ಸಿಡಿಮದ್ದು ತಾಲೀಮು: ಭಾರೀ ಶಬ್ದಕ್ಕೆ ಬೆದರಿದ ದಸರಾ ಆನೆಗಳು, ಚದುರಿ ಓಡಿದ ಕುದುರೆಗಳು..!

ಪ್ರಾಣಿಗಳನ್ನ ಒಗ್ಗಿಸಲು ಮೊದಲ ಹಂತದ ತಾಲೀಮು ಗುರುವಾರ ನಡೆಯಿತು. ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್‌ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.
ದಸರಾ ಆನೆ.
ದಸರಾ ಆನೆ.
Updated on

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕುಶಾಲತೋಪು ಸಿಡಿಸಲು ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಪ್ರಾಣಿಗಳನ್ನ ಒಗ್ಗಿಸಲು ಮೊದಲ ಹಂತದ ತಾಲೀಮು ಗುರುವಾರ ನಡೆಯಿತು. ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್‌ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.

ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸುವ ಅಭ್ಯಾಸ ಮಾಡಲಾಯಿತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ನಡೆದಿದ್ದು, ತಾಲೀಮಿನಲ್ಲಿ 35 ಕುದುರೆಗಳು, ಚಿನ್ನದ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದ 14 ಆನೆಗಳು ಭಾಗಿಯಾಗಿದ್ವು. ಕುಶಾಲತೋಪು ಸಿಡಿಸುತ್ತಿದ್ದಂತೆ ಕುದುರೆಗಳು ಬೆಚ್ಚಿ ಬಿದ್ದವು. ಕುದುರೆ ಅಡ್ಡಾದಿಡ್ಡಿ ಓಡಾಡಿದ್ದರಿಂದ ಆನೆಗಳು ಗಲಿಬಿಲಿಗೊಂಡಿತು.

ಕುಶಾಲ ತೋಪು ಸಿಡಿಸುವ ತಾಲೀಮು ಒಂದು ಗಂಟೆಗಳ ಕಾಲ ನೆರವೇರಿತು. ಪೋಲಿಸರು, ಅಶ್ವಾರೋಹಿ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.

ಕುಶಾಲತೋಪು ಸಿಡಿಸಿದ ವೇಳೆ 14 ಆನೆಗಳಲ್ಲಿ ಒಂದಾದ ರೋಹಿತ್ ಮತ್ತು ಕೆಲವು ಕುದುರೆಗಳು ವಿಚಲಿತಗೊಂಡವು. ಕುಶಾಲತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಕಿವಿಗಡಚ್ಚಿಕ್ಕುವ ಸದ್ದಿಗೆ ಆನೆ ರೋಹಿತ್ ಮತ್ತು ಕುದುರೆಗಳು ಗಾಬರಿಯಾದವು. ಇನ್ನುಳಿದ ಮಹೇಂದ್ರ, ಪ್ರಶಾಂತ್, ಭೀಮಾ, ಧನಂಜಯ, ಗೋಪಿ ಹಾಗೂ ಇತರೆ ಆನೆಗಳು ಯಾವುದೇ ಅಳುಕಿಲ್ಲದೇ ಭಾಗಿಯಾಗುವ ಮೂಲಕ ಆತ್ಮಸ್ಥೈರ್ಯ ಪ್ರದರ್ಶನ ಮಾಡಿದವು.

ಸೆಪ್ಟಂಬರ್‌ 26ರಂದು ಮೊದಲ ಹಂತದ ತಾಲೀಮು ನಡೆದಿದ್ದು, ಸೆಪ್ಟಂಬರ್‌ 29ರಂದು 2ನೇ ಹಂತ ಹಾಗೂ ಅಕ್ಟೋಬರ್‌ 1ರಂದು 3ನೇ ಹಂತದ ಗಜಪಡೆಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಲಿದೆ. ಆ ಮೂಲಕ ಗಜಪಡೆಯನ್ನು ದಸರಾ ಜಂಬೂ ಸವಾರಿಯ ದಿನ ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಸಿಡಿಮದ್ದು ಶಬ್ಧಕ್ಕೆ ಹೆದರದ ರೀತಿಯಲ್ಲಿ ತರಬೇತಿ ನೀಡಲಾಗುತ್ತಿದೆ.

ದಸರಾ ಆನೆ.
ಮೈಸೂರು: ದಸರಾ ಆನೆಗಳ ಮುಂದೆ ಸೆಲ್ಫೀ, ರೀಲ್ಸ್'ಗೆ ನಿಷೇಧ..!

ಈ ವರ್ಷ ಪ್ರಥಮ ಬಾರಿಗೆ ದಸರಾ ಉತ್ಸವಕ್ಕೆ ಆಗಮಿಸಿದ ಏಕಲವ್ಯ ಆನೆ, ಶಾಂತಯುತ ವರ್ತನೆಗೆ ಮೆಚ್ಚುಗೆ ಗಳಿಸಿದ್ದು, ಅನುಭವಿ ಆನೆಗಳ ಜೊತೆಯಲ್ಲಿ ನಿಂತು, ಭವಿಷ್ಯದ ಅಂಬಾನಿ ಆನೆಯಾಗುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಕುಶಾಲತೋಪು ಸಿಡಿಸಿದ ಸಮಯದಲ್ಲಿ ಯಾವುದೇ ಭಯದ ಲಕ್ಷಣಗಳನ್ನು ತೋರಿಸಲಿಲ್ಲ.

ಕೆಲವು ಆರಂಭಿಕ ಹಿಂಜರಿಕೆಗಳ ಹೊರತಾಗಿಯೂ, ರೋಹಿತ್ ಮತ್ತು ಲಕ್ಷ್ಮಿಯಂತಹ ಆನೆಗಳು ಮರಳಿ ಶಾಂತಯುತ ಸ್ಥಿತಿಗೆ ಮರಳಿದವು. ಈ ಆನೆಗಳ ಮಾವುತರು ಮತ್ತು ಉಸ್ತುವಾರಿಗಳು ಅವುಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಐ ಬಿ ಪ್ರಭುಗೌಡ ಮತ್ತು ಕೆ ಎನ್ ಬಸವರಾಜ್, ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಂ ಮುತ್ತುರಾಜ್ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಪಶುವೈದ್ಯರಾದ ಡಾ ಮುಜೀಬ್ ರೆಹಮಾನ್ ಮುಂತಾದವರು ಮೇಲ್ವಿಚಾರಣೆ ವೇಳೆ ಹಾಜರಿದ್ದರು. ಬಳಿಕ ಆನೆಗಳ ಪ್ರದರ್ಶನ ಕುರಿತು ತೃಪ್ತಿ ವ್ಯಕ್ತಪಡಿಸಿದರು. ವಿಶೇಷವಾಗಿ ಎರಡು ವರ್ಷಗಳ ಹಿಂದೆ ಕಾಡಿನಿಂದ ಸೆರೆಹಿಡಿಯಲ್ಪಟ್ಟ ಏಕಲವ್ಯ ಆನೆಯ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ನಡುವೆ ಶ್ರೀರಂಗಪಟ್ಟಣ ದಸರಾ ಆಚರಣೆಯಲ್ಲಿ ಭಾಗವಹಿಸಲು ಹಿರಿಯ ಆನೆಗಳಲ್ಲಿ ಒಂದಾದ ಮಹೇಂದ್ರವನ್ನು ಆಯ್ಕೆ ಮಾಡಲಾಗಿದ್ದು, ಈ ಆನೆ ಜೊತೆಗೆ ಕುಮ್ಕಿ ಆನೆಗಳಾದ ಹಿರಣ್ಯ ಮತ್ತು ಲಕ್ಷ್ಮಿ ಕೂಡ ಬರಲಿದ್ದಾರೆ. ಆನೆಗಳ ಹೆಸರನ್ನು ಹಿರಿಯ ಅಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com