ನ್ಯೂಜೆರ್ಸಿಯ ಆದಿ ಚುಂಚನಗಿರಿ ಮಠಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ

ನಗುವು ಸಹಜದ ಧರ್ಮ, ನಗಿಸುವುದೇ ಪರಧರ್ಮ, ನಗಿಸಿ, ನಗುತಾ ಬಾಳುವ ವರವ ಬೇಡಿಕೊಳೋ ಮಂಕುತಿಮ್ಮ ಎನ್ನುವ ಮಾತಿನಂತೆ ನಾವುಗಳು ನೆಮ್ಮದಿಯಿಂದ ಇರಲು ಒಂದು ಜಾಗ ಬೇಕಾಗಿದೆ. ಅದುವೇ ನಮ್ಮ, ನಿಮ್ಮ ಮಠ.
ನ್ಯೂಜೆರ್ಸಿಯ ಆದಿ ಚುಂಚನಗಿರಿ ಮಠದಲ್ಲಿ ಡಿಕೆ.ಶಿವಕುಮಾರ್.
ನ್ಯೂಜೆರ್ಸಿಯ ಆದಿ ಚುಂಚನಗಿರಿ ಮಠದಲ್ಲಿ ಡಿಕೆ.ಶಿವಕುಮಾರ್.
Updated on

ಬೆಂಗಳೂರು: ನ್ಯೂಜೆರ್ಸಿಯ ಫ್ರಾಂಕ್ಲಿನ್ ಟೌನ್‌ಶಿಪ್‌ನಲ್ಲಿ 20 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆದಿ ಚುಂಚನಗಿರಿ ಮಠಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಭೇಟಿ ನೀಡಿದ್ದು, ಕನ್ನಡಿಗರು ಮತ್ತು ಆದಿಚುಂಚನಗಿರಿ ಮಠದ ಭಕ್ತರು ಭೈರವನಾಥ ಪೀಠ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದರು.

ಈ ಕುರಿತು ವಿಡಿಯೋ ಸಂದೇಶವೊಂದನ್ನು ನೀಡಿರುವ ಡಿಕೆ.ಶಿವಕುಮಾರ್ ಅವರು, ಬಾಲಗಂಗಾಧರನಾಥ ಸ್ವಾಮೀಜಿಯವರು ನ್ಯೂಜೆರ್ಸಿಯಲ್ಲಿ ಸ್ಥಾಪನೆ ಮಾಡಿರುವ ಗುರುಪೀಠ ನಮ್ಮ ಹಾಗೂ ನಿಮ್ಮ ಗುರುಪೀಠ. ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂದು ಬುದ್ದಿಮಾತು ಹೇಳುತ್ತಾ ಇದ್ದರು. ಮನುಷ್ಯನಿಗೆ ನೆಮ್ಮದಿ ನೀಡುವ ಜಾಗವೇ ದೇವಾಲಯ. ಭಕ್ತ ಹಾಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳವೇ ದೇವಾಲಯ. ಮನುಷ್ಯನ ಜೀವ ಮತ್ತು ಜೀವನ ಸಂತೋಷದಿಂದ ಕೂಡಿರಬೇಕು. ನಗು, ನಗುತ್ತಾ ಬಾಳಬೇಕು. ನಗುವು ಸಹಜದ ಧರ್ಮ, ನಗಿಸುವುದೇ ಪರಧರ್ಮ, ನಗಿಸಿ, ನಗುತಾ ಬಾಳುವ ವರವ ಬೇಡಿಕೊಳೋ ಮಂಕುತಿಮ್ಮ ಎನ್ನುವ ಮಾತಿನಂತೆ ನಾವುಗಳು ನೆಮ್ಮದಿಯಿಂದ ಇರಲು ಒಂದು ಜಾಗ ಬೇಕಾಗಿದೆ. ಅದುವೇ ನಮ್ಮ, ನಿಮ್ಮ ಮಠ.

ನಾನು ಈ ಹಿಂದೆ ಮಹಾರಾಷ್ಟ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಯವರು ಸ್ಥಾಪನೆ ಮಾಡಿದ್ದ ಭೈರವನಾಥ ದೇವಾಲಯಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಶಕ್ತಿಶಾಲಿಯಾದ ದೇವರ ದೇವಸ್ಥಾನವನ್ನು ನ್ಯೂಜೆರ್ಸಿಯಲ್ಲಿ ಸ್ಥಾಪನೆ ಮಾಡಲು ಅಮೆರಿಕಾ ಸರ್ಕಾರ ಅನುಮತಿ ನೀಡಿರುವುದೇ ಒಂದು ವಿಸ್ಮಯ. ನಾವೆಲ್ಲರೂ ಈ ವಿಸ್ಮಯಕ್ಕೆ ಸಾಕ್ಷಿಗಳಾಗುತ್ತಿದ್ದೇವೆ.

ನ್ಯೂಜೆರ್ಸಿಯ ಆದಿ ಚುಂಚನಗಿರಿ ಮಠದಲ್ಲಿ ಡಿಕೆ.ಶಿವಕುಮಾರ್.
ಅಮೆರಿಕಾದಲ್ಲಿ ರಾಹುಲ್ ಗಾಂಧಿ ಭೇಟಿ: ಸಿಎಂ ಹುದ್ದೆ ಆಕಾಂಕ್ಷಿಗಳಲ್ಲಿ ತಲ್ಲಣ; ಸಿದ್ದರಾಮಯ್ಯ ಕೆಳಗಿಳಿಸಲು ಡಿಕೆಶಿ ಮಾಸ್ಟರ್ ಪ್ಲಾನ್- ಬಿಜೆಪಿ

ಹುಟ್ಟು ಸಾವಿನ ಮಧ್ಯೆ ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ. ಸಾಗರ ದಾಟಿ ಇಲ್ಲಿಗೆ ಬಂದು ಅನೇಕರು ಬೆಳೆಯುತ್ತಾ ಇದ್ದಾರೆ. ನಾವೆಲ್ಲ ಸೇರಿ ಇಲ್ಲಿ ಒಂದು ಮೈಲಿಗಲ್ಲನ್ನು ಬಿಟ್ಟುಹೋಗಬೇಕು. ಕೈಲಾದಷ್ಟು ಸಣ್ಣ ಕೊಡುಗೆಯನ್ನು ಕೊಡಬೇಕು. ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವ ಕೆಲಸವನ್ನು ನಾವು ಮಾಡಬೇಕು. ನಾನು ಸಹ ಕೊಡುಗೆಯನ್ನು ಕೊಟ್ಟಿದ್ದೇನೆ. ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕನಸು ಈಡೇರುತ್ತಿದೆ. ಈ ಹಿಂದೆ ಇದರ ಶಂಕುಸ್ಥಾಪನೆ ಸಮಾರಂಭಕ್ಕೆ ನನ್ನನ್ನು ಆಹ್ವಾನ ಮಾಡಿದ್ದರು. ಆ ವೇಳೆಯಲ್ಲಿ ಸರ್ಕಾರ ಸಂಕಷ್ಟದ ಸಮಯದಲ್ಲಿತ್ತು. ಈ ಪೀಠವನ್ನು ಕಂಡು ನನಗೆ ಸಂತೋಷವಾಗಿದೆ. ಎಲ್ಲರೂ ಸಮಯಕ್ಕೆ ಸರಿಯಾಗಿ ಹಣ ಸಹಾಯ ಮಾಡಿ ಕೈ ಜೋಡಿಸಬೇಕು. ಎರಡು ಕೈ ಜೋಡಿಸಿದರೆ ಮಾತ್ರ ಚಪ್ಪಾಳೆ ಸಾಧ್ಯ. ನಾವೆಲ್ಲರೂ ಸೇರಿ ಯಶಸ್ಸಿನ ಚಪ್ಪಾಳೆಗೆ ಕೈಜೋಡಿಸಲು ಪ್ರಾರ್ಥಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

ಡಿಕೆ.ಶಿವಕುಮಾರ್ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೋಜನೆಯ ಚೀಫ್ ಆರ್ಕಿಟೆಕ್ಟ್ ಡಾ. ಬಾಬು ಕೀಲಾರ ಅವರು ಡಿಸಿಎಂ ಅವರಿಗೆ ಮಠದ ನಿರ್ಮಾಣ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪವಾಗಿರುವ ಆಗಮ ಶಾಸ್ತ್ರದಂತೆ ಈ ಮಠವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಯೋಜನೆ ಕುರಿತು ಮುಖ್ಯ ವಾಸ್ತುಶಿಲ್ಪಿ ಬಾಬು ಕೀಲಾರ ಅವರು ಶಿವಕುಮಾರ್‌ಗೆ ಮಾಹಿತಿ ನೀಡಿದರು. ಆದಿ ಚುಂಚನಗಿರಿ ಸ್ಥಳೀಯ ಮಠದ ಶ್ರೀಶೈಲನಾಥ ಸ್ವಾಮೀಜಿ, ದಯಾಶಂಕರ್ ಅಡಪ ಮತ್ತಿತರರು ಇದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com