
ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್) ತನ್ನ ವೆಬ್‌ಸೈಟ್‌ಗೆ ಕನ್ನಡ ಭಾಷಾ ಆಯ್ಕೆಯನ್ನು ಅಳವಡಿಸಿದೆ.
ವಿಮಾನ ನಿಲ್ದಾಣದ ವೆಬ್‌ಸೈಟ್ ಇನ್ಮುಂದೆ ಕನ್ನಡದಲ್ಲೂ ಲಭ್ಯವಾಗಲಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣ ಸೇವೆಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಬಹುದು ಎಂದು ಬಿಐಎಎಲ್ ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
"ನಮ್ಮ ವೆಬ್‌ಸೈಟ್‌ನ ಕನ್ನಡ ಆವೃತ್ತಿಯನ್ನು https://www.bengaluruairport.com/kn/ ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಇದು ಹೆಚ್ಚು ಸಮಗ್ರ ಮತ್ತು ಸರಳವಾಗಿ ಪ್ರವೇಶಿಸಬಹುದಾದ ಅನುಭವವನ್ನು ಸೃಷ್ಟಿಸುವ ಗುರಿ ಹೊಂದಿದೆ. ನಮ್ಮ ಗ್ರಾಹಕರು ತಮ್ಮ ಆದ್ಯತೆಯ ಭಾಷೆಯಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಪಡೆಯಬಹುದು" ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರರ್ ಅವರು ಹೇಳಿದ್ದಾರೆ.
ಹೊಸ ಭಾಷಾ ಆಯ್ಕೆಯು ಕನ್ನಡದಲ್ಲಿ ರಿಯಲ್ ಟೈಮ್ ವಿಮಾನ ಮಾಹಿತಿಯನ್ನು ನೀಡುತ್ತದೆ. ನಿರ್ಗಮನ, ಆಗಮನ ಮತ್ತು ವಿಳಂಬಗಳ ಕುರಿತು ಮಾಹಿತಿ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡದಲ್ಲಿ ಸಮಗ್ರ FAQ ಗಳು ಸಾಮಾನ್ಯ ಪ್ರಶ್ನೆಗಳನ್ನು ಸಹ ಪರಿಹರಿಸುತ್ತವೆ, ಪ್ರಯಾಣ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ವಿಮಾನ ನಿಲ್ದಾಣದಾದ್ಯಂತ ಪ್ರಮುಖ ಬಹುಭಾಷಾ ಫಲಕಗಳು, ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆ, ಸಾರ್ವಜನಿಕ ಘೋಷಣೆ ವ್ಯವಸ್ಥೆಗಳು, ಅಂಗಡಿಗಳು ಮತ್ತು ಮಳಿಗೆಗಳ ಮೇಲಿನ ಫಲಕಗಳು, ಸಾಮಾಜಿಕ ಮಾಧ್ಯಮ ಉಪಸ್ಥಿತಿಯಿಂದ ಹಿಡಿದು ಕನ್ನಡದಲ್ಲಿ ಸಿಬ್ಬಂದಿ ಸಹಾಯದವರೆಗೆ, ವಿಮಾನ ನಿಲ್ದಾಣವನ್ನು ಕರ್ನಾಟಕದ ಸಂಸ್ಕೃತಿ ಮತ್ತು ನೀತಿಯನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಮಾರರ್ ಹೇಳಿದ್ದಾರೆ.
Advertisement