ಚಿನ್ನ ಕಳ್ಳಸಾಗಣೆ ಪ್ರಕರಣ: ಕಸ್ಟಮ್ಸ್ ಅಧಿಕಾರಿಗಳಿಂದ ಶೋಧ, ಕಾನೂನು ಬದ್ಧತೆ ಪ್ರಶ್ನಿಸಿದ ನಟಿ ರನ್ಯಾ ರಾವ್!

ಮಹಜರ್‌ನಲ್ಲಿನ ವ್ಯತ್ಯಾಸಗಳು ಮತ್ತು ಕಾರ್ಯಾಚರಣೆಯ ಮೊದಲು ನೀಡಲಾದ ಸೂಚನೆಗಳನ್ನು ಉಲ್ಲೇಖಿಸಿದ ಅವರು, ಶೋಧ ಮತ್ತು ಬಂಧನದಲ್ಲಿ ಅನುಸರಿಸಲಾದ ವಿಧಾನದಲ್ಲಿ ಕಾನೂನುಬಾಹಿರವಾಗಿದೆ ಎಂದರು.
Ranya Rao
ರನ್ಯಾರಾವ್
Updated on

ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಡೆಸಿರುವ ಶೋಧ ಹಾಗೂ ವಶ ಕಾರ್ಯಾಚರಣೆ, ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದುಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಮುಂದೆ ಹಾಜರಾದ ರನ್ಯಾ ಪರ ಹಿರಿಯ ವಕೀಲ ಸಂದೇಶ್ ಜೆ ಚೌಟ ಅವರು, ಯಾವುದೇ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಅಥವಾ ಗೆಜೆಟೆಡ್ ಕಸ್ಟಮ್ಸ್ ಅಧಿಕಾರಿಯ ಮುಂದೆ ಹಾಜರುಪಡಿಸುವುದನ್ನು ಕಡ್ಡಾಯ ಮಾಡಿರುವ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ಅನ್ನು ಉಲ್ಲಂಘಿಸಿ ಶೋಧ ನಡೆಸಲಾಗಿದೆ. ಈ ಕಾಯ್ದೆಯನ್ನು ಅನುಸರಿಸುವಲ್ಲಿ ವಿಫಲವಾದ್ದಲ್ಲಿ ವಶಕ್ಕೆ ಪಡೆದೆಲ್ಲಾ ಅಮಾನ್ಯವಾಗುತ್ತದೆ ಎಂದು ವಾದಿಸಿದರು.

ಮಹಜರ್‌ನಲ್ಲಿನ ವ್ಯತ್ಯಾಸಗಳು ಮತ್ತು ಕಾರ್ಯಾಚರಣೆಯ ಮೊದಲು ನೀಡಲಾದ ಸೂಚನೆಗಳನ್ನು ಉಲ್ಲೇಖಿಸಿದ ಅವರು, ಶೋಧ ಮತ್ತು ಬಂಧನದಲ್ಲಿ ಅನುಸರಿಸಲಾದ ವಿಧಾನದಲ್ಲಿ ಕಾನೂನುಬಾಹಿರವಾಗಿದೆ ಎಂದರು.

ಶೋಧ ಮತ್ತು ಬಂಧನದ ನೇತೃತ್ವ ವಹಿಸಿದ ಅಧಿಕಾರಿಯನ್ನು ಕೇವಲ ಗೆಜೆಟೆಡ್ ಅಧಿಕಾರಿ ಎಂದು ಹೇಳಿರುವುದು ಇಡೀ ಕಾರ್ಯಾಚರಣೆಯ ಕಾನೂನುಬದ್ಧತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಕಾನೂನಿನಲ್ಲಿರುವಂತೆ ಬಂಧನಕ್ಕೆ ಕಾರಣವನ್ನು ಔಪಚಾರಿಕವಾಗಿ ರನ್ಯಾ ಅವರ ಕುಟುಂಬ ಸದಸ್ಯರಿಗೆ ಲಿಖಿತವಾಗಿ ತಿಳಿಸಲಾಗಿಲ್ಲ . ರನ್ಯಾ ಅವರ ಪತಿಗೆ ದೂರವಾಣಿ ಕರೆ ಮೂಲಕ ಮಾತ್ರ ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದಕ್ಕೆ ಪೂರಕವಾಗಿ ಎರಡು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಚೌಟಾ, ಕಸ್ಟಮ್ಸ್ ಆಕ್ಟ್ ಅಡಿಯ ಅಪರಾಧಗಳು ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಯೊಂದಿಗೆ ದಂಡನೀಯವಾಗಿರುವುದರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಸಾಮಾನ್ಯವಾಗಿ ಜಾಮೀನಿಗೆ ಪರಿಗಣಿಸುತ್ತವೆ. ಮಹಿಳೆಯಾಗಿರುವ ರನ್ಯಾ ಈಗಾಗಲೇ 45 ದಿನಗಳ ಕಾಲ ಬಂಧನದಲ್ಲಿದ್ದಾರೆ ಎಂದು ತಿಳಿಸಿದರು.

Ranya Rao
ಮದುವೆಯಾದ ದಿನದಿಂದ ನಾನು...: ಜೈಲು ಪಾಲಾಗಿರುವ ನಟಿ ರನ್ಯಾರಾವ್ ಗೆ ವಿಚ್ಛೇದನ ನೀಡಲು ಪತಿ ಸಿದ್ಧತೆ!

ರನ್ಯಾ ಮತ್ತು ಆಕೆಯ ಸಹ ಆರೋಪಿ ತರುಣ್ ಕೊಂಡೂರು ರಾಜು ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏಪ್ರಿಲ್ 21 ಕ್ಕೆ ಮುಂದೂಡಿದ ನ್ಯಾಯಾಲಯ, ಅದರೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com