
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗೂ ಬೆಲೆ ಏರಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಶನಿವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಬೆಲೆ ಏರಿಕೆಗೂ ಗ್ಯಾರಂಟಿಗೂ ಯಾವುದೇ ಸಂಬಂಧ ಇಲ್ಲ. 25 ವರ್ಷದ ಹಿಂದೆ ಇದ್ದ ಬೆಲೆಯನ್ನೇ ಈಗಲು ಮುಂದುವರಿಸಲು ಆಗುತ್ತಾ? ಹಾಲಿನ ದರ 4 ರು. ಏರಿಕೆಯಾದ ಹಣವನ್ನು ಸಂಪೂರ್ಣ ರೈತರಿಗೆ ಕೊಡುತ್ತೇವೆ, ಏರಿಕೆ ಮಾಡಿರುವ ಹಣವನ್ನು ರೈತರಿಗೆ ನೀಡಲು ಎಲ್ಲಾ ಹಾಲು ಒಕ್ಕೂಟಗಳಿಗೆ ಸೂಚನೆ ನೀಡಿದ್ದೇವೆ. ಸರ್ಕಾರದ ನಿರ್ಧಾರ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮನಮೋಹನ್ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ 60 ರು. ಇತ್ತು- ಈಗ 103 ರುಪಾಯಿ ಆಗಿದೆ. ಆದರೂ ಯಾರೂ ಸಹ ಮಾತನಾಡುತ್ತಿಲ್ಲ, ಇದು ಜನರಿಗೆ ಹೊರೆ ಅಲ್ವಾ, ಯಾಕೆ ಯಾರೂ ಕೇಳ್ತಾ ಇಲ್ಲ? ಎಂದು ಪ್ರಶ್ನಿಸಿದರು.
ಹನಿಟ್ರ್ಯಾಪ್ ವಿಚಾರ ಕುರಿತು ಮಾತನಾಡಿ, ಈ ಕುರಿತು ಮಾತನಾಡಲ್ಲ. ತನಿಖೆ ಕುರಿತು ನನಿಗೇನು ಗೊತ್ತಿಲ್ಲ ಅವರು ದೂರು ಕೊಟ್ಟಿದ್ದಾರೆ ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅವರು ಏನು ಕಂಪ್ಲೆಂಟ್ ಕೊಟ್ಟಿದ್ದಾರೊ ಅದರ ಪ್ರಕಾರ ತನಿಖೆಯಾಗುತ್ತೆ, ಹನಿಟ್ರ್ಯಾಪ್ ಮಾಡಿದ್ದಾರೆಂದು ರಾಜಣ್ಣ ಹೇಳಿದ್ದಾರೆ. ತನಿಖೆ ಮಾಡೋಣ ಸತ್ಯಾಸತ್ಯತೆ ಹೊರಬರಲಿ ಎಂದು ತಿಳಿಸಿದರು.
Advertisement