ಪ್ರಾಜೆಕ್ಟ್ ಹಸ್ತಾಂತರಿಸಲು ವಿಫಲ: ಖರೀದಿದಾರರಿಗೆ 85 ಲಕ್ಷ ರೂ. ನೀಡುವಂತೆ ಬಿಲ್ಡರ್ ಗೆ ಕೆ-ರೇರಾ ಆದೇಶ

ಈ ಯೋಜನೆಯು ಬೆಂಗಳೂರು ಉತ್ತರದ ಬೆಟ್ಟಹಲಸೂರು ಗ್ರಾಮದ ಸರ್ ಎಂವಿಐಟಿ ಕಾಲೇಜು ರಸ್ತೆಯಲ್ಲಿದೆ. ಮೊದಲ ಹಂತ 245 ಘಟಕಗಳೊಂದಿಗೆ ಸಿದ್ಧವಾಗಬೇಕಾಗಿತ್ತು, ಆದರೆ ಇದುವರೆಗೆ 55 ಮಾತ್ರ ಹಸ್ತಾಂತರಿಸಲಾಗಿದೆ.
ಪೂರ್ಣವಾಗದ ವಿಲ್ಲಾ ಯೋಜನೆ
ಪೂರ್ಣವಾಗದ ವಿಲ್ಲಾ ಯೋಜನೆ
Updated on

ಬೆಂಗಳೂರು: ಬಿಡಿಎಯಿಂದ ಅನುಮೋದನೆ ಪಡೆದಿರುವ ವಸತಿ ವಿಲ್ಲಾ ಪ್ರಾಜೆಕ್ಟ್ 'ಆಫ್ಟರ್ ದಿ ರೈನ್' ಬಿಲ್ಡರ್ ಗಳು ಸರಿಯಾದ ಸಮಯಕ್ಕೆ ಮನೆಯನ್ನು ಹಸ್ತಾಂತರಿಸಲು ವಿಳಂಬ ಮಾಡಿದ್ದಕ್ಕಾಗಿ ದಂಪತಿಗೆ 85.47 ಲಕ್ಷ ರೂಪಾಯಿ ದಂಡ ಮೊತ್ತ ಪಾವತಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (K-RERA) ಆದೇಶ ನೀಡಿದೆ. ವಿಲ್ಲಾವನ್ನು ಮಾರ್ಚ್ 31, 2021 ರಂದು ಬಿಲ್ಡರ್ ಹಸ್ತಾಂತರಿಸಬೇಕಾಗಿತ್ತು.

ಜೆ.ಪಿ.ನಗರ 7ನೇ ಹಂತದ ನಿವಾಸಿಗಳಾದ ಶ್ರೀನಿಧಿ ಎ.ಮುರಳೀಧರ್ ಮತ್ತು ಅವರ ಪತ್ನಿ ನಪ್ಪಿನ ಸಂಪತ್ ಪರ ಕೆ-ರೇರಾ ಐದನೇ ಹೆಚ್ಚುವರಿ ಪೀಠದ ಸದಸ್ಯ ಜಿ.ಆರ್.ರೆಡ್ಡಿ, ವಿಲ್ಲಾ ಮತ್ತು ದಂಡದ ಮೊತ್ತ ನೀಡುವಂತೆ ಸೆ.9ರಂದು ಬಿಲ್ಡರ್ ಟೋಟಲ್ ಎನ್ವಿರಾನ್ಮೆಂಟ್ ಬಿಲ್ಡಿಂಗ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಗತಿ ಗ್ರೂಪ್ ಗೆ ಆದೇಶ ನೀಡಿದ್ದಾರೆ.

ಈ ಯೋಜನೆಯು ಬೆಂಗಳೂರು ಉತ್ತರದ ಬೆಟ್ಟಹಲಸೂರು ಗ್ರಾಮದ ಸರ್ ಎಂವಿಐಟಿ ಕಾಲೇಜು ರಸ್ತೆಯಲ್ಲಿದೆ. ಮೊದಲ ಹಂತ 245 ಘಟಕಗಳೊಂದಿಗೆ ಸಿದ್ಧವಾಗಬೇಕಾಗಿತ್ತು, ಆದರೆ ಇದುವರೆಗೆ 55 ಮಾತ್ರ ಹಸ್ತಾಂತರಿಸಲಾಗಿದೆ ಎಂದು ಮನೆ ಖರೀದಿದಾರರು ಹೇಳುತ್ತಾರೆ.

ನನಗೆ ಪೂರ್ಣ ನ್ಯಾಯ ಸಿಕ್ಕಿಲ್ಲ. ರೇರಾ ಕಾಯಿದೆಯಿಂದ ಕಡ್ಡಾಯಗೊಳಿಸಲಾದ ಶೇಕಡಾ 10 ರ ಬದಲಿಗೆ ಬಿಲ್ಡರ್ ಶೇಕಡಾ 86 ರಷ್ಟು ಮುಂಗಡ ಮೊತ್ತವಾಗಿ ತೆಗೆದುಕೊಂಡಿದ್ದಾರೆ ಎಂಬ ಅಂಶವನ್ನು ಕೆ-ರೇರಾ ಪರಿಗಣನೆಗೆ ತೆಗೆದುಕೊಂಡಿಲ್ಲ. ಫೆಬ್ರವರಿ 2015 ರಲ್ಲಿ 2.23 ಕೋಟಿ ರೂಪಾಯಿ ಮುಂಗಡವನ್ನು ನಮ್ಮಿಂದ ತೆಗೆದುಕೊಳ್ಳಲಾಗಿತ್ತು. 2018 ರಲ್ಲಿ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿದರು, ಡಿಸೆಂಬರ್ 2018 ರ ಹಸ್ತಾಂತರ ದಿನಾಂಕ ಎಂದು ಬಿಲ್ಡರ್ ಭರವಸೆ ನೀಡಿದ್ದರು ಎಂದು ಮುರಳೀಧರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

75 ವರ್ಷಕ್ಕಿಂತ ಮೇಲ್ಪಟ್ಟ ನಮ್ಮ ಪೋಷಕರ ಸಲುವಾಗಿ ನಾನು ಮನೆ ಖರೀದಿಸಲು ಮುಂದಾಗಿದ್ದೆ. ಆದರೆ ಹಸ್ತಾಂತರ ಸುಮಾರು ಆರು ವರ್ಷಗಳ ಕಾಲ ವಿಳಂಬವಾಗಿದೆ. ನನ್ನ ತಂದೆ ತಾಯಿಗೆ ಈಗ ಎಂಬತ್ತರ ಹರೆಯ. ಕ್ಲಬ್ ಹೌಸ್ ಮತ್ತು ಇತರ ಮೂಲಸೌಕರ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು, ಅದು ಕೂಡ ಮಾಡಿಲ್ಲ ಎನ್ನುತ್ತಾರೆ.

ಇನ್ನೊಬ್ಬ ಮನೆ ಖರೀದಿದಾರ ಅನು ಚಂದೋಕ್, ನಾನು 2015 ರಲ್ಲಿ 1.35 ಕೋಟಿ ರೂಪಾಯಿಯನ್ನು ಮುಂಗಡವಾಗಿ ಪಾವತಿಸಿ ಮನೆಯನ್ನು ಖರೀದಿಸಿದೆ. ಆದಾಗ್ಯೂ, ಬಿಲ್ಡರ್ 2021ರಲ್ಲಿ ಮಾರಾಟ ಹಸ್ತಾಂತರಿಸಿದರು. ನಾವು ಈಗ 2024 ರಲ್ಲಿ ಇದ್ದೇವೆ, ಕೇವಲ 55 ಘಟಕಗಳನ್ನು ಮಾತ್ರ ಹಸ್ತಾಂತರಿಸಲಾಗಿದೆ ಎಂದರು.

ಪೂರ್ಣವಾಗದ ವಿಲ್ಲಾ ಯೋಜನೆ
RERA ಅನುಷ್ಠಾನದ ಸಮಸ್ಯೆಗಳನ್ನು ಬಗೆಹರಿಸಿ: ಗೃಹ ಖರೀದಿದಾರರ ವೇದಿಕೆಯಿಂದ ರಾಜ್ಯಪಾಲರಿಗೆ ಮನವಿ

ರೈಲ್ವೆಯ 30 ಮೀಟರ್ ಬಫರ್ ವಲಯದಲ್ಲಿ ಬಿಲ್ಡರ್ ಕೊಳಚೆ ನೀರು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಿದ್ದಾರೆ. ಮೂಲ ಯೋಜನೆ ಕೇವಲ 89 ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವುದಾಗಿತ್ತು, ಆದರೆ ಬಿಲ್ಡರ್ ಬಿಡಿಎಗೆ ಸಮೀಪದಲ್ಲಿ ಹೆಚ್ಚಿನ ವಿಲ್ಲಾಗಳನ್ನು ನಿರ್ಮಿಸಲು ತಮ್ಮ ಯೋಜನೆಯನ್ನು ಪದೇ ಪದೇ ಮಾರ್ಪಡಿಸಿದ್ದಾರೆ ಎಂದು ಇನ್ನೊಬ್ಬ ನೊಂದ ಮಾಲೀಕ ಸ್ಟೀಫನ್ ವರ್ಗೀಸ್ ಆರೋಪಿಸಿದ್ದಾರೆ.

ಕಮಲ್ ಸಾಗರ್ ಟೋಟಲ್ ಎನ್ವಿರಾನ್‌ಮೆಂಟ್‌ನ ಸಂಸ್ಥಾಪಕರಾಗಿದ್ದಾರೆ. ಅವರು ಮತ್ತು ಅವರ ಪತ್ನಿ ಶಿಬಾನಿ ಸಾಗರ್ ಅವರನ್ನು ಅದರ ನಿರ್ದೇಶಕರು ಎಂದು ಪಟ್ಟಿ ಮಾಡಲಾಗಿದೆ. TNIE ಪ್ರತಿನಿಧಿ, ಕಂಪನಿಯ ಸಿಇಒ ಕಾರ್ತಿಕ್ ಧನಶೇಖರನ್ ಅವರನ್ನು ಒಂದೆರಡು ದಿನಗಳ ಹಿಂದೆ ಸಂಪರ್ಕಿಸಿದೆ. ಆದರೆ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com