Dharmasthala mass burial case: ಹೊಸ ಸ್ಥಳಕ್ಕೆ ಸಾಕ್ಷಿ-ದೂರುದಾರನನ್ನು ಕರೆದೊಯ್ದ SIT; ಸ್ಪಾಟ್ 15 ರಲ್ಲಿ ತೀವ್ರ ಶೋಧ!

ಸಾಕ್ಷಿ-ದೂರುದಾರನೊಂದಿಗೆ ತನಿಖಾಧಿಕಾರಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಇದ್ದರು.
new burial site at Boliyaru in Dharmasthala village.
ಬೋಳಿಯಾರು ಎಂಬಲ್ಲಿನ 15ನೇ ಸ್ಥಳಕ್ಕೆ ತೆರಳಿದ ಎಸ್ಐಟಿ
Updated on

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಬೋಳಿಯಾರು ಎಂಬಲ್ಲಿ ಸ್ಪಾಟ್ 15 ಎಂದು ಗುರುತಿಸಲಾದ ಹೊಸ ಸ್ಥಳಕ್ಕೆ ಸಾಕ್ಷಿ-ದೂರುದಾರರನ್ನು ಕರೆದೊಯ್ದಿದೆ.

ಸಾಕ್ಷಿ-ದೂರುದಾರನೊಂದಿಗೆ ತನಿಖಾಧಿಕಾರಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಮತ್ತು ಪುತ್ತೂರು ವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಇದ್ದರು.

ಹೊಸ ಸ್ಥಳದಲ್ಲಿ ಪರಿಶೀಲನೆ ಮತ್ತು ಭೂಮಿಯನ್ನು ಅಗೆಯುವ ಕಾರ್ಯವನ್ನು ಪ್ರಾರಂಭಿಸುವುದಾಗಿ ಎಸ್‌ಐಟಿಯ ಮೂಲಗಳು ತಿಳಿಸಿದ್ದವು.

ಪ್ರಕರಣದಲ್ಲಿ ಸಾಕ್ಷಿ-ದೂರುದಾರರು ತೋರಿಸಿರುವ ಒಟ್ಟು ಸ್ಥಳಗಳ ಪೈಕಿ ಈಗಾಗಲೇ 13 ಸ್ಥಳಗಳಲ್ಲಿ ಶೋಧ ಕಾರ್ಯ ಪೂರ್ಣಗೊಂಡಿದ್ದು, ಜುಲೈ 31 ರಂದು 6ನೇ ಸ್ಥಳದಲ್ಲಿ ಮಾತ್ರ ಮಾನವ ಅವಶೇಷಗಳು ಕಂಡುಬಂದಿವೆ. ಆಗಸ್ಟ್ 5 ರಂದು, ಎಸ್‌ಐಟಿ 11 ಮತ್ತು 12ನೇ ಸ್ಥಳದಲ್ಲಿ ಅಗೆದಿತ್ತು. ಆದರೆ, ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

new burial site at Boliyaru in Dharmasthala village.
Dharmasthala mass burial case: ಮಾನವ ಅವಶೇಷಗಳು ಪತ್ತೆಯಾದ 14ನೇ ಸ್ಥಳದಲ್ಲಿ SIT ಶೋಧ ಆರಂಭ!

ಅಲ್ಲದೆ, ಸಾಕ್ಷಿ-ದೂರುದಾರ ಗುರುತಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ಇದೀಗ 15ನೇ ಸ್ಥಳ ಎಂದು ಗುರುತಿಸಿದ ಹೊಸ ಸ್ಥಳದಲ್ಲಿಯೂ ಶೋಧಕ್ಕೆ ಮುಂದಾಗಿದೆ.

new burial site at Boliyaru in Dharmasthala village.
ಧರ್ಮಸ್ಥಳ ಪ್ರಕರಣ: ಜೀವ ಬೆದರಿಕೆಯಿದೆ, ಗನ್ ಮ್ಯಾನ್-ಭದ್ರತೆ ಒದಗಿಸಿ; SIT ಗೆ ದೂರುದಾರ ವ್ಯಕ್ತಿ ಮನವಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com