ನಾಗಮಂಗಲ ಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು ಮಂಜೂರು

ಆರೋಪಿಗಳು ಇನ್ನೂ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದು, 1 ಲಕ್ಷ ರು. ಮೌಲ್ಯದ ಬಾಂಡ್ ಹಾಗೂ 'ಡಬಲ್ ಶ್ಯೂರಿಟಿ' ನೀಡಿದ ನಂತರ ಕಾರಾಗೃಹದಿಂದ ಬಿಡುಗಡೆ ಆಗುತ್ತಾರೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ
ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ
Updated on

ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್ ಜಾಮೀನು ಮಂಜೂರು ಮಾಡಿದೆ.ನಾಳೆ, ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 11ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಕಂಡಕಂಡಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಇಡೀ ಪ್ರಕರಣದ ಕೇಂದ್ರಬಿಂದು ಬದ್ರಿಕೊಪ್ಪಲು ಗ್ರಾಮ ಅಕ್ಷರಸಹಃ ಸ್ಮಶಾನ ಮೌನವಾಗಿತ್ತು. ಬಂಧನ ಭೀತಿಯಲ್ಲಿ ಹಲವು ಯುವಕರು ಗ್ರಾಮವನ್ನ ತೊರೆದಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಹಿಂದೂ ಸಮುದಾಯದ 18 ಮತ್ತು ಮುಸ್ಲಿಂ ಸಮುದಾಯದ 37 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆರೋಪಿಗಳು ಇನ್ನೂ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದು, 1 ಲಕ್ಷ ರು. ಮೌಲ್ಯದ ಬಾಂಡ್ ಹಾಗೂ 'ಡಬಲ್ ಶ್ಯೂರಿಟಿ' ನೀಡಿದ ನಂತರ ಕಾರಾಗೃಹದಿಂದ ಬಿಡುಗಡೆ ಆಗುತ್ತಾರೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧನದ ಭೀತಿ ಅಲ್ಲಿ ಇದ್ದ ಕಿರಣ್ ಎಂಬಾತ ಬ್ರೈನ್ ಸ್ಟೋಕ್ ನಿಂದಾಗಿ ಇತ್ತೀಚೆಗೆ ಸಾವನ್ನಪ್ಪಿದ್ದ.

ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲ ಅಕ್ಷರಶಃ ಹೊತ್ತಿ ಉರಿದಿತ್ತು. ಈ ಗಲಭೆ ಪ್ರಕರಣದ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು 55 ಆರೋಪಿಗಳನ್ನು ಬಂಧಿಸಿದ್ದರು. ನಾಗಮಂಗಲವನ್ನು ಸಂಪೂರ್ಣ ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ನಾಗಮಂಗಲದ ಗಲಭೆ ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು.

ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ
ನಾಗಮಂಗಲ ಗಲಭೆ ಕೇಸ್​: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಪಾರ್ಶ್ವವಾಯುನಿಂದ ಸಾವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com