ಕೋಮು ದ್ವೇಷ ಹರಡಿ, ಇಸ್ಲಾಮೀಕರಣ ಮಾಡುತ್ತಿರುವ ಜಮೀರ್ ರನ್ನು ಸಂಪುಟದಿಂದ ಕಿತ್ತೊಗೆಯಿರಿ: ಜೋಶಿ

ಇಲ್ಲಿನ ಮುಸ್ಲಿಮರು ನಿಜವಾದವರಲ್ಲ. ಇಲ್ಲಿದ್ದವರೆಲ್ಲ ಹಿಂದೂಗಳು. ಅವರು ಬೆದರಿಕೆ ಮತ್ತು ಆಮಿಷಗಳಿಗೆ ಬಲಿಯಾದವರು. ಹೀಗಿರುವಾಗ ವಕ್ಫ್ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಹೇಗೆ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.
Pralhad Joshi
ಪ್ರಹ್ಲಾದ್ ಜೋಶಿ
Updated on

ಹುಬ್ಬಳ್ಳಿ: ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿರುವ, ಇಸ್ಲಾಮೀಕರಣ ಮಾಡಲು ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಕಬಳಿಕೆಯಲ್ಲಿ ಜಮೀರ್ ಅಹಮದ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು. ಜಮೀರ್ ಅಹ್ಮದ್ ರಾಜ್ಯ ಮತ್ತು ದೇಶವನ್ನು ಇಸ್ಲಾಮೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕೋಮು ದ್ವೇಷವನ್ನು ಹರಡುತ್ತಿದ್ದಾರೆ. ಧರ್ಮಾಂಧತೆಯಲ್ಲಿ ಮುಳುಗಿರುವ ಜಮೀರ್ ಅಹಮದ್ ಅವರನ್ನು ಮೊದಲು ಕಾಂಗ್ರೆಸ್ ಪಕ್ಷ ತೊಲಗಿಸಬೇಕು ಎಂದು ಜೋಶಿ ಒತ್ತಾಯಿಸಿದರು.

ಇಲ್ಲಿನ ಮುಸ್ಲಿಮರು ನಿಜವಾದವರಲ್ಲ. ಇಲ್ಲಿದ್ದವರೆಲ್ಲ ಹಿಂದೂಗಳು. ಅವರು ಬೆದರಿಕೆ ಮತ್ತು ಆಮಿಷಗಳಿಗೆ ಬಲಿಯಾದವರು. ಹೀಗಿರುವಾಗ ವಕ್ಫ್ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಹೇಗೆ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು. ವಕ್ಫ್‌ಗೆ ಯಾರೂ ಲಕ್ಷಾಂತರ ಎಕರೆಗಳನ್ನು ದಾನ ಮಾಡಿಲ್ಲ, ವಕ್ಫ್ ಇಷ್ಟು ಆಸ್ತಿಯನ್ನು ಹೇಗೆ ಸಂಪಾದಿಸುತ್ತದೆ? ಅವರು ದೇಣಿಗೆ ಎಂದು ಸರಳವಾಗಿ ಹೇಳಿಕೊಳ್ಳುತ್ತಾರೆ. ಯಾರಾದರೂ ಲಕ್ಷಾಂತರ ಎಕರೆಗಳನ್ನು ದಾನ ಮಾಡುತ್ತಾರೆಯೇ? ಅಂತಹ ದೇಣಿಗೆಗಳನ್ನು ಯಾರು ನೀಡಿದ್ದಾರೆ? ಲಕ್ಷಾಂತರ ಎಕರೆಯನ್ನು ವಕ್ಫ್‌ಗೆ ದಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜೋಶಿ ಹೇಳಿದರು. ವಕ್ಫ್ ಮೂಲಕ ರೈತರಿಗೆ ನೋಟಿಸ್ ನೀಡುವುದನ್ನು ಕಾನೂನುಬದ್ಧ ಅಥವಾ ನ್ಯಾಯಸಮ್ಮತವೆಂದು ಪರಿಗಣಿಸಲಾಗುವುದಿಲ್ಲ, ರೈತರ ಭೂಮಿಯನ್ನು ಕಸಿದುಕೊಳ್ಳಲು ಅವರು ಯಾರು ಎಂದು ಸಚಿವ ಪ್ರಲ್ಹಾದ್ ಜೋಶಿ ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Pralhad Joshi
ನಾನು ಭಾರತೀಯ, 24 ಕ್ಯಾರೆಟ್ Gold; ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ: ಜೋಶಿಗೆ ಜಮೀರ್ ತಿರುಗೇಟು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com