Hubballi: ಫ್ಲೈಓವರ್ ಕಾಮಗಾರಿ ರಾಡ್​ ಬಿದ್ದು ಎಎಸ್​ಐ ಸಾವು, ಸಂತೋಷ್​ ಲಾಡ್​ ಸಂತಾಪ

ಸೆಪ್ಟೆಂಬರ್​ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್​ ಬಿದ್ದು ಎಎಸ್​ಐ ನಾಭಿರಾಜ್ ದಯಣ್ಣವರ ಗಂಭೀರವಾಗಿ ಗಾಯಗೊಂಡಿದ್ದರು.
ASI who critically injured after a falling rod pierces his head died
ಫ್ಲೈಓವರ್ ಕಾಮಗಾರಿ ರಾಡ್​ ಬಿದ್ದು ಎಎಸ್​ಐ ಸಾವು
Updated on

ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿಯ ರಾಡ್​ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್​ಐ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್​ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್​ ಬಿದ್ದು ಎಎಸ್​ಐ ನಾಭಿರಾಜ್ ದಯಣ್ಣವರ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಂದು ಚಿಕಿತ್ಸೆ ಫಲಿಸದೆ ಎಎಸ್​ಐ ನಾಭಿರಾಜ್ ದಯಣ್ಣವರ ಸಾವನ್ನಪ್ಪಿದ್ದಾರೆ.

ದೂರು ನೀಡಿದ ಪುತ್ರ

ಇನ್ನು ಎಎಸ್​ಐ ನಾಭಿರಾಜ್ ದಯಣ್ಣವರ ಸಾವಿಗೆ ಸಂಬಂಧಿಸಿದಂತೆ ಅವರ ಪುತ್ರ ರುಷಭ್ ದೂರು ದಾಖಲಿಸಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಝಂಡು ಕನ್​ಸ್ಟ್ರಕ್ಷನ್ ನಿರ್ದೇಶಕರಾದ ರಾಮ್‌ಕುಮಾರ್, ಮೋಹಿತ್ ಮತ್ತು ಮನುದೀಪ್, ಯೋಜನಾ ನಿರ್ದೇಶಕ, ಎಂಜಿನಿಯರ್, ಸುರಕ್ಷತಾ ಅಧಿಕಾರಿ, ಕ್ರೇನ್ ಆಪರೇಟರ್ ಮತ್ತು ಕಾರ್ಮಿಕರ ವಿರುದ್ಧ ದೂರು ದಾಖಲಿಸಿದ್ದಾರೆ.

ASI who critically injured after a falling rod pierces his head died
Video: ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ; ಸರ್ಕಾರಿ ಬಸ್ ಗೆ ಲಾರಿ ಢಿಕ್ಕಿ, 8 ಸಾವು!

19 ಜನರ ವಿರುದ್ಧ ಪ್ರಕರಣ ದಾಖಲು

ಎಎಸ್​ಐ ನಾಭಿರಾಜ್ ದಯಣ್ಣವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ, ಮಾಹಿತಿ ಪಡೆದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ನಾಭಿರಾಜ್ ಮೃತಪಟ್ಟಿದ್ದಾರೆ.

ಪೊಲೀಸ್ ಮತ್ತು ಜಿಲ್ಲಾಡಳಿತ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿತು. ಆದರೆ ನಮ್ಮ ಶ್ರಮ ಫಲಿಸಲಿಲ್ಲ. ಈಗಾಗಲೇ 19 ಜನರ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಎಎಸ್ಐ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಅಲ್ಲದೆ ಈ ಕಾಮಗಾರಿಯಲ್ಲಿ ಯಾವ ಯಾವ ಇಲಾಖೆ ಬರುತ್ತೆ, ಎಲ್ಲವೂ ಹೊಣೆ ಹೊರಬೇಕಾಗುತ್ತದೆ. ಸಂಬಂಧಿತ ಗುತ್ತಿಗೆದಾರ ಕಂಪನಿ, ಮಾಲೀಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಗಳ ಮೇಲೂ ಪ್ರಕರಣ ದಾಖಲಾಗುತ್ತದೆ. ಇದು ನಮ್ಮದೆ ಇಲಾಖೆ ಪ್ರಕರಣ, ಹೀಗಾಗಿ ಯಾವುದೇ ಲೋಪದೋಷವಾಗಲು ಬಿಡುವುದಿಲ್ಲ. ಝಾಂಡು ಕಂಪನಿಯ ಎರಡು ಕಚೇರಿಗಳು ಬಂದ್ ಆಗಿವೆ ಎಂದು ತಿಳಿಸಿದರು.

ASI who critically injured after a falling rod pierces his head died
ಹುಬ್ಬಳ್ಳಿ-ಪುಣೆ ನಡುವೆ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸಂತೋಷ್​ ಲಾಡ್​ ಸಂತಾಪ

ಎಎಸ್​ಐ ನಾಭಿರಾಜ್ ದಯಣ್ಣವರ ಗುಣಮುಖರಾಗಲು ವೈದ್ಯರು ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಈ ತರಹ ಆಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಎಸ್​ಐ ನಾಭಿರಾಜ್ ದಯಣ್ಣವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದೇನೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆ, ಅಲ್ಲಿ ಗುತ್ತಿಗೆದಾರರು ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com