DCM ಡಿಕೆ ಶಿವಕುಮಾರ್ ಓಡಿಸಿದ ಸ್ಕೂಟರ್‌ ಮೇಲಿದೆ 34 ಕೇಸ್; 18,500 ರೂ ದಂಡ!

ಆ ವಾಹನವು ಡಿಕೆ ಶಿವಕುಮಾರ್ ಅವರಿಗೆ ಸೇರಿದ್ದಲ್ಲ ಮತ್ತು ತಪಾಸಣೆಯ ಸಮಯದಲ್ಲಿ ಮಾತ್ರ ಅವರು ಅದನ್ನು ಚಲಾಯಿಸುತ್ತಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
DK Shivakumar rides a two-wheeler
ಡಿ.ಕೆ ಶಿವಕುಮಾರ್ ಸ್ಕೂಟಿ ರೈಡ್
Updated on

ಬೆಂಗಳೂರು: ಆಗಸ್ಟ್ 5 ರಂದು ಹೆಬ್ಬಾಳ ಫ್ಲೈಓವರ್ ಲೂಪ್ ಪರಿಶೀಲನೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲೆ ಬರೋಬ್ಬರಿ 34 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿದ್ದು, ಒಟ್ಟು 18,500 ರೂ. ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವೆಬ್‌ಸೈಟ್ ತಿಳಿಸಿದೆ.

ಆದಾಗ್ಯೂ, ಆ ವಾಹನವು ಡಿಕೆ ಶಿವಕುಮಾರ್ ಅವರಿಗೆ ಸೇರಿದ್ದಲ್ಲ ಮತ್ತು ತಪಾಸಣೆಯ ಸಮಯದಲ್ಲಿ ಮಾತ್ರ ಅವರು ಅದನ್ನು ಚಲಾಯಿಸುತ್ತಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಂಚಾರ ಪೊಲೀಸ್ ವೆಬ್‌ಸೈಟ್ ಪ್ರಕಾರ, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಸವಾರಿ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಮತ್ತು ಪ್ರವೇಶ ನಿಷೇಧ ಅಥವಾ ಏಕಮುಖ ಸಂಚಾರದಲ್ಲಿ ಸಂಚರಿಸಿರುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳಿಗಾಗಿ ವಾಹನದ ಮೇಲೆ 34 ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರ ಡಿಕೆ ಶಿವಕುಮಾರ್ ತಮ್ಮ ಅಧಿಕೃತ ‘X' ಖಾತೆಯಲ್ಲಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಹೆಬ್ಬಾಳ ಫ್ಲೈಓವರ್ ಲೂಪ್ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದ್ದರು.

DK Shivakumar rides a two-wheeler
ಬೆಂಗಳೂರು: ಹೊಸ ಫ್ಲೈಓವರ್ ಮೇಲೆ ಬೈಕ್ ಓಡಿಸಿದ DCM ಡಿ.ಕೆ ಶಿವಕುಮಾರ್!

"ಉತ್ತಮ ಬೆಂಗಳೂರು" ನಿರ್ಮಿಸುವ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಅನುಗುಣವಾಗಿ ಈ ಕ್ರಮವು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಸುಗಮ ಮತ್ತು ವೇಗದ ಪ್ರಯಾಣವನ್ನು ಖಚಿತಪಡಿಸುತ್ತದೆ ಎಂದು ಡಿಸಿಎಂ ಹೇಳಿದ್ದರು.

ಏತನ್ಮಧ್ಯೆ, ಈ ಸಂಬಂಧ ಉಪಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್, ಬಾಕಿ ಇರುವ ದಂಡವನ್ನು ಮೊದಲು ವಸೂಲಿ ಮಾಡುವಂತೆ ಸಂಚಾರ ಪೊಲೀಸರನ್ನು ಒತ್ತಾಯಿಸಿದೆ.

"ಫೋಟೋ ಶೂಟ್‌ ಮಾಡಿಸಿಕೊಳ್ಳುವ ಮತ್ತು ಪ್ರಚಾರಕ್ಕಾಗಿ ರೀಲ್‌ಗಳನ್ನು ಮಾಡುವ ಬದಲು, ಮೊದಲು ಸಚಿವರಾಗಿ ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ" ಎಂದು ಎಕ್ಸ್ ನಲ್ಲಿ ಡಿಸಿಎಂ ವಿರುದ್ಧ ಜೆಡಿಎಸ್ ಕಿಡಿ ಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com