
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷ ಆಗಸ್ಟ್ ವರೆಗೆ ಸಂಭವಿಸಿದ 441 ಮಾರಣಾಂತಿಕ ವಾಹನ ಅಪಘಾತ ಪ್ರಕರಣಗಳಲ್ಲಿ 523 ಮಂದಿ ಸಾವನ್ನಪ್ಪಿದ್ದಾರೆ.
131 ಪಾದಚಾರಿ, 284 ದ್ವಿಚಕ್ರ ವಾಹನಗಳು, 19 ಬೈಸಿಕಲ್‌ಗಳು ಮತ್ತು 24 ಟ್ರಕ್‌ಗೆ ಸಂಬಂಧಿಸಿದ ಅಪಘಾತಗಳು ಸೇರಿವೆ. ನೆಲಮಂಗಲ, ಹೊಸಕೋಟೆ, ಆನೇಕಲ್ ಮತ್ತು ದೊಡ್ಡಬಳ್ಳಾಪುರದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಬ್ಲೈಂಡ್ ಸ್ಪಾಟ್‌ಗಳು, ಕಡಿಮೆ ಬೆಳಕು ಮತ್ತು ಅತಿಯಾದ ವೇಗದಿಂದಾಗಿ ಅಪಘಾತಗಳು ಸಂಭವಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ದೀರ್ಘ ವಾರಾಂತ್ಯದಲ್ಲಿ ಮಧ್ಯರಾತ್ರಿ 12 ರಿಂದ ಬೆಳಗ್ಗೆ 6ರ ನಡುವೆ ಹೆಚ್ಚಿನ ಅಪಘಾತಗಳು ಸಂಭವಿಸಿವೆ, ತಡರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಅಪಘಾತ ಸಂಭವಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ತಿಳಿಸಿದ್ದಾರೆ. ಹಲವಾರು ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆದೊಯ್ಯಬೇಕಾಗಿರುವುದರಿಂದ ವಾಹನದ ಸಂಖ್ಯೆ ಹೆಚ್ಚಿ ಅಪಘಾತಗಳ ಪ್ರಮಾಣದಲ್ಲಿಯೂ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬಾಬಾ ತಿಳಿಸಿದ್ದಾರೆ. ನೆಲಮಂಗಲ, ಹೊಸಕೋಟೆ ಮತ್ತು ಆನೇಕಲ್ ಪ್ರಮುಖ ಹೆದ್ದಾರಿ, ನೆಲಮಂಗಲ ಮುಂಬೈ-ದೆಹಲಿ ಹೆದ್ದಾರಿ ಹಾಗೂ ಹೊಸಕೋಟೆಗೆ ಚೆನ್ನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಬೇಕಾಗುತ್ತದೆ, ಹೀಗಾಗಿ ಅತಿಯಾದ ವೇಗದಲ್ಲಿ ವಾಹನಗಳು ಚಲಿಸುವುದರಿಂದ ಅಪಘಾತಗಳು ಸಾಮಾನ್ಯವಾಗಿದೆ ಎಂದು ಅವರು ವಿವರಿಸಿದರು.
ಅನೇಕ ಭಾರೀ ವಾಹನಗಳು ಓವರ್‌ಲೋಡ್ ಆಗಿರುತ್ತವೆ, ಇದು ಆಗಾಗ್ಗೆ ಸರಣಿ ಅಪಘಾತಗಳಿಗೆ ಕಾರಣವಾಗುತ್ತದೆ ಇದರಿಂದ ಅನೇಕ ಸಾವುಗಳು ನೋವುಗಳಿಗೆ ಕಾರಣವಾಗುತ್ತದೆ, ತೂಕದ ಮಿತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂದಿದ್ದಾರೆ.
ಬೆಂಗಳೂರು ಗ್ರಾಮಾಂತರದಿಂದ ನಗರಕ್ಕೆ ಅನೇಕ ಉದ್ಯೋಗಿಗಳು ಕಚೇರಿ ಕೆಲಸಕ್ಕೆ ಪ್ರಯಾಣಿಸಬೇಕಾಗಿರುವುದರಿಂದ ದಟ್ಟಣೆ ಹೆಚ್ಚಾಗಿದೆ ಎಂದು ಸಿ.ಕೆ ಬಾಬಾ ತಿಳಿಸಿದ್ದಾರೆ. ಈ ವಾಹನಗಳ ಸಂಚಾರ ದಟ್ಟಣೆಯಿಂದ ವಿಶೇಷವಾಗಿ ತಡ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ, ಹೆಚ್ಚಿನ ಅಪಘಾತ ದರಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.
ಕಳಪೆ ರಸ್ತೆ ಅಸಮರ್ಪಕ ಬೆಳಕು, ಕಡಿಮೆ ಬೆಳಕು ಹೆಚ್ಚಿನ ಅಪಾಯಕ್ಕೆ ಕಾರಣವಾಗಿ ಅಪಘಾತ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದಲ್ಲದೆ, ಜಾಯ್‌ವಾಕಿಂಗ್ ಮತ್ತು ಸಂಚಾರ ನಿಯಮ ಉಲ್ಲಂಘನೆಯು 523 ಅಪಘಾತಗಳಲ್ಲಿ 131 ಪಾದಚಾರಿಗಳ ಸಾವುಗಳಿಗೆ ಕಾರಣವಾಗಿದೆ, ಇದು ಒಟ್ಟು ಶೇಕಡಾ 25 ರಷ್ಟಿದೆ ಎಂದು ಬಾಬಾ ಹೇಳಿದರು.
ಸಿಸಿಟಿವಿಗಳು ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಜೊತೆಗೆ ಆಸ್ಪತ್ರೆಗಳೊಂದಿಗೆ ಸಮನ್ವಯದ ಅಗತ್ಯವಿದೆ ಎಂದಿದ್ದಾರೆ.
Advertisement