
ಅಯೋಧ್ಯೆ: ರಾಮ ನವಮಿ ಅಂಗವಾಗಿ ಅಯೋಧ್ಯಯ ರಾಮ ಮಂದಿರದಲ್ಲಿ ಭಾನುವಾರ ಬಾಲ ರಾಮನಿಗೆ ಸೂರ್ಯ ತಿಲಕ ಆಚರಣೆ ನಡೆಯಿತು.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂರ್ಯ ತಿಲಕದ ವಿಡಿಯೋವನ್ನು ಹಂಚಿಕೊಂಡಿದೆ.
ಅಲ್ಲದೇ ಶ್ರೀರಾಮ ನವಮಿಯಂದು ರಾಮ ಲಲ್ಲಾ ಮೂರ್ತಿಗೆ ಅಭಿಷೇಕದ ಫೋಟೋಗಳನ್ನು ಕೂಡಾ ಫೋಸ್ಟ್ ಮಾಡಿದೆ. ಶ್ರೀರಾಮ ನವಮಿ ಹಾಗೂ ಈ ಅದ್ಬುತ ಕ್ಷಣಕ್ಕಾಗಿ ಅಪಾರ ಸಂಖ್ಯೆಯ ಭಕ್ತಾಧಿಗಳು ಬೆಳಗ್ಗೆಯಿಂದ ದೇವಾಲಯಕ್ಕೆ ಆಗಮಿಸುತ್ತಿದ್ದು, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಶ್ರೀರಾಮನ ಹಣೆಯ ಮೇಲಿನ ಸೂರ್ಯ ತಿಲಕವು ಸುಮಾರು 4 ನಿಮಿಷಗಳ ಕಾಲ ಇತ್ತು ಮತ್ತು ಅದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಧ್ಯಮ ಕೇಂದ್ರವು 'ಸೂರ್ಯ ತಿಲಕ'ದ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸೂರ್ಯನ ಕಿರಣಗಳು ರಾಮ ಲಲ್ಲಾನ ಹಣೆಯ ಮೇಲೆ ಬಿದ್ದ ತಕ್ಷಣ ನೆರೆದಿದ್ದ ಭಕ್ತರು ಸಂತೋಷದಿಂದ ನೃತ್ಯ ಮಾಡಿದರು. ಅಯೋಧ್ಯೆಗೆ ತಲುಪಲು ಸಾಧ್ಯವಾಗದವರು, ಶ್ರೀರಾಮ ಲಲ್ಲಾನ ಮಹಾಮಸ್ತಕಾಭಿಷೇಕದ ನೇರ ಪ್ರಸಾರವನ್ನು ತಮ್ಮ ಸ್ಥಳಗಳಿಂದ ವೀಕ್ಷಿಸಿದರು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
Advertisement