ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಕ್ಯಾತೆ: ಫಡ್ನವಿಸ್ ಆಕ್ಷೇಪಣೆಗೆ ಸಂಸದ ಬೊಮ್ಮಾಯಿ ತೀವ್ರ ಕಿಡಿ

ಸಾಂಗ್ಲಿ ಮತ್ತು ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲಿ ಯಾವುದೇ ಪ್ರವಾಹ ಸಮಸ್ಯೆ ಇಲ್ಲ ಎಂದು ಈಗಾಗಲೇ ನ್ಯಾಯಮಂಡಳಿಯ ತೀರ್ಪು ಇದೆ. ಆದರೂ ಮಹಾರಾಷ್ಟ್ರದ ಜನರು ಎತ್ತಿರುವ ಸಮಸ್ಯೆ ಅನಗತ್ಯ.
Basavaraj Bommai
ಬಸವರಾಜ ಬೊಮ್ಮಾಯಿonline desk
Updated on

ಹುಬ್ಬಳ್ಳಿ: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ನಿರ್ಧಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಅಸಮಂಜಸ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಂಗ್ಲಿ ಮತ್ತು ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲಿ ಯಾವುದೇ ಪ್ರವಾಹ ಸಮಸ್ಯೆ ಇಲ್ಲ ಎಂದು ಈಗಾಗಲೇ ನ್ಯಾಯಮಂಡಳಿಯ ತೀರ್ಪು ಇದೆ. ಆದರೂ ಮಹಾರಾಷ್ಟ್ರದ ಜನರು ಎತ್ತಿರುವ ಸಮಸ್ಯೆ ಅನಗತ್ಯ. ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ, ನಮ್ಮ ಸರ್ಕಾರ ಅದನ್ನು ನೋಡಿಕೊಳ್ಳುತ್ತದೆ. ಅದೇ ರೀತಿ, ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾದರೆ, ಮಹಾರಾಷ್ಟ್ರ ಸರ್ಕಾರ ಅದನ್ನು ನೋಡಿಕೊಳ್ಳಬೇಕು ಎಂದು ಹೇಳಿದರು.

ಆಲಮಟ್ಟಿ ಅಣೆಕಟ್ಟು ನಿರ್ಮಿಸುವ ಮೊದಲು ಸಾಂಗ್ಲಿಯಲ್ಲಿ ಪ್ರವಾಹ ಉಂಟಾಗಿತ್ತು. 2005 ರಲ್ಲಿ ದೊಡ್ಡ ಪ್ರಮಾಣದ ಪ್ರವಾಹವೂ ಉಂಟಾಗಿತ್ತು, ಆಗ ಕೇಂದ್ರ ಜಲ ಆಯೋಗದ ತಂಡ ಬಂದು ಆಲಮಟ್ಟಿ ಅಣೆಕಟ್ಟು ಮತ್ತು ಪ್ರವಾಹದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ವರದಿ ಮಾಡಿತ್ತು. ಆದ್ದರಿಂದ, ಮಹಾರಾಷ್ಟ್ರ ಮುಖ್ಯಮಂತ್ರಿ ಸೃಷ್ಟಿಸುವುದು ಅನಗತ್ಯ ವಿವಾದ, ಇದು ಅಸಮಂಜಸ ಎಂದು ತಿಳಿಸಿದರು.

ನದಿ ಜೋಡಣೆಯ ಬಗ್ಗೆ ಜನಜಾಗೃತಿಯನ್ನು ಮಾಡಿರುವಂತದು ನಮ್ಮ ಹಿಂದಿನ ಪಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಅದರಲ್ಲಿ ಎರಡು ವಿಭಾಗದಲ್ಲಿ ವಿಂಗಡನೆ ಆಯಿತು. ಹಿಮಾಲಯನ್ ನದಿ ಜೋಡಣೆ ಅಂದರೆ ಉತ್ತರದ ನದಿಗಳು, ಮತ್ತೆ ವಿಂದ್ಯ ಪರ್ವತದ ಕೆಳಗೆ ಇರುವ ನದಿ ಜೋಡಣೆ. ನಮಗೆ ಸಂಬಂಧಿಸಿರುವ ಬೆಡ್ತಿ ವರದಾ ನದಿ ಜೋಡಣೆಗೆ ಎನ್‌ಡಬುಡಿಎ ವತಿಯಿಂದ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಇದರದೇ ಆದ ಸವಾಲುಗಳಿದ್ದವು ನಾವು ಮೊದಲನೇ ಪ್ರಸ್ತಾವನೆಯನ್ನು ಜಾರಿಗೆ ತರಲು ಹೋದಾಗ ಪರಿಸರದ ಮೇಲೆ ಪರಿಣಾಮ ಆಗುತ್ತದೆ ಎಂದು ಅದನ್ನು ಮಾರ್ಪಾಡು ಮಾಡಿ ನಾನು ಸಿಎಂ ಆಗಿದ್ದಾಗ ಎನ್ ಡಬ್ಲ್ಯುಡಿಎ ಕಳುಹಿಸಿದ್ದೆವು.

ಅದರಲ್ಲಿ ಕೆಲವು ಮಾರ್ಪಾಡಲು ಮಾಡಲು ಅವರು ಕಳುಹಿಸಿದ್ದಾರೆ. ಯಾವುದೇ ಪರಿಸರ ಮತ್ತು ಜೈವಿಕ ಹಾನಿಯಾಗದಂತೆ ಲಿಂಕ್ ಮುಖಾಂತರ ಮಾಡುವಂತಹ ಯೋಜನೆ ಇದಾಗಿದೆ. ಎರಡು ಲಿಂಕ್‌ನಲ್ಲಿ ಈ ಯೋಜನೆ ಆಗುತ್ತದೆ. ಬೆಡ್ತಿ ವರದಾ ನ್ಯಾಷನಲ್ ಪ್ರಾಸ್ಪೆಕ್ಟಿವ್ ಪ್ಲಾನ್ ಮತ್ತು ಇನ್ನೊಂದು ಬೆಡ್ತಿ ಧರ್ಮಾ ವರದಾ ಲಿಂಕ್ ಮೂಲಕ ಜೋಡಣೆ ಮಾಡುವುದು. ಎರಡು ಲಿಂಕ್‌ಗಳ ಮೂಲಕ ಯೋಜನೆ ಮಾಡಲು ಎಂಜನೀಯರ್‌ಗಳು ಯೋಜನೆ ರೂಪಿಸಿದ್ದಾರೆ ಎಂದರು.

Basavaraj Bommai
ಮಹಾರಾಷ್ಟ್ರದ ಆಕ್ಷೇಪಣೆ ನಡುವೆಯೂ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಬದ್ಧ!

ಈಗಾಗಲೇ ಅವತ್ತಿನ ಯೋಜನೆ ಪ್ರಕಾರ 1995 ರಲ್ಲಿ ಒಂದು ರೂಪರೇಷೆ ಆಗಿತ್ತು. ಅದಾದ ಮೇಲೆ 2008-09-10 ರಲ್ಲಿ ಜಾರಿ ಮಾಡಲು ಹೋದಾಗ ವಿರೋಧ ವ್ಯಕ್ತವಾಯಿತು. ಅದನ್ನು ಮಾರ್ಪಾಡು ಮಾಡಿ 2017 ರಲ್ಲಿ ಯೋಜನೆ ತಯಾರಿಸಿ ನಾನು ಮುಖ್ಯಮಂತಿಯಾಗಿದ್ದಾಗ 2022 ರಲ್ಲಿ ಡಿಪಿಆರ್ ಕಳುಹಿಸಲಾಗಿತ್ತು. ಈಗಾಗಲೇ ಒಂದು ಡಿಪಿಆರ್ ಇದೆ. ಈಗ ಎನ್‌ಡಬ್ಲ್ಯುಎದವರು ಏನು ಸಲಹೆ ಕೊಡುತ್ತಾರೆ ಅದರ ಆಧಾರದ ಮೇಲೆ ಹೊಸ ಡಿಪಿಆರ್ ಮಾಡಬೇಕು. ಮೊದಲಿನ ಯೋಜನೆಯಲ್ಲಿ ಪರಿಸರ ಹಾನಿಯಾಗುತ್ತಿತ್ತು. ಈಗಿನ ಯೋಜನೆಯಲ್ಲಿ ಯಾವುದೇ ಪರಿಸರ ಹಾನಿಯಾಗುವುದಿಲ್ಲ. ಈ ಬಗ್ಗೆ ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ಘಟಪ್ರಭಾ, ತುಂಗಭದ್ರಾ ಸೇರಿ ಹಲವಾರು ನದಿಗಳು ಪಶ್ಚಿಮದಲ್ಲಿ ಹುಟ್ಟು ಪೂರ್ವಕ್ಕೆ ಹರಿಯುತ್ತವೆ. ಕೆಲವು ನದಿಗಳು ಪಶ್ಚಿಮದಲ್ಲಿಯೇ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತವೆ. ಹೀಗಾಗಿ ಪಶ್ಚಿಮ ಘಟ್ಟದಲ್ಲಿಯೇ ಹುಟ್ಟಿ ಸಮುದ್ರ ಸೇರುವ ನೀರನ್ನು ಬಳಕೆ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅದನ್ನು ಬಳಕೆ ಮಾಡಿಕೊಳ್ಳಬೇಕಿದೆ. ತುಂಗಭದ್ರಾ ಅತಿ ಹೆಚ್ಚು ಜಲಾನಯನ ಪ್ರದೇಶ ಹೊಂದಿದೆ. ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಈವೆಲ್ಲ ಯೋಜನೆಗಳು ಬರುತ್ತವೆ. ಸಾವಿರಾರು ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಕುಡಿಯೋ ನೀರು ಕೊಡುವ ತುಂಗ ಭದ್ರಾಗೆ ಸಮಸ್ಯೆಯಾಗುತ್ತದೆ ಅದನ್ನು ಸರಿದೂಗಿಸಿದರೆ ಕುಡಿಯುವ ನೀರು, ರೈತರಿಗೆ ಕೃಷಿಗೆ ನೀರು ದೊರೆಯುತ್ತದೆ. ಈ ಯೋಜನೆ ಬದಲಾವಣೆ ಮಾಡಿದರೆ ಯಾವುದೇ ಮುಳುಗಡೆ ಸಮಸ್ಯೆ ಆಗುವುದಿಲ್ಲ ಎಂದರು.

ರಸಗೊಬ್ಬರ ಪೂರೈಕೆ ವಿಚಾರ ಕುರಿತು ಮಾತನಾಡಿ, ರಾಜ್ಯದಲ್ಲಿ ಒಟ್ಟು ಒಪನಿಂಗ್ ಸ್ಟಾಕ್ 1.7 ಲಕ್ಷ ಟನ್‌ ಮತ್ತು ಈಗ 5.74 ಲಕ್ಷ ಟನ್ ಸೇರಿ ಒಟ್ಟು 7.5 ಲಕ್ಷ ಟನ್‌ಗಿಂತ ಹೆಚ್ಚು ಸರಬರಾಜಾಗಿದೆ. ಕೇಂದ್ರದಿಂದ ಸುಮಾರು 8 ಲಕ್ಷಕ್ಕಿಂತ ಹೆಚ್ಚು ಟನ್ ಸರಬರಾಜಾಗಿದೆ. ರಾಜ್ಯದಲ್ಲಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎಂದು ಅಂದಾಜು ಮಾಡಲಿಲ್ಲ. ಯಾವಾಗ ಗೊಬ್ಬರದ ಕೊರತೆ ಗೊಂದಲ ಶುರುವಾಯಿತು ಆಗ ಕಾಳ ಸಂತೆಯಲ್ಲಿ ಮಾರಾಟ ಹೆಚ್ಚಾಯಿತು. ಇದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸೇರಿಕೊಂಡಿದ್ದಾರೆ. ಬಡ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಸರತಿಯಲ್ಲಿ ಯಾವುದೇ ಶೀಮಂತ ಅವರು ಇಲ್ಲ. ಈಗಾಗಲೇ ರಾಜ್ಯದಲ್ಲಿ 15 ಲಕ್ಷ ಟನ್ ಸ್ಟಾಕ್ ಇದೆ. 1.5 ಲಕ್ಷ ಟನ್ ಗೊಬ್ಬರ ಬರುತ್ತದೆ ಅದನ್ನು ಸರಿಯಾಗಿ ವಿತರಣೆ ಮಾಡಬೇಕು ಎಂದರು.

ರಾಜ್ಯ ಸರ್ಕಾರ ಪತ್ರ ಬರೆದ ನಂತರ ಗೊಬ್ಬರ ಸರಬರಾಜಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪತ್ರ ಬರೆದ ನಂತರ ಗೊಬ್ಬರ ಸರಬರಾಜಾಗಿದೆ ಎಂದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರಿಯಾ ಗೊಬ್ಬರಕ್ಕೆ ಬಹಳಷ್ಟು ತೊಂದರೆ ಇದೆ. ಮೂರು ಬಾರಿ ಕೇಂದ್ರ ಟೆಂಡ‌ರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಯೂರಿಯಾ ಕೊರತೆಯ ನಡುವೆಯೂ ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿದೆ. ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಸಮರ್ಪಕವಾಗಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

Basavaraj Bommai
10-15 ದಿನಗಳಲ್ಲಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ: ಸಂಸದ ಬೊಮ್ಮಾಯಿ

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ

ರಾಜ್ಯದಲ್ಲಿ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತಿದೆ. ರಾಜ್ಯ ಸರ್ಕಾರದ ದುರಾಡಳಿತ ನೋಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಹಾವೇರಿ ಬಿಜೆಪಿಯನ್ನು ಪ್ರಭಲವಾಗಿ ಕಟ್ಟಬೇಕೆಂದು ತೀರ್ಮಾನ ಮಾಡಿದ್ದೇವೆ. ಹಾವೇರಿ ಜಿಲ್ಲೆಯ ಜನ ಸಾಗರವೇ ಬಿಜೆಪಿ ಜೊತೆ ಬರಬೇಕು. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ.‌ ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಹೋರಾಟ ಮಾಡಿದರೆ ಜನರು ನಮ್ಮ ಜೊತೆಗೆ ನಿಲ್ಲುತ್ತಾರೆ ಎಂದು ಹೇಳಿದರು.

ಜನರು ಬಹಳ ಎಚ್ಚರಿಕೆ ಹೊಂದಿದ್ದಾರೆ. ಕೇವಲ ಆಡಳಿತ ಪಕ್ಷಕ್ಕಷ್ಟೇ ಅಲ್ಲ. ವಿರೋಧ ಪಕ್ಷವನ್ನು ಪ್ರಶ್ನಿಸುತ್ತಾರೆ. ನಮ್ಮನ್ನೂ ಕೂಡ ಜನರು ಬಹಳ ಎಚ್ಚರಿಕೆಯಿಂದ ನೋಡುತ್ತಾರೆ. ಹೀಗಾಗಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು. ನಾನೂ ಕೂಡ ಹೆಚ್ಚಿನ ಸಮಯ ನೀಡಿ ಎಲ್ಲ ತಾಲೂಕುಗಳಿಗೆ ಬರುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ‌ಈ ಸರ್ಕಾರ ಜನರ ಪಾಲಿಗೆ ಸತ್ತಿದೆ. ರೈತರ ವಿಚಾರದಲ್ಲಿ ಸಿಎಂ ಅವರಿಗೆ ತಿರಸ್ಕಾರ ಮತ್ತು ತಾತ್ಸಾರ ಇದೆ. ರೈತರಿಗೆ ಬೀಜ ಗೊಬ್ಬರ ಕೊಡುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ. ಎರಡು ವರ್ಷದಿಂದ ಬೆಳೆ‌ನಾಶವಾಗಿದೆ‌ ಒಂದು ನೈಯಾಪೈಸೆ ಬಿಡುಗಡೆ ಮಾಡಿಲ್ಲ. ನಮ್ಮ ಕಾಲದಲ್ಲಿ ಕೇಂದ್ರ ಸರ್ಕಾರ ನೀಡುವ ಹಣದ ಎರಡು ಪಟ್ಟು ಪರಿಹಾರ ನೀಡಿದ್ದೇವು. ಸುಮಾರು 7 ಸಾವಿರ ಕೋಟಿ ಪರಿಹಾರ ನೀಡಿದ್ದೆವು ಎಂದರು.

ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ, ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ನಮ್ಮ ಗುರಿಯಾಗಿದೆ. "ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಪ್ರಸ್ತುತ ಕಾಂಗ್ರೆಸ್ ಆಡಳಿತವನ್ನು ನೋಡಿದರೆ, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗಿದೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com