ರಾಜ್ಯದಲ್ಲಿ 2.37 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ: ಸರ್ಕಾರದ ಅಂಕಿ ಅಂಶಗಳ ಮಾಹಿತಿ

2016-17ರಲ್ಲಿ ಅತಿ ಹೆಚ್ಚು 8,009 ಎಕರೆ ವಶಪಡಿಸಿಕೊಂಡಿದೆ. 2023-24ರಲ್ಲಿ 1,900 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ.
ರಾಜ್ಯದಲ್ಲಿ 2.37 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ: ಸರ್ಕಾರದ ಅಂಕಿ ಅಂಶಗಳ ಮಾಹಿತಿ
Updated on

ಬೆಂಗಳೂರು: ಸೆಪ್ಟೆಂಬರ್ 1 ರವರೆಗೆ ರಾಜ್ಯದಲ್ಲಿ ಸುಮಾರು 2,37,079.24 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಅರಣ್ಯ ಇಲಾಖೆಯಿಂದ 1,25,306 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸರ್ಕಾರದ ಅಂಕಿಅಂಶಗಳು ಬಹಿರಂಗಪಡಿಸಿವೆ.

ಮೂರು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಅತಿಕ್ರಮಣದ ಒಟ್ಟು ಪ್ರಮಾಣವು ಅತ್ಯಧಿಕವಾಗಿದೆ. ಒಟ್ಟು 1,39,055.99 ಎಕರೆ ಭೂಮಿ ಒತ್ತುವರಿಯಾಗಿದ್ದು, ಅದರಲ್ಲಿ 1,07,477 ಪ್ರಕರಣಗಳು ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿದವುಗಳಾಗಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ಅರಣ್ಯ ಇಲಾಖೆ 28,103 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ. 2016-17ರಲ್ಲಿ ಅತಿ ಹೆಚ್ಚು 8,009 ಎಕರೆ ವಶಪಡಿಸಿಕೊಂಡಿದೆ. 2023-24ರಲ್ಲಿ 1,900 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ.

ಅರಣ್ಯ ಹಕ್ಕು ಕಾಯಿದೆ ಮತ್ತು ಜೀವನಾಧಾರದ ಹಕ್ಕನ್ನು ಮುಂದಿಟ್ಟುಕೊಂಡು ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ಅತಿಕ್ರಮಣ ತೆರವುಗೊಳಿಸದಂತೆ ಮತ್ತು ಸ್ಥಳಾಂತರ ಮಾಡದಂತೆ ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ಧಾರ ಕೈಗೊಂಡಿದೆ. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣ ಮತ್ತು ಭೂಮಿಯ ವಿಸ್ತೀರ್ಣ ಹೆಚ್ಚಿರುವ ಕಾರಣ ಅವುಗಳನ್ನು ಹೊರಹಾಕದಿರಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. "ಈ ಪ್ರಕರಣಗಳನ್ನು ನಿರ್ವಹಿಸಲು ಸಾಕಷ್ಟು ಭೂಮಿ ಅಥವಾ ಸಂಪನ್ಮೂಲಗಳಿಲ್ಲ. ಅಲ್ಲದೆ, ಈ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಸಂಖ್ಯೆಯೂ ಅತಿ ಹೆಚ್ಚು,” ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 2.37 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ: ಸರ್ಕಾರದ ಅಂಕಿ ಅಂಶಗಳ ಮಾಹಿತಿ
ಅರಣ್ಯ ಪ್ರದೇಶ ಹೆಚ್ಚಿಸಿ, ಒತ್ತುವರಿ ಕಟ್ಟುನಿಟ್ಟಾಗಿ ತಡೆಯಿರಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಒಟ್ಟು 10720.71 ಎಕರೆ ಅರಣ್ಯ ಭೂಮಿಯನ್ನು 30 ಎಕರೆಗೂ ಹೆಚ್ಚು ಒತ್ತುವರಿ ಮಾಡಿಕೊಂಡಿರುವ ಕುರಿತು 157 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ತೋರಿಸಿವೆ. 10-30 ಎಕರೆ ನಡುವಿನ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ 1,079 ಪ್ರಕರಣಗಳು, 3-10 ಎಕರೆ ಒತ್ತುವರಿ ಮಾಡಿಕೊಂಡಿರುವ ಸಂಬಂಧ 16,593 ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಅರಣ್ಯ ವೃತ್ತದಲ್ಲಿ 83,801.18 ಎಕರೆ ಒತ್ತುವರಿಯಾಗಿದ್ದು, 52,924 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 31,459.66 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, 8,576 ಪ್ರಕರಣಗಳು ದಾಖಲಾಗಿವೆ. ಇದಾದ ನಂತರ ಕೆನರಾ ಭಾಗದಲ್ಲಿ 29,881.72 ಎಕರೆ ಒತ್ತುವರಿಯಾಗಿದ್ದು, 21,655 ಪ್ರಕರಣಗಳು ದಾಖಲಾಗಿವೆ.

ಭೂಮಿ ವಶಪಡಿಸಿಕೊಳ್ಳುವುದು ಮತ್ತು ಒತ್ತುವರಿ ಗುರುತಿಸುವುದು ನಿರಂತರ ಪ್ರಕ್ರಿಯೆ. ಅಂಕಿ ಅಂಶ ಬದಲಾಗುತ್ತಲೇ ಇರುತ್ತದೆ. ಇಲಾಖೆಯು ಈಗ ತನ್ನ ಎಲ್ಲಾ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವ ಕೆಲಸ ಮಾಡುತ್ತಿದೆ ಮತ್ತು ಉಪಗ್ರಹ ಚಿತ್ರಗಳನ್ನು ಸಹ ಅತಿಕ್ರಮಣಗಳನ್ನು ಪತ್ತೆಹಚ್ಚಲು ಮತ್ತು ಭೂ ಬಳಕೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ. ಜನರು ನ್ಯಾಯಾಲಯಗಳನ್ನು ಸಂಪರ್ಕಿಸುವುದರಿಂದ ಮತ್ತು ಕಾನೂನು ಹೋರಾಟಗಳು ದೀರ್ಘಕಾಲ ನಡೆಯುವುದರಿಂದ ಭೂ ಒತ್ತುವರಿಯನ್ನು ತೆರವುಗೊಳಿಸುವುದು ಸುಲಭವಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com