News Headlines 23-04-25 | ರಾಜ್ಯದ ಮೂವರು ಸೇರಿ 26 ಪ್ರವಾಸಿಗರು ಸಾವು: 10 ಲಕ್ಷ ರೂ ಪರಿಹಾರ; ಉಗ್ರರ ದಮನಕ್ಕೆ ಕೇಂದ್ರದ ಜೊತೆ ನಿಲ್ತೀವಿ: ಖರ್ಗೆ; ಗುಟ್ಕಾ ತಿನ್ನುವವರಿಗೆ Namma metro ದಂಡ!

News Headlines 23-04-25 | ರಾಜ್ಯದ ಮೂವರು ಸೇರಿ 26 ಪ್ರವಾಸಿಗರು ಸಾವು: 10 ಲಕ್ಷ ರೂ ಪರಿಹಾರ; ಉಗ್ರರ ದಮನಕ್ಕೆ ಕೇಂದ್ರದ ಜೊತೆ ನಿಲ್ತೀವಿ: ಖರ್ಗೆ; ಗುಟ್ಕಾ ತಿನ್ನುವವರಿಗೆ Namma metro ದಂಡ!

1. ರಾಜ್ಯದ ಮೂವರು ಸೇರಿ 26 ಪ್ರವಾಸಿಗರು ಸಾವು: 10 ಲಕ್ಷ ಪರಿಹಾರ

ಜಮ್ಮು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ವ್ಯಾಲಿಯಲ್ಲಿ ಉಗ್ರರು ನಡೆಸಿದ್ದ ನರಮೇಧದಲ್ಲಿ ರಾಜ್ಯದ ಮೂವರು ಸೇರಿದಂತೆ 28 ಮಂದಿ ಪ್ರವಾಸಿಗರು ಬಲಿಯಾಗಿದ್ದಾರೆ. ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಮತ್ತು ಮಧುಸೂದನ್ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಶ್ರೀನಗರದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಹಾಗೂ ಮೃತರ ಮೃತದೇಹಗಳನ್ನು ತರುವ ಸಲುವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅಧಿಕಾರಿಗಳೊಂದಿಗೆ ಪಹಲ್ಗಾಮ್ಗೆ ತೆರಳಿದ್ದಾರೆ. ಅಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಲಾಡ್ ಎಚ್ಚರವಹಿಸಿದ್ದಾರೆ. ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 40ಕ್ಕೂ ಹೆಚ್ಚು ಕನ್ನಡಿಗರು ಭಯೋತ್ಪಾದಕ ದಾಳಿಯಲ್ಲಿ ಸಿಲುಕಿಕೊಂಡಿದ್ದು ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

2. ಉಗ್ರರ ಧಮನಕ್ಕೆ ಕೇಂದ್ರದ ಜೊತೆ ನಿಲ್ತೀವಿ: ಖರ್ಗೆ

ಪಹಲ್ಗಾಮ್ ಉಗ್ರರ ದಾಳಿ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಉಗ್ರರ ಈ ದುಷ್ಕೃತ್ಯವನ್ನು ಪಕ್ಷಾತೀತವಾಗಿ ಖಂಡಿಸುತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತದ ಮೇಲಿನ ನೇರ ದಾಳಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಕ್ಷಣದಲ್ಲಿ ಇಡೀ ರಾಷ್ಟ್ರವು ಭಯೋತ್ಪಾದಕರ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಒಂದಾಗಿದೆ ಎಂದು ತಿಳಿಸಿದ್ದಾರೆ. ಭಯೋತ್ಪಾದಕರನ್ನು ಬೇಟೆಯಾಡಲು ಸರ್ಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಬೇಕೆಂದು ಖರ್ಗೆ ಒತ್ತಾಯಿಸಿದರು. ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಎ ತೊಯ್ಬಾ ಅಂಗ ಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ ನ ನಾಲ್ವರು ದಾಳಿಕೋರ ಉಗ್ರರ ಫೋಟೋಗಳನ್ನು ಭದ್ರತಾ ಪಡೆಗಳು ಬಿಡುಗಡೆ ಮಾಡಿದೆ. ಉಗ್ರರ ಪೈಕಿ ಇಬ್ಬರು ಪಾಕ್ ಮೂಲದ ಉಗ್ರರಾದರೇ ಮತ್ತಿಬ್ಬರು ಸ್ಥಳೀಯರು ಎಂದು ತಿಳಿದುಬಂದಿದೆ. ಲಷ್ಕರ್‌ ಇ ತೊಯ್ಬಾದ ಡೆಪ್ಯುಟಿ ಚೀಫ್ ಸೈಫುಲ್ಲಾ ಕಸೂರಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಆಗಿದ್ದಾನೆ.

3. Nammametro ದಲ್ಲಿ ಗುಟ್ಕಾ ತಿನ್ನುವವರಿಗೆ ದಂಡ

ಮೆಟ್ರೋ ಆವರಣ ಮತ್ತು ರೈಲುಗಳಲ್ಲಿ ತಂಬಾಕು ಆಧಾರಿತ ಉತ್ಪನ್ನಗಳನ್ನು ಸೇವಿಸುತ್ತಿರುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ ಎಂದು BMRCL ಹೇಳಿದೆ. ಇದಕ್ಕಾಗಿ, ಬಿಎಂಆರ್‌ಸಿಎಲ್, ಜನದಟ್ಟಣೆ ಇಲ್ಲದ ಸಮಯದಲ್ಲಿ ತನ್ನ ಗಸ್ತು ತಿರುಗುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದೆ. ಅಗಿಯಬಹುದಾದ ತಂಬಾಕು ಆಧಾರಿತ ಉತ್ಪನ್ನಗಳನ್ನು ಬಳಸುವ ಪ್ರಯಾಣಿಕರ ಬಗ್ಗೆ ಸಾರ್ವಜನಿಕ ದೂರುಗಳನ್ನು ಪರಿಹರಿಸಲು ಮತ್ತು ಪರಿಣಾಮವಾಗಿ ಮೆಟ್ರೋ ಆವರಣ ಮತ್ತು ರೈಲುಗಳಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ತಂಬಾಕು ಪತ್ತೆ ಹಚ್ಚಲು ಪ್ಯಾಟ್-ಡೌನ್ ತಪಾಸಣೆಗಳನ್ನು ಜಾರಿಗೆ ತರಲು BMRCL ನಿರ್ಧರಿಸಿದೆ.

4. BJP ಮಾಜಿ MLC ವೈಎ ನಾರಾಯಣಸ್ವಾಮಿ ಆಪ್ತನಿಂದ ಗುಂಡಿನ ದಾಳಿ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂಎಲ್ಸಿ ವೈ.ಎ ನಾರಾಯಣಸ್ವಾಮಿ ಸಂಬಂಧಿ ಸಕಲೇಶಕುಮಾರ್ ಎಂಬಾತ ಗುಂಡು ಹಾರಿಸಿದ್ದಾನೆ. ಕಲ್ಲು ಕ್ವಾರಿ ಕ್ರಷರ್ಗೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಕಲೇಶಕುಮಾರ್ ಗುಂಡು ಹಾರಿಸಿದ್ದು ಗುಂಡು ತಗುಲಿ ಚಿಕನ್ ರವಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಹಾಗೂ ದೀಪ್ತಿ ಎನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ಸಕಲೇಶಕುಮಾರ್ನನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

5. ವಿಧಾನಸೌಧ ನೋಡಲು ಪ್ರತಿ ವ್ಯಕ್ತಿಗೆ 150 ರೂ. ಟಿಕೆಟ್ ಶುಲ್ಕ

ರಾಜ್ಯ ಸರ್ಕಾರವು ವಿಧಾನಸೌಧದ ಮಾರ್ಗದರ್ಶಿ ಪ್ರವಾಸಕ್ಕಾಗಿ ಪ್ರತಿ ವ್ಯಕ್ತಿಗೆ 150 ರೂ. ಟಿಕೆಟ್ ಶುಲ್ಕವನ್ನು ನಿಗದಿಪಡಿಸಿದೆ. ಈ ಸಂಬಂಧ ವಿಧಾನಸೌಧ ಸ್ಪೀಕರ್ ಯು.ಟಿ. ಖಾದರ್, ಮುಖ್ಯ ಕಾರ್ಯದರ್ಶಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ತಿಂಗಳ ಆರಂಭದಲ್ಲಿ, ಇಲಾಖೆಯು ಪ್ರವಾಸ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಅನುಮತಿ ಕೋರಿದೆ. ಡಿಪಿಎಆರ್ ತನ್ನ ಆದೇಶದಲ್ಲಿ ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿಧಾನಸಭೆ ಮತ್ತು ಪರಿಷತ್ತು ಮತ್ತು ಇತರ ಸ್ಥಳಗಳಿಗೆ ಜನರನ್ನು ಕಟ್ಟಡದ ಒಳಗೆ ಬಿಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com