ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ನಗರದ ಹೊಸ ಮೇಲ್ಸೇತುವೆಯೊಂದರ ಮೇಲೆ ಬೈಕ್ ಓಡಿಸಿ ಗಮನ ಸೆಳೆದರು.
ಹೌದು. ಈ ಹಿಂದೆ ವಿಧಾನಸೌಧದ ಮುಂಭಾಗ ಸೈಕಲ್ ತುಳಿದು ಗಮನ ಸೆಳೆದಿದ್ದ ಡಿಕೆ ಶಿವಕುಮಾರ್, ಇಂದು ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಸ್ಕೂಟರ್ ಓಡಿಸುವ ಮೂಲಕ ಸಾರ್ವಜನಿಕರು ಹಾಗೂ ಅಧಿಕಾರಿಗಳ ಕುತೂಹಲದ ಕೇಂದ್ರ ಬಿಂದುವಾದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದದಿಂದ ಕೈಗೆತ್ತಿಕೊಂಡಿರುವ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದ ಡಿಕೆ ಶಿವಕುಮಾರ್, ಬಳಿಕ ಹೊಸ ಫ್ಲೈಓವರ್ ಮೇಲೆ ಬೈಕ್ ರೈಡ್ ಮಾಡಿ ಸಂಭ್ರಮಿಸಿದರು.
ಕಾರ್ಯಕರ್ತರೊಬ್ಬರ ಡಿಯೋ ಸ್ಕೂಟರ್ ನ್ನು ಪಡೆದ ಡಿಕೆ ಶಿವಕುಮಾರ್, ಹಿಂಬದಿ ಸೀಟಿನಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಕುಳಿರಿಸಿಕೊಂಡು ಹೊಸ ಫ್ಲೈಓವರ್ ಮೇಲೆ ಒಂದು ರೌಂಡ್ ಬಂದರು. ಈ ಮೂಲಕ ಕಾರ್ಯಕರ್ತರಲ್ಲಿಯೂ ಉತ್ಸಾಹ ಹೆಚ್ಚಿಸಿದರು. ಡಿಕೆ ಶಿವಕುಮಾರ್ ಪರ ಕಾರ್ಯಕರ್ತರು ಘೋಷಣೆ ಹರ್ಷೋದ್ಗಾರ ಮೊಳಗಿಸಿದರು.

ಇನ್ನು ಡಿಕೆಶಿ ಹಿಂದೆಯೇ ಶಾಸಕ ಎನ್‌ಎ ಹ್ಯಾರಿಸ್ ಕೂಡಾ ಬೈಕ್ ನಲ್ಲಿ ರೌಂಡ್ ಹೊಡೆದರು. ಡಿಕೆಶಿ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸಿದ್ರೆ, ಹೆಲ್ಮೆಟ್ ಹಾಕದೇ ಹ್ಯಾರಿಸ್ ಗಾಡಿ ಓಡಿಸಿದರು.
Advertisement