ಮುನಿರತ್ನ ವಿರುದ್ಧ ತನಿಖೆ ನಡೆಸಲು SITಗೆ ಸಂಪೂರ್ಣ ಸ್ವಾತಂತ್ರ್ಯವಿದೆ: ಸಿಎಂ ಸಿದ್ದರಾಮಯ್ಯ

ರಾಜ್ಯ ಪಾಲರು ಆರ್ಕವತಿ ವರದಿ ಕೇಳಿದ ವಿಚಾರ ಕುರಿತು ಮಾತನಾಡಿ, ರಾಜ್ಯಪಾಲರು ಬರೆದಿರುವ ಪತ್ರ ನಾನಿನ್ನು ಗಮನಿಸಿಲ್ಲ, ವಿಚಾರಿಸುವೆ ಎಂದರು.
ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on

ಕೊಪ್ಪಳ: ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮುನಿರತ್ನ ಅವರು ಸಾಕಷ್ಟು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಎಫ್ಐಆರ್ ದಾಖಲಾಗಿದೆ. ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಅವರಿಗೆ ಕಾನೂನು ಉಲ್ಲಂಘಿಸಿ ಎಂದು ನಾವು ಹೇಳಿಲ್ಲವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಭಾನುವಾರ ತಾಲೂಕಿನ ಬಸಾಪೂರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮುನಿರತ್ನನಿಗೆ ಅಪರಾಧ ಮಾಡು ಎಂದು ನಾವು ಹೇಳಿದ್ದೆವಾ?...ಮುನಿರತ್ನ ಮೇಲೆ ಮೂರು ಪ್ರಕರಣ ದಾಖಲಾಗಿದೆ. ಶಾಸಕರ ಮನವಿ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ, ಅತ್ಯಾಚಾರ ಮತ್ತು ಹನಿ ಟ್ರ್ಯಾಪಿಂಗ್ ಆರೋಪದ ಮೇಲೆ ಕಾನೂನು ಪ್ರಕಾರ ಮುನಿರತ್ನ ಅವರನ್ನು ಬಂಧಿಸಲಾಗಿದೆ, ನಿವೃತ್ತ ಐಪಿಎಸ್ ಅಧಿಕಾರಿ ಬಿಕೆ ಸಿಂಗ್ ಅವರಿಗೆ ತನಿಖೆ ನೇತೃತ್ವ ವಹಿಸಲಾಗಿದೆ.

ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುನಿರತ್ನ ಪ್ರಕರಣ: ತನಿಖೆಗೆ SIT ರಚಿಸುವಂತೆ ಸರ್ಕಾರಕ್ಕೆ ಒಕ್ಕಲಿಗ ನಾಯಕರ ಮನವಿ

ಸರ್ಕಾರ ಯಾರ ವಿರುದ್ಧವೂ ಇಲ್ಲ. ನಾವು ಯಾರನ್ನೂ ಗುರಿಯಾಗಿಸಿಕೊಂಡಿಲ್ಲ ಅಥವಾ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಶಾಸಕರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಮತ್ತು ಈಗ ಕಾನೂನು ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಪೊಲೀಸರು ಮತ್ತು ಎಸ್‌ಐಟಿಗೆ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಪಾಲರು ಆರ್ಕವತಿ ವರದಿ ಕೇಳಿದ ವಿಚಾರ ಕುರಿತು ಮಾತನಾಡಿ, ರಾಜ್ಯಪಾಲರು ಬರೆದಿರುವ ಪತ್ರ ನಾನಿನ್ನು ಗಮನಿಸಿಲ್ಲ, ವಿಚಾರಿಸುವೆ ಎಂದರು.

ರಾಜ್ಯಪಾಲರು ಆರ್ಕಾವತಿ ಬಡಾವಣೆ ಕುರಿತು ಬರೆದಿರುವ ವಿಚಾರ ಪತ್ರಿಕೆಯಲ್ಲಿ ಓದಿರುವೆ. ಆರ್ಕಾವತಿ ಬಡಾವಣೆ ವಿಚಾರದಲ್ಲಿ ರಿಡ್ಯೂ ಅಂತ ಹೇಳಿದ್ದು ಸುಪ್ರೀಂ ಕೋರ್ಟ್, ನಾವಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com