ರಾಜ್ಯದಲ್ಲಿ ಹದಿಹರೆಯದ ಗರ್ಭಧಾರಣೆ ಹೆಚ್ಚಳಕ್ಕೆ ಸಾಮಾಜಿಕ ಮಾಧ್ಯಮಗಳೇ ಕಾರಣ: ಲಕ್ಷ್ಮಿ ಹೆಬ್ಬಾಳ್ಕರ್

ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಅತಿಯಾಗಿ ಬಳಸುವುದರಿಂದ ಮತ್ತು ಎಳೆಯ ವಯಸ್ಸಿನಲ್ಲಿಯೇ ಪ್ರೀತಿಯಲ್ಲಿ ಬೀಳುವ ಪ್ರವೃತ್ತಿಯಿಂದಾಗಿ ಈ ಹೆಚ್ಚಳವಾಗಿದೆ.
Laxmi hebbalkar
ಲಕ್ಷ್ಮಿ ಹೆಬ್ಬಾಳ್ಕರ್
Updated on

ಬೆಂಗಳೂರು: ರಾಜ್ಯದಲ್ಲಿ ಹದಿಹರೆಯದ ಗರ್ಭಧಾರಣೆಯ ಸಂಖ್ಯೆ ಹೆಚ್ಚಾಗಲು ಸಾಮಾಜಿಕ ಮಾಧ್ಯಮಗಳೇ ಕಾರಣ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 1,799 ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಗರ್ಭಧಾರಣೆಯ ವರದಿಯಾಗಿದೆ ಮತ್ತು ಇದಕ್ಕೆ ಸಾಮಾಜಿಕ ಮಾಧ್ಯಮ ಒಂದು ಪ್ರಮುಖ ಕಾರಣ ಎಂದು ಹೇಳಿದರು.

ಒಟ್ಟಾರೆಯಾಗಿ, 2022-23ರಲ್ಲಿ 405, 2023-24ರಲ್ಲಿ 709 ಮತ್ತು 2024-25ರಲ್ಲಿ 685 ಪ್ರಕರಣಗಳು ವರದಿಯಾಗಿವೆ. ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಅತಿಯಾಗಿ ಬಳಸುವುದರಿಂದ ಮತ್ತು ಎಳೆಯ ವಯಸ್ಸಿನಲ್ಲಿಯೇ ಪ್ರೀತಿಯಲ್ಲಿ ಬೀಳುವ ಪ್ರವೃತ್ತಿಯಿಂದಾಗಿ ಈ ಹೆಚ್ಚಳವಾಗಿದೆ.

ಕೆಲವು ಸಮುದಾಯ ಮತ್ತು ಪಂಗಡಗಳಲ್ಲಿ ಆಚರಣೆಯಲ್ಲಿರುವ ಸಾಮಾಜಿಕ ಪದ್ಧತಿಗಳಿಂದಾಗಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಇದರಿಂದಾಗಿ ಬಾಲಗರ್ಭಿಣಿಯರ ಸಂಖ್ಯೆ ಹೆಬ್ಬಾಗುತ್ತಿದೆ, ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.

ಜೆಡಿಎಸ್ ಶಾಸಕ ಸುರೇಶ್ ಬಾಬು ರಾಜ್ಯ ಸರ್ಕಾರವು ಸಾಮಾಜಿಕ ಮಾಧ್ಯಮದ ಮೇಲೆ ಸ್ವಲ್ಪ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಿದರು. ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವಾಗ ಅನೇಕ ಬಾರಿ ಅಹಿತಕರ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣವನ್ನು ನೀಡಬೇಕು ಎಂದು ಅವರು ಹೇಳಿದರು.

Laxmi hebbalkar
ರಾಹುಲ್ ಗಾಂಧಿ ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು: ಲಕ್ಷ್ಮಿ ಹೆಬ್ಬಾಳ್ಕರ್

ಕಳೆದ 10 ತಿಂಗಳಲ್ಲಿ 26,000 ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದಾರೆ , ಈ ಸಂಖ್ಯೆ ಆತಂಕಕಾರಿಯಾಗಿ ಕಾಣುತ್ತಿದೆ, ಆದರೆ ಅದು ಸರಿಯೇ ಎಂದು ತನಗೆ ತಿಳಿದಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು. ಆದರೆ ಅನೇಕ ಪ್ರಕರಣಗಳು ವರದಿಯಾಗುವುದಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ 900 ಕ್ಕೂ ಹೆಚ್ಚು ಬಾಲಕಿಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಅವರು ಆರೋಪಿಸಿದರು.

ಹದಿಹರೆಯದ ಗರ್ಭಧಾರಣೆಯು ಹೆಚ್ಚಾಗಲು ಸಾಮಾಜಿಕ ಮಾಧ್ಯಮವು ಒಂದು ಪ್ರಮುಖ ಕಾರಣ ಎಂದು ಮಕ್ಕಳ ಹಕ್ಕುಗಳ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ಎನ್‌ವಿ, ಒಪ್ಪಿಕೊಂಡರು. ಇಂಟರ್ನೆಟ್ ಪ್ರತಿಯೊಂದು ಹಳ್ಳಿಗೂ ವ್ಯಾಪಿಸಿದೆ ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿದರು. ಕೆಲವು ಆತ್ಮಹತ್ಯೆಗಳು ಸಹ ಸಾಮಾಜಿಕ ಮಾಧ್ಯಮದ ಬಳಕೆಗೆ ಸಂಬಂಧಿಸಿವೆ ಎಂದು ಅವರು ಹೇಳಿದರು.

ಸ್ವಯಂ-ರಚಿತ ಪೋರ್ನ್ ಎಂದು ಕರೆಯಲ್ಪಡುವ ಒಂದು ವಿಷಯವಿದೆ, ಅಲ್ಲಿ ಒಬ್ಬ ಹುಡುಗ ಅಥವಾ ಪುರುಷ ಹುಡುಗಿಯೊಬ್ಬಳ ನಗ್ನ ಫೋಟೋಗಳನ್ನು ಕಳುಹಿಸಲು ಕೇಳುತ್ತಾನೆ, ಅದನ್ನು ಅವನು ತನ್ನ ಸ್ನೇಹಿತರಿಗೆ ಸೋರಿಕೆ ಮಾಡಬಹುದು.

Laxmi hebbalkar
2023 RCH ವರದಿ: ರಾಜ್ಯದಲ್ಲಿ 28,657 ಬಾಲಕಿಯರು ಪ್ರೆಗ್ನೆಂಟ್; ಕಾರ್ಯಪಡೆ ರಚನೆಗೆ ಸಿಎಂ ಸೂಚನೆ

ನಂತರ ಹುಡುಗಿಯನ್ನು ಲೈಂಗಿಕ ಅನುಕೂಲ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ. ಈ ಭಯಾನಕ ಪ್ರವೃತ್ತಿ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ, ಗ್ರಾಮೀಣ ಭಾಗಗಳಿಗೂ ಹರಡಿದೆ. ಯುವತಿಯರಿಗೆ ಇಂಟರ್ನೆಟ್‌ನ ಸುರಕ್ಷಿತ ಬಳಕೆಯನ್ನು ಒಳಗೊಂಡ ಜೀವನ ಕೌಶಲ್ಯ ತರಬೇತಿಯನ್ನು ನೀಡಬೇಕು ಎಂದು ಅವರು ಹೇಳಿದರು.

ಮಹಿಳೆಯರ ಸುರಕ್ಷತೆಗಾಗಿ ಸರ್ಕಾರವು ಪ್ರಮುಖ ನಗರಗಳಲ್ಲಿ ಅಕ್ಕ ಪಡೆ (ಅಕ್ಕ ಕಾರ್ಯಪಡೆ) ಪ್ರಾರಂಭಿಸಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು, ಅಲ್ಲಿ ಮಹಿಳಾ ಪೊಲೀಸರನ್ನು ಹೊಂದಿರುವ ವಾಹನವು ಕಾಲೇಜುಗಳು, ಮಾರುಕಟ್ಟೆಗಳು ಮತ್ತು ಇತರ ಸ್ಥಳಗಳ ಬಳಿ ಗಸ್ತು ತಿರುಗುತ್ತದೆ.

ಆಗಸ್ಟ್ 15 ರಿಂದ, ಈ ಪಡೆಗಳನ್ನು ಮೈಸೂರು, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ಈ ವಾಹನದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ಇರುತ್ತಾರೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com