ಮೈಸೂರು: ಜೂನ್ ಅಂತ್ಯದ ವೇಳೆಗೆ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭ..!

ಕಾರ್ಖಾನೆಯು ಈ ಬಾರಿ 4.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಈಗಾಗಲೇ 4.53 ಲಕ್ಷ ಟನ್ ಕಬ್ಬಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮೈಶುಗರ್ ಕಾರ್ಖಾನೆ
ಮೈಶುಗರ್ ಕಾರ್ಖಾನೆ
Updated on

ಮೈಸೂರು: ಜೂನ್ ಅಂತ್ಯದ ವೇಳೆಗೆ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಭಾನುವಾರ ಹೇಳಿದರು.

ಭಾನುವಾರ ರೈತರು ಮತ್ತು ವಿವಿಧ ಸಂಘಟನೆಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆ ಸರ್ಕಾರದ ಆರ್ಥಿಕ ಬೆಂಬಲವಿಲ್ಲದೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.

ಕಾರ್ಖಾನೆಯು ಈ ಬಾರಿ 4.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಈಗಾಗಲೇ 4.53 ಲಕ್ಷ ಟನ್ ಕಬ್ಬಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆ ಆರಂಭಿಸಲು ಯಾವುದೇ ತೊಂದರೆಯಿಲ್ಲ. ಕಳೆದ ಬಾರಿಯಂತೆ ಸರ್ಕಾರದ ನೆರವು ಪಡೆಯದೇ ಈ ಬಾರಿಯೂ ಕಬ್ಬು ಅರೆಯುತ್ತೇವೆ. ಪ್ರತಿದಿನ ಕಾರ್ಖಾನೆಯಲ್ಲಿ ಐದು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದು, ಕನಿಷ್ಟ 4 ಸಾವಿರ ಟನ್ ಕಬ್ಬು ಅರೆಯುತ್ತೇವೆಂದು ಹೇಳಿದರು.

ಎರಡು ದಶಕಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಕಾರ್ಖಾನೆ ಲಾಭಾಂಶ ಕಂಡಿದೆ. 2 ಲಕ್ಷ ಟನ್ ಕಬ್ಬು ಅರೆದು ಪ್ರತಿ ಟನ್‌ಗೆ 122ನಂತೆ 2.44 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷ ಆಗಸ್ಟ್ 5ರಂದು ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಪ್ರಾರಂಭವಾಗಿ 25000 ಮೆಟ್ರಿಕ್ ಟನ್ ಕಬ್ಬಿನ ಗುರಿಯ ಪೈಕಿ 2,01,900 ಮೆಟ್ರಿಕ್ ಟನ್ ಕಬ್ಬು (ಶೇ 97.5) ನುರಿಸಲಾಗಿದೆ ಎಂದು ತಿಳಿಸಿದರು.

ಮೈಶುಗರ್ ಕಾರ್ಖಾನೆ
ಮೈಶುಗರ್ 52 ಕೋಟಿ ರೂ ವಿದ್ಯುತ್ ಬಿಲ್ ಮನ್ನಾ ಮಾಡಿದ ರಾಜ್ಯ ಸರ್ಕಾರ..!

ದಿನಕ್ಕೆ 5,000 ಟನ್ ಕಬ್ಬು ಅರೆಯುವ ಸಾಮರ್ಥ್ಯವಿರುವ ಬಾಯ್ಲಿಂಗ್ ಹೌಸ್ ಸ್ಥಾಪಿಸಲು ರೂ.60 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮಧ್ಯೆ, ಅಸ್ತಿತ್ವದಲ್ಲಿರುವ ಬಾಯ್ಲಿಂಗ್ ಹೌಸ್ ದುರಸ್ತಿ ಕಾರ್ಯ ಕೈಗೊಳ್ಳಲು ಕಾರ್ಖಾನೆಯು ರೂ.2 ರಿಂದ ರೂ.3 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಪ್ರಸ್ತುತ, ಕಾರ್ಖಾನೆಯು ದಿನಕ್ಕೆ 3,500 ಟನ್ ಕಬ್ಬು ಅರೆಯಲು ಒಂದು ಗಿರಣಿಯನ್ನು ಸ್ಥಾಪಿಸಿದ್ದು, ಬಾಯ್ಲರ್ ಹೌಸ್ ಅನ್ನು ಮೇಲ್ದರ್ಜೆಗೇರಿಲಾಗಿದೆ. ಇದರಿಂದ ಉತ್ತಮ ಗುಣಮಟ್ಟದ ಸಕ್ಕರೆಯನ್ನು ಉತ್ಪಾದಿಸಲು ಸಹಾಯವಾಗುತ್ತದೆ. ಹಿಂದಿನ ವರ್ಷದ ಸಕ್ಕರೆ ಉತ್ಪಾದನೆಯೂ ಉತ್ತಮ ಗುಣಮಟ್ಟದ್ದಾಗಿದೆ. ಈ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

"ಮೈಶುಗರ್ ಆರ್‌ಬಿ ಟೆಕ್ ಕಂಪನಿಯಿಂದ ನಷ್ಟವನ್ನು ಅನುಭವಿಸಿತು. ರಾಜ್ಯ ಸರ್ಕಾರದ ನಿರ್ದೇಶನದಂತೆ ಆರ್‌ಬಿ ಟೆಕ್‌ಗೆ 3.6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದೀಗ ಈ ನಷ್ಟವನ್ನು ಮೈಶುಗರ್ ಏಜೆನ್ಸಿಯ ಭದ್ರತಾ ಠೇವಣಿಯಿಂದ ಕಡಿತಗೊಳಿಸಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com