ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಮತ್ತೊಂದು ಬೇಡಿಕೆ ಈಡೇರಿಸಿದ ಬಳ್ಳಾರಿ ಜೈಲಧಿಕಾರಿಗಳು

ಜೈಲಿನ ನಿಯಮಾವಳಿಯ ಪ್ರಕಾರ ಖೈದಿಗಳಿಗೆ ಅವರ ಮನವಿಯ ಆಧಾರದ ಮೇಲೆ ಟಿವಿ ಅಳವಡಿಸುವ ವ್ಯವಸ್ಥೆ ಇದೆ.
Actor Darshan
ನಟ ದರ್ಶನ್online desk
Updated on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಇದೀಗ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರ ಮತ್ತೊಂದು ಬೇಡಿಕೆಯನ್ನು ಪೊಲೀಸರು ಈಡೇರಿಸಿದ್ದಾರೆ.

ದರ್ಶನ್ ಅವರು ಜೈಲಿನೊಳಗಿನ ಇಂಡಿಯನ್ ಟಾಯ್ಲೆಟ್ ನಲ್ಲಿ ನನಗೆ ಕೂರಲಾಗುವುದಿಲ್ಲವಾದ್ದರಿಂದ ಸರ್ಜಿಕಲ್ ಚೇರ್ ಒದಗಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಫೋನ್ ಕಾಲ್ ಮಾಡಲು ಅನುಮತಿ ನೀಡಬೇಕು ಎಂದು ಸಹ ಅವರು ಜೈಲಧಿಕಾರಿಗೆ ಮನವಿ ಮಾಡಿದ್ದರು. ಈ ಎರಡೂ ಮನವಿಗಳನ್ನು ಪುರಸ್ಕರಿಸಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಕಳೆದ ವಾರವಷ್ಟೇ ದರ್ಶನ್ ಅವರು ತನ್ನ ವಿರುದ್ಧ ಸಲ್ಲಿಸಲಾಗಿರುವ ಚಾರ್ಚ್ ಶೀಟ್ ನಲ್ಲಿ ಏನಿದೆ ಎಂಬುದನ್ನು ಅರಿಯಲು ಮತ್ತು ಹೊರ ಜಗತ್ತಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯುವ ಸಲುವಾಗಿ ತನಗೆ ಟಿವಿ ಒದಗಿಸಿಕೊಡುವಂತೆ ಜೈಲಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ ಇದೀಗ 32 ಇಂಚಿನ ಟಿವಿಯಲ್ಲಿ ದರ್ಶನ್ ಅವರನ್ನು ಬಂಧಿಯಾಗಿರಿಸಿರುವ ಸೆಲ್ ನಲ್ಲಿ ಅಳವಡಿಸಲಾಗಿದೆ. ಜೈಲಿನ ನಿಯಮಾವಳಿಯ ಪ್ರಕಾರ ಖೈದಿಗಳಿಗೆ ಅವರ ಮನವಿಯ ಆಧಾರದ ಮೇಲೆ ಟಿವಿ ಅಳವಡಿಸುವ ವ್ಯವಸ್ಥೆ ಇದೆ. ಆದರೆ ಟಿವಿ ರಿಪೇರಿಯಾಗಬೇಕಿದ್ದರಿಂದ ಅಳವಡಿಸಲು ವಿಳಂಬವಾಗಿದೆ ಎಂದು ಜೈಲಧಿಕಾರಿ ತಿಳಿಸಿದ್ದಾರೆ.

ಈ ಎಲ್ಲಾ ವ್ಯವಸ್ಥೆಗಳಿಗಾಗಿ ದರ್ಶನ್ ಅವರು ಜೈಲಧಿಕಾರಿಯ ಖಾಸಗಿ ಖಾತೆಗೆ 35000 ರೂಪಾಯಿಗಳನ್ನು ಜಮಾ ಮಾಡಿದ್ದಾರೆ. ಜೊತೆಗೆ ಜೈಲು ಕ್ಯಾಂಟೀನಿಂದ ತರಿಸಿಕೊಂಡಿರುವ ಟೀ, ಕಾಫಿಗಾಗಿ ಈವರೆಗೆ 735 ರೂಪಾಯಿ ವ್ಯಯಿಸಿದ್ದಾರೆ ಎಂದೂ ಮೂಲಗಳಿಂದ ತಿಳಿದು ಬಂದಿದೆ.

Actor Darshan
ನಟ ದರ್ಶನ್, ಗ್ಯಾಂಗ್ ನಿಜಕ್ಕೂ ಮನುಷ್ಯರಲ್ಲ, ರಾಕ್ಷಸರು: ರೇಣುಕಾಸ್ವಾಮಿ ತಂದೆ ಆಕ್ರೋಶ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com