ಲಾಲ್ ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ 2025: ಹೂವಿನಲ್ಲಿ 'ವಾಲ್ಮೀಕಿ ರಾಮಾಯಣ ಮಹಾಕಾವ್ಯ' ದರ್ಶನ!

ಬ್ಯಾಂಡ್‌ಸ್ಟ್ಯಾಂಡ್ ಮತ್ತು ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಸಂದರ್ಶಕರನ್ನು ಸೂಜಿಗಲ್ಲಿನಂತೆ ಸೆಳೆಯುವ ರೀತಿಯಲ್ಲಿ ಅಲಂಕರಿಸಲು ಲಾಲ್ ಬಾಗ್ ಆಡಳಿತ ಮಂಡಳಿ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಫಲಪುಷ್ಪ ಪ್ರದರ್ಶನಕ್ಕೆ ಸಸ್ಯಕಾಶಿ ಲಾಲ್ ಬಾಗ್ ಸಜ್ಜಾಗುತ್ತಿದೆ.

ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಜನವರಿ 16 ರಿಂದ 26 ರವರೆಗೆ 11 ದಿನಗಳ ಕಾಲ ಆಯೋಜಿಸುತ್ತಿದ್ದು, ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಜೀವನ ಆಧಾರಿತ ವಿಷಯ ಹಾಗೂ ರಾಮಾಯಣ ಮಹಾಕಾವ್ಯವನ್ನು ಆಕರ್ಷಕ ಪುಷ್ಪಗಳಲ್ಲಿ ಅರಳಿಸುವ ಬಗ್ಗೆ ತೀರ್ಮಾನಿಸಿದೆ.

ಲಾಲ್ ಬಾಗ್ ಗೆ ಈ ಬಾರಿ ಭೇಟಿ ನೀಡುವ ಪ್ರವಾಸಿಗರು, ಬೆಂಗಳೂರಿನ ಜನತೆಯನ್ನು ಸೆಳೆಯಲು ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಹೂವಿನ ಪ್ರತಿಕೃತಿ ಹಾಗೂ ರಾಮಾಯಾಣ ಮಹಾಕಾವ್ಯದ ಪ್ರಮುಖ ಘಟನೆಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಮೂಡಿಬರಲಿದೆ. ಹೂ ಅಲಂಕಾರಕ್ಕಾಗಿ ದೇಶ ವಿದೇಶಗಳಿಂದ ಹೂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

2025ರ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯ ಆಚೆಗೆ, ಹೂವಿನ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ. ಬ್ಯಾಂಡ್‌ಸ್ಟ್ಯಾಂಡ್ ಮತ್ತು ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಸಂದರ್ಶಕರನ್ನು ಸೂಜಿಗಲ್ಲಿನಂತೆ ಸೆಳೆಯುವ ರೀತಿಯಲ್ಲಿ ಅಲಂಕರಿಸಲು ಲಾಲ್ ಬಾಗ್ ಆಡಳಿತ ಮಂಡಳಿ ನಿರ್ಧರಿಸಿದೆ.

ಬೋನ್ಸೈ ಮತ್ತು ಇಕಾಬಾನಾ ಪ್ರದರ್ಶನವು ಈ ಪ್ರದರ್ಶನಕ್ಕೆ ಕಲಾತ್ಮಕ ಸ್ಪರ್ಶವನ್ನು ನೀಡಲಿದೆ. ಹೂವಿನ ತಾಜಾತನವನ್ನು ಕಾಪಾಡಿಕೊಳ್ಳಲು, 6 ದಿನಗಳ ನಂತರ ಹೂವುಗಳನ್ನು ಬದಲಾಯಿಸಲಾಗುತ್ತದೆ.

ಸಂಗ್ರಹ ಚಿತ್ರ
ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್ ಮಾತನಾಡಿ, ವಾಲ್ಮೀಕಿ ಅವರ ಜೀವನದ ಘಟನೆಗಳನ್ನು ಹೂವಿನ ಮೂಲಕ ಮನಮೋಹಕವಾಗಿ ಪ್ರದರ್ಶಿಸಲು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ರಾಮಾಯಣ ಮಹಾಕಾವ್ಯದ ಪ್ರಮುಖ ಘಟನೆಗಳನ್ನು ಪುಷ್ಪಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುವುದು. ವಾಲ್ಮೀಕಿ ರಾಮಾಯಣ ರಚಿಸುತ್ತಿರುವ ಪ್ರತಿಮೆಯನ್ನು ಹೂವಿನಿಂದ ಅಲಂಕೃತಗೊಳಿಸಲಾಗುತ್ತದೆ. ಈ ಬಾರಿ ಒಟ್ಟಾರೆ ಫಲಪುಷ್ಪ ಪ್ರದರ್ಶನದಲ್ಲಿ 25 ಲಕ್ಷ ಹೂಗಳನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ 25 ಲಕ್ಷ ಹೂಗಳಲ್ಲಿ, ಹೂ ಕುಂಡದಲ್ಲಿ ಬೆಳೆಯುವ ಹಾಗೂ ಲಾಲ್ ಬಾಗ್ ನಲ್ಲಿ ಬೆಳೆಯುವ ಪ್ರದೇಶದಲ್ಲಿ ಬೆಳೆಯುವ ಹೂಗಳು, ಲಾಲ್ ಬಾಗ್ 25 ಸ್ಥಳಗಳಲ್ಲಿ ಬೆಳೆಯುವ 15 ಲಕ್ಷ ಹೂಗಳು ಹಾಗೂ 10 ಲಕ್ಷ ಪ್ರತ್ಯೇಕಿಸಿದ ಹೂಗಳಾದ ಗುಲಾಬಿ, ಸೇವಂತಿಗೆ ಸೇರಿದಂತೆ 10 ವಿವಿಧ ಜಾತಿಯ ಪುಷ್ಪಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಪ್ರದರ್ಶನಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜ್ಯದ ಹಲವು ಭಾಗಗಳಲ್ಲಿನ ತೋಟಗಾರಿಕಾ ಇಲಾಖೆಯ ಉದ್ಯಾನವನಗಳಲ್ಲಿನ ಹೂಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com