ಅಂಬೇಡ್ಕರ್ ನಾಮಫಲಕ ಸಂಘರ್ಷ: 2 ಕೋಮು ನಡುವೆ ಕಲ್ಲುತೂರಾಟ; ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲೂ ಹಲ್ಲೆ

ಅಂಬೇಡ್ಕರ್ ನಾಮಫಲಕ (Ambedkar Nameplate) ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು, ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲೂ ಹಲ್ಲೆಯಾಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ವರದಿಯಾಗಿದೆ.
ಮೈಸೂರಿನಲ್ಲಿ ಕಲ್ಲು ತೂರಾಟ
ಮೈಸೂರಿನಲ್ಲಿ ಕಲ್ಲು ತೂರಾಟ
Updated on

ಮೈಸೂರು: ಅಂಬೇಡ್ಕರ್ ನಾಮಫಲಕ (Ambedkar Nameplate) ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು, ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲೂ ಹಲ್ಲೆಯಾಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ವರದಿಯಾಗಿದೆ.

ಮೈಸೂರಿನ ನಂಜನಗೂಡು (Nanjangud) ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಂಬೇಡ್ಕರ್ ನಾಮಫಲಕ (Ambedkar Nameplate) ವಿಚಾರದಲ್ಲಿ ನಡೆದ ಗಲಾಟೆ ನೋಡ ನೋಡುತ್ತಲೇ ಕೋಮು ಘರ್ಷಣೆಯಾಗಿ ಮಾರ್ಪಟ್ಟಿದೆ. ದುಷ್ಕರ್ಮಿಗಳು ಹಲ್ಲರೆ ಗ್ರಾಮದ ಮನೆಗಳಿಗೆ ಕಲ್ಲು ತೂರಾಟ (Stone Pelting) ಮಾಡಲಾಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನೂ ಕೂಡ ಜಖಂ ಮಾಡಲಾಗಿದೆ. ಘಟನೆಯಿಂದ ಇಡೀ ಗ್ರಾಮವೇ ಉದ್ವಿಗ್ನಗೊಂಡಿದ್ದು, ಎರಡೂ ಸಮುದಾಯದ ಬೀದಿಯಲ್ಲೂ ಕಲ್ಲು ತೂರಾಟ ನಡೆದಿದೆ.

ಹಲ್ಲರೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದ ಪೊಲೀಸರ ಮೇಲೆಯೂ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿ ಹಲ್ಲೆ ನಡೆಸಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು (Nanjangud Rural Police), ಎಸ್​​ಪಿ ಸೀಮಾ ಲಾಟ್ಕರ್ (SP Seema Latkar ) ದೌಡಾಯಿಸಿದ್ದಾರೆ. ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ಕಿಡಿಗೇಡಿಗಳಿಂದ ಹಲ್ಲರೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಗ್ರಾಮವು ಬೂದಿ ಮುಚ್ಚಿದ ಕೆಂಡದಂತಿದೆ. ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com