್-ಬಿಜೆಪಿ ಯಾವಾಗಲೂ ಸಂಚು ರೂಪಿಸುತ್ತಿದೆ. ಸಂವಿಧಾನವನ್ನು ಅಂಗೀಕರಿಸಿದಾಗ, ಆರ್‌ಎಸ್‌ಎಸ್ ಅದನ್ನು ತಿರಸ್ಕರಿಸಿತು. ಅವರು ಅದನ್ನು ವಿರೋಧಿಸಲಿಲ್ಲ, ಅದನ್ನು ಸುಟ್ಟುಹಾಕಿದರು. ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನಾಯಕರು ತಮ್ಮ ಉದ್ದೇಶವನ್ನು ಮರೆಮಾಡಲಿಲ್ಲ. ಸಂವಿಧಾನವನ್ನು ಪುನಃ ಬರೆಯಲು 400 ಕ್ಕೂ ಹೆಚ್ಚು ಸ್ಥಾನಗಳು ಬೇಕು ಎಂದು ಅವರು ಬಹಿರಂಗವಾಗಿ ಘೋಷಿಸಿದರು ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ ನಲ್ಲಿ ಕಟುವಾಗಿ ಟೀಕಿಸಿತ್ತು.

50 ವರ್ಷಗಳ ಹಿಂದೆ ಆಗಿನ ಕಾಂಗ್ರೆಸ್ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡಿದ ತರೂರ್, ನಮ್ಮ ಇತಿಹಾಸದಲ್ಲಿ ಕೆಟ್ಟ ಅವಧಿಯಾಗಿತ್ತು ಎಂದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಹೇಳಿದರು, ಆದರೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ವತಃ ಚುನಾವಣೆಗಳಿಗೆ ಕರೆ ನೀಡಿದರು ಮತ್ತು ಫಲಿತಾಂಶವನ್ನು ಸೌಜನ್ಯದಿಂದ ಸ್ವೀಕರಿಸಿದರು.

ತುರ್ತು ಪರಿಸ್ಥಿತಿಯ 50ನೇ ವರ್ಷವನ್ನು ನಾವೆಲ್ಲರೂ ಸಂವಿಧಾನಕ್ಕೆ, ಸ್ವಾತಂತ್ರ್ಯದ ಮೌಲ್ಯಗಳಿಗೆ, ನಮ್ಮ ಸಂಸ್ಥಾಪಕರು ಹೋರಾಡಿ ಸ್ಥಾಪಿಸಿದ ಮೌಲ್ಯಗಳಿಗೆ ನಮ್ಮನ್ನು ಪುನಃ ಅರ್ಪಿಸಿಕೊಳ್ಳಲು ಬಳಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು,

ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡುತ್ತಿದ್ದು ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ಉಂಟುಮಾಡುತ್ತಿದೆಯಲ್ಲವೇ ಎಂದಾಗ, ತಮ್ಮ ಇತ್ತೀಚಿನ ರಷ್ಯಾ ಭೇಟಿಯು ಸಂಸದೀಯ ಸಂಪರ್ಕ ಮತ್ತು ರಾಜತಾಂತ್ರಿಕತೆ ಪೂರ್ವನಿಗದಿತ ಕಾರ್ಯಕ್ರಮವಾಗಿತ್ತು ಎಂದರು.

ಇದು ನನ್ನ ಸಹವರ್ತಿಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶವನ್ನು ನೀಡಿತು, ಹಳೆ ಸ್ನೇಹಿತ ರಷ್ಯಾದ ವಿದೇಶಾಂಗ ಸಚಿವರನ್ನು ಭೇಟಿಯಾದೆನು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com