Independence Day: ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ; ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ಶೋ!

36.5 ಲಕ್ಷ ಹೂವುಗಳಲ್ಲಿ ತಯಾರಿಸಲಾದ ವರ್ಣರಂಜಿತ ಫಲ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಚಾಲನೆ ನೀಡಲಿದ್ದಾರೆ. ನಾಳೆಯಿಂದ 18 ರವರೆಗೆ 12 ದಿನಗಳ ಕಾಲ ಪ್ರದರ್ಶನ ಇರಲಿದೆ.
Flower Show at Lalbagh
ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲ ಪುಷ್ಪ ಪ್ರದರ್ಶನ
Updated on

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ ಈ ಬಾರಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ.

36.5 ಲಕ್ಷ ಹೂವುಗಳಲ್ಲಿ ತಯಾರಿಸಲಾದ ವರ್ಣರಂಜಿತ ಫಲ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಚಾಲನೆ ನೀಡಲಿದ್ದಾರೆ. ನಾಳೆಯಿಂದ 18 ರವರೆಗೆ 12 ದಿನಗಳ ಕಾಲ ಪ್ರದರ್ಶನ ಇರಲಿದೆ.

ಈ ಬಾರಿ ಗಾಜಿನ ಮನೆಯ ಪ್ರಮುಖ ಆಕರ್ಷಣೆ ಕಿತ್ತೂರಿನ ಬೃಹತ್ ಹೂವಿನ ಕೋಟೆಯಾಗಿದ್ದು, ಗುಲಾಬಿ ಮತ್ತು ಸೇವಂತಿ ಹೂವುಗಳಿಂದ ತಯಾರಿಸಲಾಗಿದೆ. ಇದರ ಜೊತೆಗೆ ಕುದುರೆಯ ಮೇಲಿರುವ ರಾಣಿ ಚೆನ್ನಮ್ಮ ಮತ್ತು ಖಡ್ಗ ಹಿಡಿದು ನಿಂತಿರುವ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆಗಳು ಅನಾವರಣಗೊಳ್ಳಲಿವೆ. ಕಿತ್ತೂರಿನಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಸಮಾಧಿ ಸ್ಥಳವನ್ನು ಹೂಗಳನ್ನು ಬಳಸಿ ಮರುಸೃಷ್ಟಿಸಲಾಗಿದೆ.

ಕಿತ್ತೂರು ಸಂಸ್ಥಾನದ ಇತಿಹಾಸ, ಅದರ ಆಡಳಿತಗಾರರು, ಅವರು ಹೋರಾಟ, ಕೊಡುಗೆಗಳು ಹಾಗೂ ಅವನತಿ ತಿಳಿಸುವ 60 ದೊಡ್ಡ ಪ್ರದರ್ಶನ ಫಲಕಗಳನ್ನು ಸ್ಥಾಪಿಸಲಾಗುವುದು ಎಂದು ತೋಟಗಾರಿಕಾ ಜಂಟಿ ನಿರ್ದೇಶಕ (ಉದ್ಯಾನಗಳು ಮತ್ತು ಉದ್ಯಾನಗಳು) ಎಂ ಜಗದೀಶ ಹೇಳಿದರು.

ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ ಕೋಟೆ ವಿನ್ಯಾಸ ವರ್ಟಿಕಲ್ ಗಾರ್ಡನ್ ಮಾದರಿ, ರಾಷ್ಟ್ರ ಲಾಂಛನ ಹಾಗೂ ಜಾನಪದ ಕಲಾವಿದರ ಕಲಾಕೃತಿಗಳು ಇರಲಿವೆ. ಎಡಭಾಗದಲ್ಲಿ ಆಲದ ಮರ, ಅಶ್ವಾರೂಢ ಸಂಗೊಳ್ಳಿ ರಾಯಣ್ಣನ ಪ್ರತಿಮೆ, ರಾಯಣ್ಣ ಹುತಾತ್ಮರಾದ ಸನ್ನಿವೇಶ ಇರಲಿದೆ. ರಾಣಿ ಚೆನ್ನಮ್ಮ ಅವರ ಐಕ್ಯ ಸ್ಮಾರಕದ ಪುಷ್ಪ ಮಾದರಿ ಕಣ್ಮನ ಸೆಳೆಯಲಿದೆ. ಹಿಂಭಾಗದಲ್ಲಿ ರಾಣಿ ಅಬ್ಬಕ್ಕದೇವಿ, ಚೆನ್ನಾ ಭೈರಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ವೀರಾಮ್ಮಾಜಿ, ಒನಕೆ ಓಬವ್ವ ಅವರ ಪ್ರತಿಮೆಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದರು.

Flower Show at Lalbagh
ಲಾಲ್ ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ 2025: ಹೂವಿನಲ್ಲಿ 'ವಾಲ್ಮೀಕಿ ರಾಮಾಯಣ ಮಹಾಕಾವ್ಯ' ದರ್ಶನ!

ಪ್ರವೇಶ ಶುಲ್ಕ: ಫಲ ಪ್ರದರ್ಶನಕ್ಕೆ ವಾರದ ದಿನಗಳಲ್ಲಿ ವಯಸ್ಕರಿಗೆ ರೂ. 80 ರೂ ಮತ್ತು ವಾರಾಂತ್ಯದಲ್ಲಿ 100 ರೂ. ಇರಲಿದೆ. 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ರೂ. 30 ರೂ. ಶುಲ್ಕ ಇರಲಿದೆ. ಮತ್ತು ಸಮವಸ್ತ್ರದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ದಿನಗಳಲ್ಲಿ ಉಚಿತ ಪ್ರವೇಶ ಇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com