ಗೋಶಾಲೆಯಿಂದ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳ ಸಾಗಣೆ: ಯತ್ನಾಳ್ ವಿರುದ್ಧ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಗಂಭೀರ ಆರೋಪ

ನಗರ ಪಾಲಿಕೆ ವಶಪಡಿಸಿಕೊಂಡಿರುವ ಹೆಚ್ಚಿನ ಬಿಡಾಡಿ ದಕರುನಗಳನ್ನು ಕಗ್ಗೋಡು ಗ್ರಾಮದಲ್ಲಿರುವ ಯತ್ನಾಳ್ ಅವರ ಗೋಶಾಲೆಗೆ ಕಳುಹಿಸಲಾಗುತ್ತದೆ.
Basanagouda Patil Yatnal
ಬಸನಗೌಡ ಪಾಟೀಲ್ ಯತ್ನಾಳ್
Updated on

ವಿಜಯಪುರ: ಕಗ್ಗೋಡದಲ್ಲಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಗೋಶಾಲೆಯಿಂದ ಕಸಾಯಿಖಾಲೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದ್ದು, ದೊಡ್ಡ ಅವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಗರ ಪಾಲಿಕೆ ವಶಪಡಿಸಿಕೊಂಡಿರುವ ಹೆಚ್ಚಿನ ಬಿಡಾಡಿ ದಕರುನಗಳನ್ನು ಕಗ್ಗೋಡು ಗ್ರಾಮದಲ್ಲಿರುವ ಯತ್ನಾಳ್ ಅವರ ಗೋಶಾಲೆಗೆ ಕಳುಹಿಸಲಾಗುತ್ತದೆ. ಗೋಶಾಲೆಯಿಂದ ಯತ್ನಾಳ್ ಅವರು ಕಲಬುರಗಿಗೆ ಅಕ್ರಮವಾಗಿ ಕಸಾಯಿಖಾನೆಗೆ ಕಳುಹಿಸುವ ಮೂಲಕ ದೊಡ್ಡ ವ್ಯವಹಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಯತ್ನಾಳ್ ಅವರು ಆರೋಪ ನಿರಾಕರಿಸುವುದಾದರೆ, ಕಳೆದ 7-8 ವರ್ಷಗಳಿಂದ ಅವರ ಗೋಶಾಲೆಗೆ ಎಷ್ಟು ದನಕರುಗಳನ್ನು ಕಳುಹಿಸಲಾಗಿದೆ. ಅವುಗಳು ಏನಾದವು, ಎಲ್ಲಿಗೆ ಹೋದವು ಎಂಬುದರ ಕುರಿತು ದಾಖಲೆಗಳನ್ನು ನೀಡಲಿ ಎಂದು ಸವಾಲು ಹಾಕಿದರು. ಅಲ್ಲದೆ, ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು.

Basanagouda Patil Yatnal
ಪ್ರವಾದಿಯನ್ನು ಅವಮಾನಿಸಿದರೆ ಸಹಿಸುವುದಿಲ್ಲ: ಯತ್ನಾಳ್ ಗೆ ಮುಸ್ಲಿಂ ನಾಯಕರ ಎಚ್ಚರಿಕೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com