
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ ವಿಜಯಪುರದ ವ್ಯಕ್ತಿ ಸಂತೋಷ್ ಪಾಟೀಲ್ ಈಗ ವ್ಯಾಪಕವಾಗಿ ಸುದ್ದಿಯಲ್ಲಿದ್ದಾರೆ.
ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಕರು ವ್ಯಾಪಕವಾದ ವಂಚನೆಯಲ್ಲಿ ತೊಡಗಿರುವುದರ ವಿಷಯವಾಗಿ ಮನ್ ಕೀ ಬಾತ್ ನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ವಿಜಯಪುರದ ಸಂತೋಷ್ ಪಾಟೀಲ್ ಎಂಬ ವ್ಯಕ್ತಿಯ ಹೆಸರು ಉಲ್ಲೇಖಿಸಿ ಆತನ ಹೋರಾಟದ ಬಗ್ಗೆ ಹೇಳಿದ್ದರು. ಈಗ ಸಂತೋಷ್ ಪಾಟೀಲ್ ಗೆ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗತೊಡಗಿದೆ.
ಪೊಲೀಸರಂತೆ ಸೋಗು ಹಾಕಿ, ಡಿಜಿಟಲ್ ಮೂಲಕ ಬಂಧಿಸಲು ಯತ್ನಿಸಿದ ವಂಚಕನನ್ನು ಜಾಣ್ಮೆಯಿಂದ ನಿಭಾಯಿಸಿದ್ದಕ್ಕಾಗಿ ಪಾಟೀಲ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಸೆಪ್ಟೆಂಬರ್ 19 ರಂದು ಹಿರಿಯ ಐಪಿಎಸ್ ಅಧಿಕಾರಿ ಮತ್ತು ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ವಿ ಸಿ ಸಜ್ಜನರ್ ಅವರು, ಪಾಟೀಲ್ ಮತ್ತು ವಂಚಕರನ್ನು ಒಳಗೊಂಡಿರುವ ವೀಡಿಯೊವನ್ನು ಹಂಚಿಕೊಂಡು, ಡಿಜಿಟಲ್ ಬಂಧನದ ಎಚ್ಚರಿಕೆ ನೀಡಿದ್ದರು. ಬಳಕ ಈ ಪ್ರಕರಣ ಮಹತ್ವ ಪಡೆದುಕೊಂಡಿತ್ತು.
ಭಾನುವಾರ ತಮ್ಮ ಮಾಸಿಕ 'ಮನ್ ಕಿ ಬಾತ್' ಪ್ರಸಾರದ ಸಂದರ್ಭದಲ್ಲಿ, ಡಿಜಿಟಲ್ ಬಂಧನದ ಸೈಬರ್ ಅಪರಾಧವನ್ನು ಎತ್ತಿ ತೋರಿಸುವ ಸಲುವಾಗಿ ಪಾಟೀಲ್ ಮತ್ತು ವಂಚಕರ ನಡುವಿನ ಸಂಭಾಷಣೆಯನ್ನು ಮೋದಿ ಹಂಚಿಕೊಂಡರು.
'X' ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಪಾಟೀಲ್ ಮೋದಿ ಮತ್ತು ಸಜ್ಜನರ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಇದೀಗ ವಿಡಿಯೋ/ಆಡಿಯೋ ವೈರಲ್ ಆಗತೊಡಗಿದೆ.
"ನೀವು (ಐಪಿಎಸ್ ಅಧಿಕಾರಿ) ವೀಡಿಯೊವನ್ನು ಹಂಚಿಕೊಂಡ ನಂತರ, ವೀಡಿಯೊ ಲಕ್ಷಗಳಲ್ಲಿ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸಾಕಷ್ಟು ರೀಟ್ವೀಟ್ ಆಗುತ್ತಿದೆ" ಎಂದು ಪಾಟೀಲ್ ಹೇಳಿದ್ದಾರೆ.
"ಡಿಜಿಟಲ್ ಬಂಧನದ ವಂಚಕರು ಫೋನ್ ಕರೆಗಳನ್ನು ಮಾಡಿ ಕೆಲವೊಮ್ಮೆ, ಪೋಲೀಸ್, ಸಿಬಿಐ, ಮಾದಕ ದ್ರವ್ಯಗಳನ್ನು ಸೋಗು ಹಾಕುತ್ತಾರೆ; ಕೆಲವೊಮ್ಮೆ ಆರ್‌ಬಿಐ... ಹೀಗೆ ವಿವಿಧ ಲೇಬಲ್‌ಗಳನ್ನು ಬಳಸಿ, ಅವರು ನಕಲಿ ಅಧಿಕಾರಿಗಳಂತೆ ಬಹಳ ವಿಶ್ವಾಸದಿಂದ ಮಾತನಾಡುತ್ತಾರೆ. 'ಮನ್ ಕಿ ಬಾತ್' ಅನ್ನು ಕೇಳುವವರು. ನಾವು ಈ ಬಗ್ಗೆ ಚರ್ಚಿಸಬೇಕು ಎಂದು ಬಯಸಿದ್ದೇವೆ ಎಂದು ಪಾಟೀಲ್ ಹೇಳಿದರು.
Advertisement