ಬೆಂಗಳೂರು: ರಾತ್ರಿ ಮಲಗಿದ್ದಾಗ ಪದೇ ಪದೇ ಡಿ ಬಾಸ್ ಎಂದು ಕೂಗುತ್ತಿದ್ದುದನ್ನು ವಿರೋಧಿಸಿದ್ದಕ್ಕಾಗಿ ಇಬ್ಬರು ಯುವಕರು ತಮ್ಮ ಸ್ನೇಹಿತನ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಳಿಕೆರೆಯಲ್ಲಿ ನಡೆದಿದೆ.
ಗಾಯಗೊಂಡವನನ್ನು ವೆಂಕಟೇಶ್ ಸ್ವಾಮಿ (26) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮಹದೇವ್ ಮತ್ತು ಕಿರಣ್ ತಲೆಮರೆಸಿಕೊಂಡಿದ್ದಾರೆ. ಮೂವರು ಸ್ನೇಹಿತರು ಕಟ್ಟಡ ಕಾರ್ಮಿಕರಾಗಿದ್ದಾರೆ. ರಾಮನಗರ ಮೂಲದ ಇವರು ಸುಳ್ಳಿಕೆರೆಯ ಕಟ್ಟಡ ನಿರ್ಮಾಣ ಸ್ಥಳದಲ್ಲಿರುವ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದಾರೆ.
ಗುರುವಾರ ರಾತ್ರಿ ವೆಂಕಟೇಶ್ ಸ್ವಾಮಿ ಮಲಗಿದ್ದ, ಮಹದೇವ್ ಮತ್ತು ಕಿರಣ್ ಮದ್ಯ ಸೇವಿಸಿದ್ದರು. ಈ ವೇಳೆ ಇಬ್ಬರು ನಟ ದರ್ಶನ್ ಅವರನ್ನು ಉಲ್ಲೇಖಿಸಿ "ಡಿ ಬಾಸ್" ಎಂದು ಕೂಗಲು ಪ್ರಾರಂಭಿಸಿದರು. ಇದರಿಂದ ವಿಚಲಿತರಾದ ಸ್ವಾಮಿ ಅವರಿಗೆ ಹೊಡೆದು ಸುಮ್ಮನಿರುವಂತೆ ಹೇಳಿದರೂ ವ್ಯರ್ಥವಾಯಿತು. ನಟ ದರ್ಶನ್ ನಿಮಗೆ ಏನಾದರೂ ಸಹಾಯ ಮಾಡುತ್ತಿದ್ದಾರೆ, ನಿಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದಾರೆಯೇ ಎಂದು ಕೇಳಿದ್ದಾರೆ, ಆದರೆ ಇಬ್ಬರು ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ, ಹೀಗಾಗಿ ಸ್ವಾಮಿ ಅವರಿಗೆ ಮತ್ತೆ ಹೊಡೆಯಲು ಯತ್ನಿಸಿದಾಗ ಕಿರಣ್ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುದಿದ್ದಾನೆ, ನಂತರ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ಸ್ವಾಮಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement