ಕಲಬುರಗಿ: SBI ATM ದರೋಡೆ; 18 ಲಕ್ಷ ರೂ ದೋಚಿ ಪರಾರಿ!

ಬುಧವಾರ ಬೆಳಗಿನ ಜಾವ ಗ್ಯಾಸ್ ಕಟ್ಟರ್ ಬಳಸಿ ಭದ್ರತೆ ಇಲ್ಲದ SBI ATM ಅನ್ನು ಮುರಿದ ಖದೀಮರು 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಂ ದರೋಡೆ
ಎಟಿಎಂ ದರೋಡೆPTI
Updated on

ಕಲಬುರಗಿ: ಬುಧವಾರ ಬೆಳಗಿನ ಜಾವ ಗ್ಯಾಸ್ ಕಟ್ಟರ್ ಬಳಸಿ ಭದ್ರತೆ ಇಲ್ಲದ SBI ATM ಅನ್ನು ಮುರಿದ ಖದೀಮರು 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮನಗರ ಬಳಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಎಟಿಎಂ ಕಿಯೋಸ್ಕ್‌ಗೆ ಪ್ರವೇಶಿಸಿದ ನಂತರ, ದುಷ್ಕರ್ಮಿಗಳು ತಮ್ಮ ಗುರುತು ಸಿಗದಂತೆ ಸಿಸಿಟಿವಿ ಕ್ಯಾಮೆರಾಗಳ ಮೇಲೆ ಕಪ್ಪು ಬಣ್ಣ ಎರಚಿದ್ದಾರೆ. ನಂತರ ಅವರು ಎರಡು ಎಟಿಎಂಗಳಲ್ಲಿ ಒಂದನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿದು ಹಣದೊಂದಿಗೆ ಪರಾರಿಯಾಗಿದ್ದಾರೆ.

ಇನ್ನೊಂದು ಯಂತ್ರದಲ್ಲಿ ಯಾವುದೇ ಹಣವಿಲ್ಲದ ಕಾರಣ ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಎಟಿಎಂಗೆ ಹಣ ತುಂಬಿಸಲಾಗಿದೆ ಎಂದು ಹೇಳಿದರು.

ಎಟಿಎಂ ದರೋಡೆ
ಬೇಸಿಗೆ ರಜೆ: ಬೆಂಗಳೂರಿಗರೇ, ಮನೆಗೆ ಬೀಗ ಹಾಕಿ ಊರುಗಳಿಗೆ, ಪ್ರವಾಸ ಹೋಗುವ ಮುನ್ನ ಇರಲಿ ಎಚ್ಚರ!

ದರೋಡೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಎಟಿಎಂನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಸಮಯದಲ್ಲಿ ಎಟಿಎಂ ಕಿಯೋಸ್ಕ್‌ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ಅವರು ಹೇಳಿದರು. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com