ಮೈಸೂರು: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ನಾಗಮಂಗಲದ ಬದರಿಕೊಪ್ಪಲಿನ 20 ವರ್ಷದ ಯುವಕನೊಬ್ಬ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಮೃತಪಟ್ಟಿದ್ದಾನೆ.
ಗಲಭೆಯ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಕಿರಣ್ (28) ಮಿದುಳಿಗೆ ಪಾರ್ಶ್ವವಾಯು ಹೊಡೆದು ಮೃತಪಟ್ಟಿದ್ದಾರೆ. ಗಲಭೆಯ ನಂತರ ಕಳೆದ ವಾರ ಕಿರಣ್ ಊರು ತೊರೆದಿದ್ದರು. ಈ ಯುವಕನ ತಂದೆ ಕುಮಾರ್‌ನನ್ನು (ಆರೋಪಿ ಎ–17) ಪೊಲೀಸರು ಬಂಧಿಸಿದ್ದು, ಕಾರಾಗೃಹದಲ್ಲಿದ್ದಾರೆ. ತಂದೆಯ ಬಂಧನದಿಂದ ಅತಿಯಾದ ಆತಂಕ ಮತ್ತು ಒತ್ತಡಕ್ಕೆ ಒಳಗಾಗಿ ಕಿರಣ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಿರಣ್‌ನನ್ನು ಗುರುವಾರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ತಂದೆ ಜೈಲಿಗೆ ಹೋಗಿದ್ದಾರೆ, ಮಗ ಮೃತಪಟ್ಟಿದ್ದಾನೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಕಿರಣ್ ಅವರ ಪತ್ನಿ ಮತ್ತು ಮಗು ಅನಾಥರಾಗಿದ್ದಾರೆ’ ಎಂದು ಕುಟುಂಬಸ್ಥರು ರೋದಿಸಿದರು. ಪ್ರಕರಣ ಸಂಬಂಧ ಬದ್ರಿಕೊಪ್ಪಲು ಗ್ರಾಮದ ಹಲವರ ಬಂಧನವಾಗಿದ್ದರೆ, ಮತ್ತೊಂದು ಕಡೆ 25 ಕ್ಕೂ ಹೆಚ್ಚು ಯುವಕರು ಗ್ರಾಮ ತೊರೆದಿದ್ದಾರೆ. ಹೀಗಾಗಿ ಯುವಕರ ಕುಟುಂಬಸ್ಥರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
Advertisement