BDA ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ವೇಳೆ ತಾಂತ್ರಿಕ ದೋಷ: 100 ಕೋಟಿ ರೂ ಆದಾಯದ ಭರವಸೆಯೊಂದಿಗೆ ಮರು ಹರಾಜು!

ಸೆಪ್ಟೆಂಬರ್ 9 ಮತ್ತು 10 ರಂದು ನಡೆದ ನಮ್ಮ ಮೊದಲ ಹಂತದಲ್ಲಿ ಈ 76 ಸೈಟುಗಳನ್ನು ಹರಾಜಿಗೆ ಇಡಲಾಗಿತ್ತು.ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ದೋಷ ಎದುರಾಯಿತು. ಬಿಡ್ಡಿಂಗ್ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ 4.30 ರ ಹೊತ್ತಿಗೆ ಸೈಟ್ ಕ್ರ್ಯಾಶ್ ಆಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹದಿನೈದು ದಿನಗಳ ಹಿಂದೆ 76 ಮೂಲೆಯ ನಿವೇಶನಗಳ ನೇರ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಆದರೆ ಬಿಡ್ಡಿಂಗ್ ಮುಕ್ತಾಯದ ಹಂತದಲ್ಲಿರುವಾಗಲೇ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು, ಹೀಗಾಗಿ ಮರು ಹರಾಜು ಪ್ರಕ್ರಿಯೆಗೆ ಮುಂದಾಗಿದೆ.

ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಕೇಂದ್ರ ಕಚೇರಿಗೆ ದೂರುಗಳ ಸುರಿಮಳೆ ಬಂದ ಕಾರಣ ಮರು ಹರಾಜಿಗೆ ಮುಂದಾಗಿದೆ. ಇದರಿಂದ 100 ಕೋಟಿ ರೂ.ಗೂ ಅಧಿಕ ಗಳಿಸುವ ಭರವಸೆಯನ್ನು ಪ್ರಾಧಿಕಾರ ಹೊಂದಿದೆ. ಇ-ಆಡಳಿತ ಪೋರ್ಟಲ್‌ನಲ್ಲಿ ಮಂಗಳವಾರ ಬೆಳಿಗ್ಗೆ 9 ರಿಂದ ಬುಧವಾರ ಸಂಜೆ 5 ರವರೆಗೆ ಎರಡು ದಿನಗಳ ಅವಧಿಗೆ ಲೈವ್ ಬಿಡ್ ಕೈಗೊಳ್ಳಲಾಗುತ್ತದೆ. ಬನಶಂಕರಿ VI ಹಂತ, RMV 2ನೇ ಹಂತ, HRBR ಲೇಔಟ್ ಮತ್ತು HSR ಲೇಔಟ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಕಾರ್ನರ್ ಸೈಟ್‌ಗಳನ್ನು ಹರಾಜಿಗೆ ಇಡಲಾಗುವುದು.

ಸೆಪ್ಟೆಂಬರ್ 9 ಮತ್ತು 10 ರಂದು ನಡೆದ ನಮ್ಮ ಮೊದಲ ಹಂತದಲ್ಲಿ ಈ 76 ಸೈಟುಗಳನ್ನು ಹರಾಜಿಗೆ ಇಡಲಾಗಿತ್ತು.ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ದೋಷ ಎದುರಾಯಿತು. ಬಿಡ್ಡಿಂಗ್ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ 4.30 ರ ಹೊತ್ತಿಗೆ ಸೈಟ್ ಕ್ರ್ಯಾಶ್ ಆಗಿತ್ತು. ಇದು ನೇರ ಹರಾಜಿನಲ್ಲಿ ಭಾಗವಹಿಸುವ ಅನೇಕ ಬಿಡ್ಡರ್‌ಗಳನ್ನು ಅಸಮಾಧಾನಗೊಳಿಸಿತು ಮತ್ತು ಅವರು 50 ಕ್ಕೂ ಹೆಚ್ಚು ಇಮೇಲ್ ದೂರುಗಳನ್ನು ಬಿಡಿಎಗೆ ಕಳುಹಿಸಿದ್ದಾರೆ. “ನಾವು ಮರು-ಬಿಡ್‌ಗೆ ಹೋಗಲು ನಿರ್ಧರಿಸಿದ್ದೇವೆ ಆದರೆ ಅನುಮತಿಯ ಅಗತ್ಯವಿರುವುದರಿಂದ ಅದನ್ನು ತಕ್ಷಣವೇ ಮಾಡಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 17 ಮತ್ತು 18ರಂದು ಮರು ಹರಾಜು ಮಾಡಲು ಬಿಡಿಎಗೆ ಅನುಮತಿ ನೀಡಲಾಗಿದೆ ಹಿರಿಯ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ ಆಯುಕ್ತ ಎನ್.ಜಯರಾಮ್ ಅವರು ಮಂಗಳವಾರ ಸಂಜೆ ಕೇಂದ್ರ ಕಚೇರಿಗೆ ಪ್ರವೇಶಿಸಿದಾಗ ಹಲವಾರು ಜನರು ದೂರು ನೀಡಲು ಬಂದಿದ್ದರು ಎಂದು ಹೇಳಲಾಗಿದೆ. ಬಿಡಿಎ ಕಚೇರಿಯಲ್ಲಿ ದಲ್ಲಾಳಿಗಳು ಕೂಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರು, ಕುಂದುಕೊರತೆಗಳಿರುವ ಜನರಿಗೆ ಮಾತ್ರ ಒಳಗೆ ಇರುವಂತೆ ನೋಡಿಕೊಳ್ಳಲು ಬಿಡಿಎ ಕಾರ್ಯಪಡೆಗೆ ಸೂಚಿಸಿದರು ಎಂದು ಬಿಡಿಎ ಕಾರ್ಯಪಡೆ ಎಸ್ಪಿ ಕೆ.ನಂಜುಂಡೇಗೌಡ ಹೇಳಿದರು.

ಸಾಂದರ್ಭಿಕ ಚಿತ್ರ
ಬಿಡಿಎ ನಿವೇಶನಕ್ಕಾಗಿ 72 ಕೋಟಿ ರೂ. ಬಿಡ್ ಮಾಡಿದ್ದ ಇಂಜಿನಿಯರ್ ಈಗ 4 ಲಕ್ಷ ರೂ. ಠೇವಣಿಗಾಗಿ ಪರದಾಟ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com