
ಬೆಂಗಳೂರು: ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದಂತೆ ಗೋಚರಿಸುತ್ತಿದೆ. ಈ ಮಧ್ಯೆ ದೂರದಾರ ತೋರಿಸಿದ ಜಾಗಗಳಲ್ಲಿ ಅಸ್ಥಿಪಂಜರ ಸಿಗುತ್ತಿಲ್ಲ. ಇದರ ನಡುವೆ ಧರ್ಮಸ್ಥಳದ ವಿರುದ್ಧ ಬೇಕಂತಲೆ ಷಡ್ಯಂತ್ರ ನಡೆಸಿದೆ ಎಂದು ಭಕ್ತರು ಕೋಪಗೊಳ್ಳುತ್ತಿರುವ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಅವರು, ವಿಧಾನಸಭೆಯಲ್ಲಿ ಮಾತನಾಡಿ, ಇದೊಂದು ಖಾಲಿ ಡಬ್ಬ ಏನು ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಹಳ ಷಡ್ಯಂತ್ರ ನಡೆದಿದೆ. ಯಾರೂ ಷಡ್ಯಂತ್ರ ಮಾಡಿದ್ದಾರೆ ಎಂದು ಈಗ ನಾನು ಹೇಳಲ್ಲ. ಬಹಳ ಯೋಜನೆ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ. ಯಾರನ್ನೋ ತೇಜೋವಧೆ ಮಾಡಿ ನೂರಾರು ವರ್ಷದಿಂದ ಬಂದ ಪರಂಪರೆಯನ್ನು ಹಾಳು ಮಾಡಲು ಹೊರಟಿದ್ದಾರೆ. ದೂರದಾರನೊಬ್ಬ ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ ತನಿಖೆ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇನ್ನು ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ದೂರುದಾರ ಆರೋಪಿಸಿರುವುದರಿಂದ ಎಸ್ಐಟಿ ತಂಡ ಇಂದು ಸಹ ಉತ್ಖನನ ನಡೆಸುತ್ತಿದೆ. ಸ್ಥಳ ಸಂಖ್ಯೆ 13ರಲ್ಲಿ ನೂರಾರು ಶವ ಹೂತಿದ್ದಾಗಿ ದೂರದಾರ ಹೇಳಿದ್ದ ಆದರೆ ಎರಡು ದಿನಗಳ ಕಾಲ ನಡೆದ ಉತ್ಖನನ ವೇಳೆ ಯಾವುದೇ ರೀತಿಯ ಮಾವನ ಮೂಳೆಗಳು ಪತ್ತೆಯಾಗಿರಲಿಲ್ಲ. ಇಂದು ಸಾಕ್ಷಿದಾರ ಕನ್ಯಾಡಿ ಬಳಿ ಹೊಸ ಜಾಗವನ್ನು ತೋರಿಸಿದ್ದು, ಅಲ್ಲಿಯೂ ಎಸ್ ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನ ಕಾರ್ಯ ನಡೆಸುತ್ತಿದ್ದಾರೆ.
Advertisement