ಬೆಂಗಳೂರು 'ನೀಲಿ ದ್ರಾಕ್ಷಿ'ಗೆ ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಭಾರೀ ಬೇಡಿಕೆ

ಜಾಗತಿಕ ಮಾನ್ಯತೆ ಪಪಡೆದಿರುವ ಈ ನೀಲಿ ದ್ರಾಕ್ಷಿ ಹಣ್ಣಿನ ಪ್ರಭೇದಕ್ಕೆ ತಂಪಾದ ಹವಾಮಾನ ಅಂದರೆ 36- 37 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ತಾಪಮಾನದ ಅಗತ್ಯವಿದೆ. ಮಾಡರೇಟ್ ತಾಪಮಾನವು ಹಣ್ಣಿನ ಬಣ್ಣವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ನೀಲಿ ದ್ರಾಕ್ಷಿ ಹಣ್ಣಿನ ತಳಿಗೆ ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿರುವ ಅನುಕೂಲಕರ ಹವಾಮಾನದ ಕಾರಣದಿಂದ ಈ ತಳಿಗೆ ಈ ಹೆಸರು ಬಂದಿದೆ ಎಂದು ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಹಣ್ಣು ತಜ್ಞ ಎಸ್.ವಿ.ಹಿತ್ತಲಮನಿ ಹೇಳಿದ್ದಾರೆ.

ಜಾಗತಿಕ ಮಾನ್ಯತೆ ಪಪಡೆದಿರುವ ಈ ನೀಲಿ ದ್ರಾಕ್ಷಿ ಹಣ್ಣಿನ ಪ್ರಭೇದಕ್ಕೆ ತಂಪಾದ ಹವಾಮಾನ ಅಂದರೆ 36- 37 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ತಾಪಮಾನದ ಅಗತ್ಯವಿದೆ. ಮಾಡರೇಟ್ ತಾಪಮಾನವು ಹಣ್ಣಿನ ಬಣ್ಣವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದ್ದರಿಂದ, ಬೆಳೆಗೆ ಹಾನಿಯಾಗಿದೆ. ತಾಪಮಾನ ಏರಿಕೆಯೊಂದಿಗೆ, ಬಣ್ಣವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ಬದಲಾಗುತ್ತದೆ ಎಂದು ಹೇಳಿದ್ದಾರೆ.

ಹಣ್ಣಿನ ಬೇಡಿಕೆಯನ್ನು ಪೂರೈಸಲು, ರೈತರು ಬಣ್ಣ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ತಾಪಮಾನವನ್ನು ತಂಪಾಗಿರಿಸಲು ತಜ್ಞರು ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿದ್ದಾರೆ. ಹಣ್ಣಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಶೀಲಿಸಿದ ಸರ್ಕಾರ ಈಗ ವ್ಯಾಪಾರವನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಆದರೆ, ತಾಪಮಾನದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಜ್ಯೂಸ್ ತಯಾರಿಕೆಗೆ ನೀಲಿದ್ರಾಕ್ಷಿ ಶೇ.95 ರಷ್ಟು ಬೆಳೆ ಬಳಕೆಯಾಗಿದೆ. ಕೆಲವು ಭಾಗವನ್ನು ಡಿಸ್ಟಿಲರಿಗಳಿಗೂ ಕಳುಹಿಸಲಾಗುತ್ತದೆ ಎಂದು ತೋಟಗಾರಿಕೆ (ಹಣ್ಣು) ಹೆಚ್ಚುವರಿ ನಿರ್ದೇಶಕ ಕೆ.ಬಿ.ದುಂಡಿ ವಿವರಸಿದ್ದಾರೆ.

ಸಾಂದರ್ಭಿಕ ಚಿತ್ರ
ದ್ರಾಕ್ಷಿ ಇಷ್ಟ.. ಆದ್ರೆ ತಿನ್ನೋಕೆ ಕಷ್ಟ.. ಅತೀ ಹೆಚ್ಚು ಕೀಟನಾಶಕ ಸಿಂಪಡಿಸುವ ಹಣ್ಣಿನ ಸ್ವಚ್ಛತೆಗೆ ಮನೆಯಲ್ಲೇ ಇದೆ ಉಪಾಯ!

ಬೆಂಗಳೂರಿನಲ್ಲಿ ಮಾತ್ರವಲ್ಲ, ಕೇರಳ ಮತ್ತು ತಮಿಳುನಾಡಿನಿಂದಲೂ ನೀಲಿ ದ್ರಾಕ್ಷಿ ಹಣ್ಣಿಗೆ ಬೇಡಿಕೆ ಇದೆ. ಕಳೆದ ಎರಡು ವರ್ಷಗಳಿಂದ ‘ಬೆಂಗಳೂರು ಬ್ಲೂಗ್ರೇಪ್ಸ್ ಗೆ ಬೇಡಿಕೆ ಹೆಚ್ಚಿದ್ದು, ಮಧ್ಯವರ್ತಿಗಳನ್ನು ತಪ್ಪಿಸಲು ಎಫ್‌ಪಿಒಗಳನ್ನು ಬಲಪಡಿಸಲಾಗುತ್ತಿದೆ. ಆದರೂ ಮಾರುಕಟ್ಟೆ ಅಸಂಘಟಿತವಾಗಿಯೇ ಉಳಿದಿದೆ. ಮಹಾರಾಷ್ಟ್ರದ ಡಿಸ್ಟಿಲರಿಗಳೂ ಇದಕ್ಕೆ ಬೇಡಿಕೆ ಇಡುತ್ತಿವೆ, ಹೀಗಾಗಿ ‘ಬೆಂಗಳೂರು ಬ್ಲೂ’ ಉತ್ಪಾದನೆ ಮತ್ತು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ.5ರಷ್ಟು ಏರಿಕೆಯಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ತಿಳಿಸಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ, ಶಿಡ್ಲಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ಬೆಂಗಳೂರು ಬ್ಲೂಗ್ರೇಪ್ಸ್ ' ಹೇರಳವಾಗಿ ಬೆಳೆಯಲಾಗುತ್ತದೆ ಎಂದು ಹಿತ್ತಲಮನಿ ಹೇಳಿದರು. ರೈತರು ವರ್ಷಕ್ಕೆ 2-3 ಬಾರಿ ಬೆಳೆಯನ್ನು ಕಟಾವು ಮಾಡುತ್ತಾರೆ. ಹೀಗಾಗಿ ಈ ಹಣ್ಣು ವರ್ಷಪೂರ್ತಿ ಲಭ್ಯವಿದೆ. ಅದರ ವಿನ್ಯಾಸ ಮತ್ತು ವಾಸನೆಯಿಂದಾಗಿ ಇದು ಜ್ಯೂಸ್ ತಯಾರಿಕೆಗೆ ಸೂಕ್ತವಾಗಿದೆ. ನೀಲಿ ದ್ರಾಕ್ಷಿಗೆ ಬೇಡಿಕೆಯು ವರ್ಷದಿಂದ ವರ್ಷಕ್ಕೆ ತುಂಬಾ ಹೆಚ್ಚುತ್ತಿದೆ, ಹೀಗಾಗಿ ರೈತರು ದ್ರಾಕ್ಷಿ ಬೆಳೆಯಲು ಆದ್ಯತೆ ನೀಡುತ್ತಾರೆ. ಮಾವಿನ ಹಣ್ಣಿಗಿಂತ ದ್ರಾಕ್ಷಿಯ ಬೇಡಿಕೆ ಹೆಚ್ಚಿದೆ. ದ್ರಾಕ್ಷಿಯ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹೂ ಮತ್ತು ತರಕಾರಿ ಬೆಳೆಯುತ್ತಿದ್ದ ಹೊಸೂರು ರೈತರು ದ್ರಾಕ್ಷಿ ಬೆಳೆಯಲ ಮುಂದಾಗಿದ್ದಾರೆ ಎಂದು ಹೇಳಿದರು. ಸುಮಾರು 15,000 ಎಕರೆಯಲ್ಲಿ ಸಾಗುವಳಿ ನಡೆಯುತ್ತಿದ್ದು, ವಾರ್ಷಿಕವಾಗಿ 500 ಎಕರೆ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com