ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ನ್ಯಾಯಾಂಗ ಬಂಧನ ವಿಸ್ತರಣೆ

ರನ್ಯಾ ರಾವ್, ಉದ್ಯಮಿ ತರುಣ್ ರಾಜು ಮತ್ತು ಆಭರಣ ವ್ಯಾಪಾರಿ ಸಾಹಿಲ್ ಜೈನ್ ಅವರು ದುಬೈನಿಂದ ಭಾರತಕ್ಕೆ 12.56 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪ ಹೊತ್ತಿದ್ದಾರೆ.
actress Ranya Rao
ನಟಿ ರಾನ್ಯಾ ರಾವ್
Updated on

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟಿ ರನ್ಯಾ ರಾವ್, ಮತ್ತಿಬ್ಬರ ನ್ಯಾಯಾಂಗ ಬಂಧನ ಅವಧಿಯನ್ನು ನಗರದ ನ್ಯಾಯಾಲಯವೊಂದು ಸೋಮವಾರ ಏಪ್ರಿಲ್ 21 ರವರೆಗೆ ವಿಸ್ತರಿಸಿದೆ.

ರನ್ಯಾ ರಾವ್, ಉದ್ಯಮಿ ತರುಣ್ ರಾಜು ಮತ್ತು ಆಭರಣ ವ್ಯಾಪಾರಿ ಸಾಹಿಲ್ ಜೈನ್ ಅವರು ದುಬೈನಿಂದ ಭಾರತಕ್ಕೆ 12.56 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪ ಹೊತ್ತಿದ್ದಾರೆ.

ಮಾರ್ಚ್ 3, 2025 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಯಿಂದ 14.8 ಕೆಜಿ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.

ನಂತರದ ತನಿಖೆ ವೇಳೆ ರನ್ಯಾ ಅವರು 2023 ಮತ್ತು 2025ರ ನಡುವೆ 45 ಬಾರಿ ಏಕಾಂಗಿಯಾಗಿ ಪ್ರವಾಸ ಮಾಡಿದ್ದು, ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಶಂಕೆಯನ್ನು ಹೆಚ್ಚಿಸಿತ್ತು.

ಹೆಚ್ಚಿನ ವಿಚಾರಣೆ ವೇಳೆ 2023 ರಲ್ಲಿ ನಟ ಮತ್ತು ಉದ್ಯಮಿ ತರುಣ್ ರಾಜು ಅವರೊಂದಿಗೆ 2023ರಲ್ಲಿ ದುಬೈ ಮೂಲದ ವಿರಾ ಡೈಮಂಡ್ ಟ್ರೆಡಿಂಗ್ ಸಂಸ್ಥೆಯೊಂದಿಗೆ ಸಂಬಂಧ ನಟಿ ಸಂಬಂಧ ಹೊಂದಿರುವುದು ತಿಳಿದುಬಂದಿತ್ತು. ವಿರಾಟ್ ಕೊಂಡೂರು ಎಂದೂ ಕರೆಯಲ್ಪಡುವ ರಾಜು ದುಬೈನಲ್ಲಿ ಚಿನ್ನ ಖರೀದಿಸಿ, ಭಾರತಕ್ಕೆ ಅಕ್ರಮವಾಗಿ ಸಾಗಿಸಲು ತೊಡಗಿಸಿಕೊಂಡಿರುವ ಕುರಿತು ಸಾಕ್ಷ್ಯಧಾರ ದೊರೆತ ನಂತರ ಆತನನ್ನು ಬಂಧಿಸಲಾಗಿತ್ತು.

actress Ranya Rao
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್: ಮತ್ತಷ್ಟು ಸ್ಫೋಟಕ ಸತ್ಯ ಬಯಲು, ರೂ. 40 ಕೋಟಿಗೂ ಅಧಿಕ ಮೊತ್ತದ ವ್ಯವಹಾರ!

ತನಿಖೆ ವೇಳೆ ಆಭರಣ ವ್ಯಾಪಾರಿ ಸಾಹಿಲ್ ಜೈನ್ ಸಹ ಈ ಜಾಲದಲ್ಲಿದ್ದು, ಸುಮಾರು 40 ಕೋಟಿ ರೂ. ಮೌಲ್ಯದ ಸುಮಾರು 49 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡಲು ರನ್ಯಾಗೆ ನೆರವಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ದೊಡ್ಡ ಮಟ್ಟದ ಹವಾಲಾ ವಹಿವಾಟು ನಡೆಸಿದ್ದು, ಕಮಿಷನ್ ಕೂಡಾ ಪಡೆದಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com