ಹುಬ್ಬಳ್ಳಿ: ರಾಮನವಮಿ ಶೋಭಾಯಾತ್ರೆ; ಸ್ಟೆಪ್ ಹಾಕಿ ಸಂಭ್ರಮಿಸಿದ ಪ್ರಲ್ಹಾದ ಜೋಶಿ! ವಿಡಿಯೋ

ಭಾನುವಾರ ರಾತ್ರಿ ನಡೆದ ಭವ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ಸಚಿವರು, ಶ್ರೀರಾಮನ ಭಜನೆಯೊಂದಿಗೆ ಸ್ಟೆಪ್ ಹಾಕಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
Joshi Dance During Ram Navami shobha yatra
ಪ್ರಲ್ಹಾದ ಜೋಶಿ
Updated on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇಂದು ರಾಮನವಮಿ ಪ್ರಯುಕ್ತ ಜರುಗಿದ ಶೋಭಾ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಸ್ಟೆಪ್ ಹಾಕಿ ಸಂಭ್ರಮಿಸಿದರು.

ಭಾನುವಾರ ರಾತ್ರಿ ನಡೆದ ಭವ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ಸಚಿವರು, ಶ್ರೀರಾಮನ ಭಜನೆಯೊಂದಿಗೆ ಸ್ಟೆಪ್ ಹಾಕಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಶೋಭಯಾತ್ರೆಯಲ್ಲಿ ಸೇರಿದ್ದ ಸಾವಿರಾರು ಹಿಂದೂ ಕಾರ್ಯಕರ್ತರ ಉತ್ಸಾಹಕ್ಕೆ ಮೆರುಗು ನೀಡಿದರು.

ಇದೇ ವೇಳೆ ಸಚಿವರು ಶ್ರೀರಾಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.

Joshi Dance During Ram Navami shobha yatra
ಅಯೋಧ್ಯೆ: ರಾಮಮಂದಿರದ ಬಾಲ ರಾಮನಿಗೆ ಸೂರ್ಯ ತಿಲಕ! ಮನ ಮೋಹಕ Video

ಶ್ರೀರಾಮ, ಹನುಮನ ಭಜನೆ, ಹಾಡುಗಳು, ಕಾರ್ಯಕರ್ತರ ಅತ್ಯುತ್ಸಾಹ ಸಚಿವರ ಮನಸ್ಸಿಗೂ ಉಲ್ಲಾಸ, ಹೊಸ ಉತ್ಸಾಹ ತುಂಬಿತು. ಸಚಿವ ಜೋಶಿ ಅವರೂ ರಾಮ ಭಜನೆ ಹಾಡುತ್ತಾ ಸಾಗಿದರು. ಕಾರ್ಯಕರ್ತರೊಂದಿಗೆ ಬೆರೆತು ನರ್ತಿಸಿ ಸಂಭ್ರಮಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com